10 ವರ್ಷದಿಂದ ನಾಪತ್ತೆ, ಇದ್ದಕ್ಕಿದ್ದಂತೆ ಪತ್ತೆ..! ಕೊರೋನಾ ಮಾಡಿದ ಪವಾಡ..!!

ಕೊಪ್ಪಳ- ಹತ್ತು ವರ್ಷಗಳ ‌ಹಿಂದೆ ಕಾಣೆಯಾಗಿದ್ದ ಮಗ ಇನ್ನಿಲ್ಲ ಎನ್ನುವ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದು ಕಂಡು ಇಡೀ ಗ್ರಾಮದ ಜನರಿಗೆ ಅಚ್ಚರಿಯಾಗಿದೆ.

ಹೌದು! ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ದೇವಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿ ಸಂಪರ್ಕದಲ್ಲೇ ಇರಲಿಲ್ಲ.

ಕೊರೊನಾ ಭೀತಿಯಿಂದ ಕಂಪನಿ ಒಂದರಲ್ಲಿ ಕಾರ್ಮಿಕನಾಗಿರುವ ದೇವರಾಜ ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದ ಸ್ನೇಹಿತರ ಸಹಾಯದಿಂದ ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದಾನೆ.

ದೇವರಾಜು 2008-09ರಲ್ಲಿ ಬೆಂಗಳೂರಿಗೆ ದುಡಿಯಲೆಂದು ಹೋದವನು ನಾಪತ್ತೆಯಾಗಿದ್ದ, ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಕಳದೆರಡು ದಿನದ ಹಿಂದೆ ಜುಮಲಾಪೂರ ಗ್ರಾಮಕ್ಕೆ ಬಂದಿದ್ದಾನೆ. ಪಾಂಡುರಂಗ ದೇವಾಲಯಕ್ಕೆ ಬಂದು ನಮಸ್ಕರಿಸುವ ಮುನ್ನ ತನ್ನ ಪರಿಚಯವನ್ನು ಹೇಳಿಕೊಂಡಾಗ ಸ್ಥಳದಲ್ಲಿದ್ದವರಿಗೆ ಆಶ್ಚರ್ಯವಾಗಿದೆ. ಈ ವಿಷಯವನ್ನು ತಾಯಿ ದೇವಮ್ಮ, ಗುರಬಸಪ್ಪ ಮಾಸ್ತರ ದಂಪತಿಗೆ ಗ್ರಾಮಸ್ಥರು ತಿಳಿಸಿದ್ದಾರೆ. ಮಗ ಮರಳಿ ಗೂಡಿಗೆ ಬಂದಿರುವ ಖುಷಿಗೆ ಭಾವುಕರಾಗಿದ್ದಾರೆ. ಇದನ್ನು ನೋಡಲು ಮನೆಮುಂದೆ ಜನಸಾಗರವೇ ಸೇರಿದ್ದಾರೆ. ಬಂದವರಿಗೆಲ್ಲ ಸಿಹಿಹಂಚುತ್ತಾ ದಂಪತಿಗಳು ಜನರ ಮುಂದೆ ಸಂಭ್ರಮಿಸಿದರು.

ಒಟ್ನಲ್ಲಿ ಕೊರೋನಾ ಮಹಾಮಾರಿ ಹಲವರ ಬದುಕನ್ನೇ ಕಿತ್ತುಕೊಂಡಿರೊ ಸಂದರ್ಭದ ಜೊತೆಗೆ ಇಂತಹದ್ದೊಂದು ಪವಾಡವನ್ನೂ ಮಾಡಿದೆ.

 

error: Content is protected !!