ಶಿರಸಿ ಮಾರಿಕಾಂಬೆ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ..!


ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ಇ‌ಂದು ದಂಪತಿ ಸಮೇತ ಭೇಟಿ ನೀಡಿದ್ರು.ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಪತ್ನಿ ಗೀತಾ ಶಿವರಾಜ್ ಕುಮಾರ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆಯೇ ಶಿರಸಿಗೆ ಆಗಮಿಸಿದ್ದಾರೆ. ಇಂದು ಶುಕ್ರವಾರದ ಹಿನ್ನೆಲೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಸಿದ್ದಾರೆ.

error: Content is protected !!