Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!

ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!

ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಭಾರೀ ಅನಾಹುತ ಸಂಭವಿಸಿದೆ.. ಘಟಪ್ರಭಾ ನದಿಯಲ್ಲಿ ಮುಳುಗಿ ಮುಂಡಗೋಡ ತಾಲೂಕಿನ ನಾಲ್ವರು ಯುವಕರು ದಾರುಣ ಸಾವು ಕಂಡಿದ್ದಾರೆ. ಇಬ್ಬರು ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ(19), ಅಜಯ್ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (19), ಆನಂದ್ ವಿಷ್ಣು ಕೋಕರೆ (20) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ರಾಮಚಂದ್ರ ವಿಷ್ಣು ಕೋಕರೆ, ವಿಠ್ಠಲ್ ಜಾನು ಕೋಕರೆ ನೀರಲ್ಲಿ ಮುಳುಗಿ...

Post
ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಂಕೋಲಾ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶೋಭಾ ಗೋಪಾಲ ನಾಯಕ (28) ಎಂಬಾಕೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ, ಮೃತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆ ಪತಿಯ ಜೊತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ...

Post
ಅಗಡಿಯ 10 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ, ಕಮಲ ಮುಡಿದ ಕಾಂಗ್ರೆಸ್ ಮುಖಂಡನ ಸಹೋದರ..!

ಅಗಡಿಯ 10 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ, ಕಮಲ ಮುಡಿದ ಕಾಂಗ್ರೆಸ್ ಮುಖಂಡನ ಸಹೋದರ..!

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸುಮಾರು ಹತ್ತಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಯಲ್ಲಾಪುರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಟಿ. ಪಾಟೀಲ್ ಸೇರಿದಂತೆ ಸಿದ್ದಪ್ಪ ಹಡಪದ್, ವಿವೇಕ್ ಹೆಬ್ಬಾರ್ ಕಾರ್ಯಕರ್ತರಿಗೆ ಬಿಜೆಪಿ ಶಾಲು ಹಾಕಿ ಬರಮಾಡಿಕೊಂಡರು. ಅಗಡಿ ಗ್ರಾಮದ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್ ರ ಸಹೋದರ ಸುನೀಲ್ ನಾಯ್ಕ್ ಸೇರಿದಂತೆ ಸುಮಾರು ಹತ್ತು ಜನ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ‌. ಇನ್ನು ಸಂಜು ನಾಯ್ಕ್, ಪ್ರಸನ್ನ ನಾಯ್ಕ್, ಮಾರುತಿ ವಾಲ್ಮೀಕಿ, ಶೇಖಪ್ಪ ಗಳಗಿ, ಗದಗಯ್ಯ...

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಳೆದು ತಂದಿದ್ದಾರೆ. ಟಿಬೇಟಿಯನ್ ಕ್ಯಾಂಪ್ ನಂಬರ್ 2 ರ ಕುಸೂರು ಕ್ರಾಸ್ ಬಳಿ ಗಾಂಜಾ ಸಾಗಾಟ ‌ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ 410 ಗ್ರಾಂ ಗಾಂಜಾ ಹಾಗೂ ಸ್ಕೂಟಿ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ‌ ಮಾಡಿರೋ ಮುಂಡಗೋಡ ಪೊಲೀಸರು, ಮುಂಡಗೋಡ ಯಲ್ಲಾಪುರ ರಸ್ತೆಯ ಬ್ಲ್ಯೂ ಹಿಲ್ ಹೊಟೇಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಉತ್ತರ ಪ್ರದೇಶ ಮೂಲದ ಆರ್ಯನ್ ಅಲಿಯಾಸ್...

Post
ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ಹನುಮ‌ಭಕ್ತರಿಂದ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಇಲ್ಲಿನ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಬೆಳಗಿನಿಂದಲೂ ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ರಾಘು ಕಾಂಬಳೆ, ನವೀನ ಸವಣೂರು, ಸೋಮಶೇಖರ್, ದಿಲಿಪ್, ಕಿರಣ್ ಖಾರದ್, ಮಹದೇವ್ ಕಾಂಬ್ಳೆ, ಸುನಿಲ್ ಕೊಟಗುಣಸಿ, ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post
ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಹನುಮ ಜಯಂತಿಯ ಸಂಭ್ರಮ ಜೋರಾಗಿತ್ತು. ಇಲ್ಲಿನ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಓಣಿಯ ಹತ್ತಿರ ಇರೋ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಈ ವೇಳೆ ರವಿ ಗೌಡ ಪಾಟೀಲ್, ಫಣಿರಾಜ್ ಹದಳಗಿ, ಶೇಖರ್ ಲಮಾಣಿ, ಶಂಕರ್ ಲಮಾಣಿ, ರವಿ ಹಾವೇರಿ, ಮಂಜುನಾಥ್ ಹರಮಲ್ಕರ್, ಅಯ್ಯಪ್ಪ ಭಜಂತ್ರಿ, ಲಕ್ಷ್ಮಣ ಲಮಾಣಿ, ಉದಯ್ ಪಾಲೇಕರ್, ಬಸವರಾಜ ತನಿಕೆದಾರ್, ಶಂಭು ನಿಡಗುಂದಿ. ಪ್ರಕಾಶ ಬಡಿಗೇರ್, ಮಂಜು...

Post
ಯಲ್ಲಾಪುರ ಕ್ಷೇತ್ರ: ವಿ.ಎಸ್. ಪಾಟೀಲ್ “ಕೈ” ಅಭ್ಯರ್ಥಿ ಫಿಕ್ಸ್,  ರೆಡಿಯಾಯ್ತು ಅಖಾಡ..! ಒಳ ಮಸಲತ್ತುಗಳ “ಆಟ”ದಲ್ಲಿ ಗೆಲುವು ಯಾರ ಕಡೆ..?

ಯಲ್ಲಾಪುರ ಕ್ಷೇತ್ರ: ವಿ.ಎಸ್. ಪಾಟೀಲ್ “ಕೈ” ಅಭ್ಯರ್ಥಿ ಫಿಕ್ಸ್, ರೆಡಿಯಾಯ್ತು ಅಖಾಡ..! ಒಳ ಮಸಲತ್ತುಗಳ “ಆಟ”ದಲ್ಲಿ ಗೆಲುವು ಯಾರ ಕಡೆ..?

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ನಿರೀಕ್ಷಿಸಿದಂತೆ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಕನ್ಪರ್ಮ್ ಆಗಿದೆ. ಈ ಮೂಲಕ ಕ್ಷೇತ್ರದಲ್ಲಿ ಸುಳಿದಾಡುತ್ತಿದ್ದ ಹಲವು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ‌. ಕಾಂಗ್ರೆಸ್ ಕೊನೆಗೂ “ನಮ್ಮ ಅಭ್ಯರ್ಥಿ” ಇವರೇ ಅಂತಾ ಅಧಿಕೃತ ಮುದ್ರೆ ಒತ್ತಿದೆ. ಇದ್ರ ಜೊತೆ ಯಲ್ಲಾಪುರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗುವತ್ತ ಮತ್ತೆ ಹೊರಳಿಕೊಂಡಿದೆ. ಮೂರು ತಿಂಗಳ ಹಿಂದೆಯೇ..! ಅಸಲಿಗೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿ.ಎಸ್.ಪಾಟೀಲರಿಗೆ ಅವತ್ತೇ ಇಂತಹದ್ದೊಂದು “ಗ್ಯಾರಂಟಿ” ನೀಡಲಾಗಿತ್ತಂತೆ. ನೀವು...

Post
ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ‌. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದಿದ್ದಾರೆ‌. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರೋ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮುಂಡಗೋಡ ನೆಹರು ನಗರದ ನಿವಾಸಿ ಹಸನ ಸಾಬ್ ಮೋದಿನ್ ಸಾಬ್ ಫರೀದ್ ಎಂಬುವವರು ತಮ್ಮ ಸ್ಕೂಟಿಯಲ್ಲಿ ಹಣವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ,...

Post
ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ಮುಂಡಗೋಡ: ತಾಲೂಕಿನ ಬಹುತೇಕ 82 ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಿ ಈಗಾಗಲೇ ಪಹಣಿ ಪತ್ರಿಕೆಗಳಲ್ಲಿ ದಾಖಲಿಸಲಾಗಿದೆ. ಅಲ್ಲದೇ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದ್ದು, ಹೀಗಾಗಿ, ಸದ್ಯ ಸ್ಮಶಾನ ಭೂಮಿಗಾಗಿ ಕಾಯ್ದಿರಿಸಿದ ಭೂಮಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ಕೂಡಲೇ ತಹಶೀಲ್ದಾರ ಕಚೇರಿಗೆ ದೂರು ನೀಡುವಂತೆ ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ಮನವಿ ಮಾಡಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟು 94 ಗ್ರಾಮಗಳಿದ್ದು ಈ ಪೈಕಿ 12 ಜನವಸತಿ ಇಲ್ಲದ ಬೇಚರಾಕ ಗ್ರಾಮಗಳಿವೆ. ಬಾಕಿ ಉಳಿದ 82 ಗ್ರಾಮಗಳಲ್ಲಿ...

error: Content is protected !!