ಇದು ನಾಗಲೋಕದ ಅಚ್ಚರಿ..! ಸರ್ಪ ಸಲ್ಲಾಪದ ಅಪರೂಪದ ಕ್ಷಣಗಳು.. ಅಲ್ಲಿ ಯಾರ ಹಂಗೂ ಇಲ್ಲ..ಯಾವ ಭಯಗಳೂ ಸುಳಿಯೋಕೆ ಛಾನ್ಸೇ ಇಲ್ಲ.. ಯಾಕಂದ್ರೆ ಅದು ಆ ಎರಡು ನಾಗಗಳ ಏಕಾಂತ ಸಮಯ.. ಅಕ್ಷರಶಃ ರಸಮಯ ಗಳಿಗೆಗಳು..
ಯಸ್, ನಿಡಗುಂದಿ ತಾಲೂಕಿನ ನಿಡಗುಂದಿ ಪುನರ್ವಸತಿ ಕೇಂದ್ರದ ಬಳಿ ಎರಡು ಸರ್ಪಗಳು ಸಮ್ಮಿಲನಗೊಂಡಿದ್ದವು. ಇಲ್ಲಿನ ಕಾಲುವೆ ಬಳಿ ಇಂದು ಸಾಯಂಕಾಲ 3ರಿಂದ 4 ಗಂಟೆಯ ವರೆಗೆ ಅಂದ್ರೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಹಾವುಗಳು ಹೀಗೆ ಸಮ್ಮಿಲನಗೊಂಡಿದ್ದವು. ಸರ್ಪಗಳ ಮಿಲನ ಮಹೋತ್ಸವವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಪರೂಪದ ಈ ದೃಶ್ಯಗಳು ನೋಡುಗರಿಗೆ ರೋಮಾಂಚಕಗೊಳಿಸಿವೆ.