ಹಾನಗಲ್- ಅದೇನು ನಿಷ್ಕರುಣೆಯೋ ಗೊತ್ತಿಲ್ಲ, ಅಥವಾ ಪೋಷಕರ ನಿರ್ಲಕ್ಷವೋ ಗೊತ್ತಿಲ್ಲ.. ಹಾಲುಗಲ್ಲದ ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದಾರೆ.. ಇದು ನಡೆದದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ನಾಲ್ಕರ ಕ್ರಾಸ್ ಬಳಿ..
ಮುದ್ದು ಕಂದನನ್ನು ಒಬ್ಬಂಟಿಯಾಗಿ ಹಡೆದ ತಾಯಿಯೊಬ್ಬಳು ಬಿಟ್ಟು ಹೋದ ಮನಕಲುಕುವ ಘಟನೆ ಇದು.. ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವನ್ನು ಇಲ್ಲಿನ ಡಾಬಾ ವೊಂದರಲ್ಲಿ ಯಾರೋ ಅಪರಿಚಿತರು ಮಗುವನ್ನು ತಂದು ಆಟವಾಡಿಸುವ ನೆಪದಲ್ಲಿ ಬಿಟ್ಟು ಹೋಗಿದ್ದಾರೆ..
ಮುದ್ದಾದ ಗಂಡು ಮಗು ಕಂಡು ಸ್ಥಳೀಯರು ಮಮ್ಮಲು ಮರುಗಿದ್ದಾರೆ..ಇದನ್ನು ಗಮನಿಸಿದ ಸ್ಥಳೀಯರು ಹಾನಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಮಗು ಪೋಷಕರ ಬಳಿ ಇದ್ದುದರ ವಿಡಿಯೋ ಲಭ್ಯವಾಗಿದೆ…
ಆದರೆ ಇದು ಅವಳ ಮಗುನಾ ಅಥವಾ ಕದ್ದಿರುವ ಮಗುನಾ ಎಂಬ ವಿಚಾರ ತಿಳಿಯುವುದಕ್ಕೂ ಮುನ್ನ ಆ ಮಹಿಳೆ ನಾಪತ್ತೆಯಾಗಿದ್ದಾಳೆ..
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಾನಗಲ್ ಪೊಲೀಸ್ ರು ಹಾಗೂ ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ್, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಇದೀಗ ಮಗುವನ್ನು ರಕ್ಷಿಸಿದ್ದಾರೆ.. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರ ಸಲಹೆಯಂತೆ ಮಗವನ್ನು ಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿಡಲಾಗಿದೆ.. ಅನುಮಾನ ಬಂದ ಹಿನ್ನಲೆ ಇದೀಗ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.