ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ಹನುಮ‌ಭಕ್ತರಿಂದ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಇಲ್ಲಿನ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಬೆಳಗಿನಿಂದಲೂ ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ವೇಳೆ ರಾಘು ಕಾಂಬಳೆ, ನವೀನ ಸವಣೂರು, ಸೋಮಶೇಖರ್, ದಿಲಿಪ್, ಕಿರಣ್ ಖಾರದ್, ಮಹದೇವ್ ಕಾಂಬ್ಳೆ, ಸುನಿಲ್ ಕೊಟಗುಣಸಿ, ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!