ಮುಂಡಗೋಡ: ತಾಲೂಕಿನ ಅಗಡಿ ಶ್ರೀ ಮೈಲಾರಲಿಂಗ ಸ್ವಾಮಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಕಾರಣೀಕ ಉತ್ಸವ ನಡೆಯಿತು. ಆದ್ರೆ ಈ ವರ್ಷದ ಕಾರಣೀಕ ಅಸ್ಪಷ್ಟವಾಗಿ ಕೇಳಿತು. ಕಾರಣೀಕದ ನುಡಿಗಳು ಯಾರಿಗೂ ಸ್ಪಷ್ಟವಾಗಿ ಕೇಳಲೇ ಇಲ್ಲದಿರುವುದು ಭಕ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ತಂಪಾಯಿತಲೇ ಪರಾಕ್..? “ರಾಜ್ಯ ತಂಪಾಯಿತಲೇ ಪರಾಕ್” ಇದು ಅಗಡಿಯಲ್ಲಿ ಇಂದು ಅಸ್ಪಷ್ಟವಾಗಿ ಕೇಳಿ ಬಂದ ಕಾರಣೀಕ ನುಡಿ. ಒಂದುವೇಳೆ ಇದೇ ಮೈಲಾರಲಿಂಗ ಸ್ವಾಮಿಯ ಕಾರಣೀಕವಾಗಿದ್ದರೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಅಲ್ಲದೆ, ರಾಜ್ಯದಲ್ಲಿ ಶಾಂತಿ...
Top Stories
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
Category: ದೈವ ದರ್ಶನ..
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಚೌಡಳ್ಳಿ ಮೈಲಾರಲಿಂಗನ ಕಾರಣೀಕ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ. ತಾತ್ಪರ್ಯವೇನು..? “ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ...
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!
ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಇಂದಿನಿಂದ ದೇವಿ ದರ್ಶನಕ್ಕೆ ಅವಕಾಶ..!
ಬೆಳಗಾವಿ: ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಇಂದಿನಿಂದ ಸಂಭ್ರಮ ಮತ್ತೆ ಶುರುವಾಗುತ್ತಿದೆ. ಬರೋಬ್ಬರಿ, ಒಂದೂವರೆ ವರ್ಷದ ನಂತರ ಭಕ್ತರ ದರ್ಶನಕ್ಕೆ ಯಲ್ಲಮ್ಮ ದೇವಸ್ಥಾನ ತೆರದುಕೊಳ್ಳುತ್ತಿದೆ. ಇಂದು ಮಂಗಳವಾರ ಬೆಳಿಗ್ಗೆ 6.30ಕ್ಕೆ ಶಾಸ್ತ್ರೋಕ್ತವಾಗಿ ದೇವಸ್ಥಾನ ಓಪನ್ ಮಾಡಿದ ಆಡಳಿತ ಮಂಡಳಿ, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಇಷ್ಟು ದಿನ, ಭಕ್ತರಿಲ್ಲದೇ ಭಣಗುಡುತ್ತಿದ್ದ ಏಳುಕೊಳ್ಳದಲ್ಲಿ ಭಕ್ತರ ಸಂಭ್ರಮ ಇಂದಿನಿಂದ ಕಳೆ ಕಟ್ಟಲಿದೆ. ಇನ್ನು, ಮಹಾರಾಷ್ಟ್ರ- ಕರ್ನಾಟಕ ಸೇರಿ ಹಲವು...
ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!
ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.
ನ್ಯಾಸರ್ಗಿ ಗ್ರಾಮದೇವಿಗೆ 108 ದಿನದ ಉಡಿತುಂಬುವ ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ಗ್ರಾಮದೇವಿ ದ್ಯಾಮವ್ವ ತಾಯಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. 108 ದಿನದ ಉಡಿತುಂಬುವ ಕಾರ್ಯಕ್ರಮವನ್ನು ಗ್ರಾಮಸ್ಥರು ಶೃದ್ದಾಪೂರ್ವಕವಾಗಿ ನೆರವೇರಿಸಿದ್ರು. ಈ ವೇಳೆ ದ್ಯಾಮವ್ವ ತಾಯಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬಲಾಯಿತು. ವಿಶೇಷವಾಗಿ ಪೂಜೆ ನೆರವೇರಿಸಿ ಪ್ರಸಾದ ಹಂಚಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಮುತ್ತೈದೆಯರು ಸೇರಿದಂತೆ ಹಲವರು ಭಾಗಿಯಾಗಿದ್ರು.
ಈ ಊರಲ್ಲಿ ಮೊಹರಂ ದೇವರಿಗೆ ಹನುಮಪ್ಪನ ಹೂವಿನ ಪ್ರಸಾಧ ಬೇಕೇ ಬೇಕು..!
ಕೊಪ್ಪಳ: ಆ ಒಂದು ಗ್ರಾಮದ ಮೊಹರಂ ಹಬ್ಬಕ್ಕೆ ಇಡೀ ರಾಜ್ಯದ ಕೆಲ ಜಿಲ್ಲೆಗಳು ಸಾಕ್ಷಿಯಾಗುತ್ತವೆ. ಆ ಒಂದು ದೃಶ್ಯವನ್ನು ಕಣ್ಣತುಂಬಿಕೊಳ್ಳಲು ಗ್ರಾಮದ ಜನರು ಕಾತುರದಿಂದ ಕಾಯುತ್ತಾರೆ. ಆ ಗ್ರಾಮದ ಹನುಮಪ್ಪ ಹೂವು ಕೊಟ್ಟರೆ ಪೀರ್ ದೇವರು ಹೊತ್ತ ದೈವಭಕ್ತ ದರ್ಶನ ಪಡೆದು ಮುಂದೆ ಸಾಗುತ್ತಾರೆ. ನಂತರವೇ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಹೌದು, ಹೀಗೆ ಪೀರ್ ದೇವರು ಹೊತ್ತ ಮುಸ್ಲಿಂ ದೈವ ಭಕ್ತನಿಗೆ, ಹೂವು ಕೊಟ್ಟು ಆಶೀರ್ವಾದ ಮಾಡುತ್ತಿರುವ ಹನುಮಪ್ಪ ದೇವರು. ದೇವಸ್ಥಾನದೊಳಗೆ ಬಂದು ಭಕ್ತಿಪೂರಕವಾಗಿ ಹನುಮನ ದರ್ಶನ...
ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ಇಂದಿನಿಂದ ಭಕ್ತರಿಗೆ ದರ್ಶನ ಭಾಗ್ಯ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ದೇವಸ್ಥಾನಗಳ ಬಾಗಿಲು ಓಪನ್ ಆಗ್ತಿವೆ. ಕಳೆದ ಎರಡು ತಿಂಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಶಿರಸಿ ಮಾರಿಕಾಂಬಾ, ಗೋಕರ್ಣ ಮಹಾಬಲೇಶ್ವರ, ಮುರ್ಡೆಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ ಭಾಗ್ಯ ಸಿಗಲಿದೆ. ಜಿಲ್ಲೆಯಲ್ಲಿ ಇಂದು ಓಪನ್ ಆದ ದೇಗುಲಗಳನ್ನು ದರ್ಶನ ಮಡ್ಕೊಬೇಕಾ..?...
ಹೇಗಿದೆ ಗೊತ್ತಾ ಸರ್ಪ ಸಲ್ಲಾಪ..? ಇದು ನಾಗಲೋಕದ ಅಚ್ಚರಿ..!!
ಇದು ನಾಗಲೋಕದ ಅಚ್ಚರಿ..! ಸರ್ಪ ಸಲ್ಲಾಪದ ಅಪರೂಪದ ಕ್ಷಣಗಳು.. ಅಲ್ಲಿ ಯಾರ ಹಂಗೂ ಇಲ್ಲ..ಯಾವ ಭಯಗಳೂ ಸುಳಿಯೋಕೆ ಛಾನ್ಸೇ ಇಲ್ಲ.. ಯಾಕಂದ್ರೆ ಅದು ಆ ಎರಡು ನಾಗಗಳ ಏಕಾಂತ ಸಮಯ.. ಅಕ್ಷರಶಃ ರಸಮಯ ಗಳಿಗೆಗಳು.. ಯಸ್, ನಿಡಗುಂದಿ ತಾಲೂಕಿನ ನಿಡಗುಂದಿ ಪುನರ್ವಸತಿ ಕೇಂದ್ರದ ಬಳಿ ಎರಡು ಸರ್ಪಗಳು ಸಮ್ಮಿಲನಗೊಂಡಿದ್ದವು. ಇಲ್ಲಿನ ಕಾಲುವೆ ಬಳಿ ಇಂದು ಸಾಯಂಕಾಲ 3ರಿಂದ 4 ಗಂಟೆಯ ವರೆಗೆ ಅಂದ್ರೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಹಾವುಗಳು ಹೀಗೆ ಸಮ್ಮಿಲನಗೊಂಡಿದ್ದವು. ಸರ್ಪಗಳ ಮಿಲನ...
ಮಂತ್ರಾಲಯ “ಗುರುರಾಯರ” ದರ್ಶನಕ್ಕೆ ಅವಕಾಶ: 52 ದಿನಗಳ ಬಳಿಕ ತೆರೆದ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ..!
ಮಂತ್ರಾಲಯ: ಕೊರೋನಾ ಮಹಾಮಾರಿಯಿಂದಾಗಿ ಇಷ್ಟೂ ದಿನ ಬಂದ್ ಆಗಿದ್ದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಇಂದು ತೆರೆದಿದೆ. ದೇಶದ ಮೂಲೆ ಮೂಲೆಯಲ್ಲೂ ರಾಯರಿಗೆ ಕೋಟ್ಯಂತರ ಭಕ್ತರಿದ್ದು, ಸದ್ಯ ರಾಯರ ದರ್ಶನಕ್ಕೆ ಅವಕಾಶ ಸಿಕ್ಕಿದ್ದೇ ತಡ ಮಂತ್ರಾಲಯದ ಕಡೆ ಭಕ್ತರ ದಂಡೇ ಆಗಮಿಸುತ್ತಿದೆ. ಲಾಕ್ ಡೌನ್ ಎಫೆಕ್ಟ್.. ಕೊರೊನಾ ಮಹಾಮಾರಿಯಿಂದಾಗಿ ತಲ್ಲಣಿಸಿದ್ದ ಕ್ಷೇತ್ರಗಳು ಈಗ ಚೇತರಿಸಿಕೊಳ್ಳುತ್ತಿವೆ. ಪ್ರಮುಖವಾಗಿ ಆಂಧ್ರಪ್ರದೇಶದಲ್ಲಿ ಮಿತಿಮೀರಿದ್ದ ಕೋವಿಡ್ ನಿಂದಾಗಿ ಅಲ್ಲಿಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಹೇರಲಾಗಿತ್ತು. ಇದ್ರಿಂದಾಗಿ ಮೇ1 ನೇ ತಾರೀಖಿನಿಂದ...