ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ.

ತಾತ್ಪರ್ಯವೇನು..?
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು‌. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ  ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ ಪ್ರಕಾರ, ಈ ವರ್ಷ ಬರಪೂರ ಮಳೆ ಬಂದು, ಬೂಮಿ ತಾಯಿಯ ಉಡಿ ತುಂಬುವುದು ಅಂತಾ ಕಾರಣೀಕ ಹೊರಬಿದ್ದಿದ್ದು ಸಂತೃಪ್ತಿದಾಯಕ ಮಳೆ ಹಾಗೂ ಸಮೃದ್ಧ ಬೆಳೆಯ ಭವಿಷ್ಯ ನುಡಿಯಲಾಗಿದೆ.

error: Content is protected !!