ಬೆಳಗಾವಿ: ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಇಂದಿನಿಂದ ಸಂಭ್ರಮ ಮತ್ತೆ ಶುರುವಾಗುತ್ತಿದೆ. ಬರೋಬ್ಬರಿ, ಒಂದೂವರೆ ವರ್ಷದ ನಂತರ ಭಕ್ತರ ದರ್ಶನಕ್ಕೆ ಯಲ್ಲಮ್ಮ ದೇವಸ್ಥಾನ ತೆರದುಕೊಳ್ಳುತ್ತಿದೆ.
ಇಂದು ಮಂಗಳವಾರ ಬೆಳಿಗ್ಗೆ 6.30ಕ್ಕೆ ಶಾಸ್ತ್ರೋಕ್ತವಾಗಿ ದೇವಸ್ಥಾನ ಓಪನ್ ಮಾಡಿದ ಆಡಳಿತ ಮಂಡಳಿ, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಇಷ್ಟು ದಿನ, ಭಕ್ತರಿಲ್ಲದೇ ಭಣಗುಡುತ್ತಿದ್ದ ಏಳುಕೊಳ್ಳದಲ್ಲಿ ಭಕ್ತರ ಸಂಭ್ರಮ ಇಂದಿನಿಂದ ಕಳೆ ಕಟ್ಟಲಿದೆ.
ಇನ್ನು, ಮಹಾರಾಷ್ಟ್ರ- ಕರ್ನಾಟಕ ಸೇರಿ ಹಲವು ಕಡೆಗಳಿಂದ ಭಕ್ತರ ದಂಡೇ ಆಗಮಿಸುವ ಸಾಧ್ಯತೆ ಇದ್ದು, ಕೊರೊನಾ ನಿಯಮದಂತೆ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ನಿಯಂತ್ರಣಕ್ಕೆ ಪೋಲಿಸ್ ಬಂದೋಬಸ್ತ್ ಮಾಡಿರುವ ಆಡಳಿತ ಮಂಡಳಿ ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದೆ.