Home ಏಕ್ ದಂ ಫ್ರೆಶ್

Category: ಏಕ್ ದಂ ಫ್ರೆಶ್

Post
ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ: ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಣೆ..!!

ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ: ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಣೆ..!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಮಾರ್ಗಸೂಚಿ‌ ಒಂದು ವಾರಗಳ ಕಾಲ ಮುಂದುವರಿಯಲಿದೆ‌. ಹೋಟೆಲ್ ಗಳಲ್ಲಿ ಸಂಜೆಯ ವರೆಗೂ ಪಾರ್ಸೆಲ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಲಾಕ್ ಡೌನ್ ಘೋಷಣೆಯ ಜೊತೆಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ‌ ಮಾಡಿದ್ದಾರೆ.

Post
ರಾಜ್ಯದಲ್ಲಿ ಮುಂದುವರಿಯತ್ತಾ ಲಾಕ್ ಡೌನ್..? ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ..?

ರಾಜ್ಯದಲ್ಲಿ ಮುಂದುವರಿಯತ್ತಾ ಲಾಕ್ ಡೌನ್..? ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ..?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದಿದೆ. ನಿತ್ಯ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯದ ಬಹುತೇಕ ಗ್ರಾಮೀಣ ಭಾಗಕ್ಕೂ ಸೋಂಕು ಹೊಕ್ಕು ಹಿಂಡಿ ಹಿಪ್ಪೆ ಮಾಡಿದೆ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗುವರೆಗೂ ಲಾಕ್ ಡೌನ್ ಸೂಕ್ತ ಅಂತಾ ತಜ್ಞರ ಸಮಿತಿ ಸಲಹೆ ನೀಡಿದೆ. ಅಂದಹಾಗೆ, ಈಗ ರಾಜ್ಯ ಸರ್ಕಾರ ಹಲವು ನಿಯಮಾವಳಿಗಳ ಜೊತೆ ವಿಧಿಸಿರುವ ಸೆಮಿ ಲಾಕ್ ಡೌನ್...

Post

ದ್ವಿತೀಯ ಪಿಯುಸಿ ಪರೀಕ್ಷೆ, ನಡೆಯತ್ತಾ..? ರದ್ದಾಗತ್ತಾ..? ಸುಪ್ರೀಂ ನಲ್ಲಿ ಇಂದು ಭವಿಷ್ಯ..!!

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದೆ. ಈ ನಡುವಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಾ, ಇಲ್ಲಾ ರದ್ದಾಗುತ್ತಾ ಅನ್ನೋ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಂದು ಸುಪ್ರೀಂ ಕೋರ್ಟ್ ಪರೀಕ್ಷೆಯ ಭವಿಷ್ಯ ನಿರ್ಧಾರ ಮಾಡಲಿದೆ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಅನ್ನೋ ಕುರಿತು ಕೇಂದ್ರ ಸರಕಾರ ಕಳೆದ ವಾರ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ರಾಜ್ಯಗಳ...

Post
10 ವರ್ಷದಿಂದ ನಾಪತ್ತೆ, ಇದ್ದಕ್ಕಿದ್ದಂತೆ ಪತ್ತೆ..! ಕೊರೋನಾ ಮಾಡಿದ ಪವಾಡ..!!

10 ವರ್ಷದಿಂದ ನಾಪತ್ತೆ, ಇದ್ದಕ್ಕಿದ್ದಂತೆ ಪತ್ತೆ..! ಕೊರೋನಾ ಮಾಡಿದ ಪವಾಡ..!!

ಕೊಪ್ಪಳ- ಹತ್ತು ವರ್ಷಗಳ ‌ಹಿಂದೆ ಕಾಣೆಯಾಗಿದ್ದ ಮಗ ಇನ್ನಿಲ್ಲ ಎನ್ನುವ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದು ಕಂಡು ಇಡೀ ಗ್ರಾಮದ ಜನರಿಗೆ ಅಚ್ಚರಿಯಾಗಿದೆ. ಹೌದು! ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ದೇವಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿ ಸಂಪರ್ಕದಲ್ಲೇ ಇರಲಿಲ್ಲ. ಕೊರೊನಾ ಭೀತಿಯಿಂದ ಕಂಪನಿ ಒಂದರಲ್ಲಿ ಕಾರ್ಮಿಕನಾಗಿರುವ ದೇವರಾಜ ಪಕ್ಕದ...

Post

4 ದಿನದ ಹಿಂದೆಯಷ್ಟೇ ಮದುವೆಯಾದ ನವ ವಿವಾಹಿತೆ ಕೊರೋನಾಗೆ ಬಲಿ..!

ಶಿವಮೊಗ್ಗ: ಕಳೆದ ನಾಲ್ಕು ದಿನದ ಹಿಂದೆ‌ ಮದುವೆಯಾಗಿದ್ದ ನವ ವಿವಾಹಿತೆ ಕೊರೊನಾಗೆ ಬಲಿಯಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿ ನಡೆದಿದೆ. ಪೂಜಾ ಎಂಬುವವರೇ ಕೊರೋನಾಗೆ ಬಲಿಯಾದ ನವವಧು ಆಗಿದ್ದಾರೆ.. ಪೂಜಾ ಅವರ ವಿವಾಹ ಕಳೆದ ನಾಲ್ಕು ದಿನದ ಹಿಂದೆ ಅಂದರೆ ಮೇ 24 ರಂದು ಹರಿಗೆಯ ಮಹೇಶ್ ಅವರೊಂದಿಗೆ ನಡೆದಿತ್ತು. ಮದುವೆಯ ಮರು ದಿನದಿಂದಲೇ ಪೂಜಾಗೆ ಜ್ವರ ಕಾಣಿಸಿಕೊ‌ಂಡಿತ್ತು. ಆದರೆ ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಪೂಜಾಗೆ, ಇಂದು ಜ್ವರ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೂಜಾ...

Post

ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹಾವಳಿ: ಸವದತ್ತಿ ಎಲ್ಲಮ್ಮನ ದೇಗುಲ ಬಂದ್, ಇನ್ಮುಂದೆ ಭಕ್ತರಿಗಿಲ್ಲ ದರ್ಶನ ಭಾಗ್ಯ

ಬೆಳಗಾವಿ- ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.. ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.. ಬರೋಬ್ಬರಿ 11ತಿಂಗಳ ನಂತರ, ಕಳೆದ ಫೆ.1 ರಂದು ಮತ್ತೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.. ಸದ್ಯ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ...

Post

ಪುಟ್ಟ ಮಗು ಬಿಟ್ಟು ಹೋದ್ರಾ ಪೋಷಕರು..? ಹೆತ್ತಮ್ಮನಿಗಾಗಿ ಹಂಬಲಿಸುತ್ತಿದೆ ಕಂದಮ್ಮ.. ಅಕ್ಕಿ ಆಲೂರಿನಲ್ಲಿ ಮನಕಲಕುವ ಘಟನೆ

ಹಾನಗಲ್- ಅದೇನು ನಿಷ್ಕರುಣೆಯೋ ಗೊತ್ತಿಲ್ಲ, ಅಥವಾ ಪೋಷಕರ ನಿರ್ಲಕ್ಷವೋ ಗೊತ್ತಿಲ್ಲ.. ಹಾಲುಗಲ್ಲದ ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದಾರೆ.. ಇದು ನಡೆದದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ನಾಲ್ಕರ ಕ್ರಾಸ್ ಬಳಿ.. ಮುದ್ದು ಕಂದನನ್ನು ಒಬ್ಬಂಟಿಯಾಗಿ ಹಡೆದ ತಾಯಿಯೊಬ್ಬಳು ಬಿಟ್ಟು ಹೋದ ಮನಕಲುಕುವ ಘಟನೆ ಇದು.. ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವನ್ನು ಇಲ್ಲಿನ ಡಾಬಾ ವೊಂದರಲ್ಲಿ ಯಾರೋ ಅಪರಿಚಿತರು ಮಗುವನ್ನು ತಂದು ಆಟವಾಡಿಸುವ ನೆಪದಲ್ಲಿ ಬಿಟ್ಟು ಹೋಗಿದ್ದಾರೆ.. ಮುದ್ದಾದ ಗಂಡು ಮಗು ಕಂಡು...

Post

ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಮುಂಡಗೋಡ- ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ 108 ಅಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಘಟನೆ ಮಳಗಿ ಸಮೀಪ ಶಿರಸಿ ರಸ್ತೆಯಲ್ಲಿ ನಡೆದಿದೆ.. ಗೋಟಗೋಡಿಕೊಪ್ಪದ ರೂಪಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ಗೊಟಗೋಡಿಕೊಪ್ಪದಿಂದ ಶಿರಸಿ ಗೆ ಹೋಗುವ ಮಾರ್ಗ ಮದ್ಯೆ ಹೆರಿಗೆಯಾಗಿದ್ದು ತಾಯಿ‌ ಮಗು ಆರೋಗ್ಯವಾಗಿದೆ..

Post

ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಸಿಡ್ಲಗುಂಡಿಯಲ್ಲಿ 1 ಎಕರೆ ಕಬ್ಬು ಭಸ್ಮ

ಮುಂಡಗೋಡ- ಗದ್ದೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, 1 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ಸಿಡ್ಲಗುಂಡಿಯಲ್ಲಿ ನಡೆದಿದೆ.. ಸಿಡ್ಲಗುಂಡಿಯ ರೈತ ಶಾಮು ದಾಕ್ಲು ಶಿಂಧೆ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯ ಮೇಲೆ ಹಾದು ಹೋಗಿರೋ ಕೆಇಬಿ ವಿದ್ಯತ್ ಕಂಬದ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.. ಘಟನೆಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯವಾಗಿದೆ.. ಹೀಗಾಗಿ...

Post

ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಜಾರಿ: ಗೋ ಪೂಜೆ ಸಲ್ಲಿಸಿ ಸಂಭ್ರಮ

ವಿಜಯಪುರ- ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಜಾರಿ ಹಿನ್ನೆಲೆ, ವಿಜಯಪುರದಲ್ಲಿ ಬಿಜೆಪಿ, ಹಿಂದೂ ಪರ ಸಂಘಟನೆಗಳು ಹರ್ಷ ವ್ಯಕ್ತ ಪಡಿಸಿವೆ.. ವಿಜಯಪುರದ ಶಿವಾಜಿ ವೃತ್ತದಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ರು.. ಮೋದಿ, ಯಡಿಯೂರಪ್ಪ, ಪ್ರಭು ಚವ್ಹಾಣ್ ಪರ ಘೋಷಣೆ ಕೂಗಿ ಸಂತಸ ವ್ಯಕ್ತ ಪಡಿಸಿದ್ರು..

error: Content is protected !!