ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.

ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.