Home Public First Newz

Author: Public First Newz (Public First Newz)

Post
ವಾಹನ ಬಿಡುಗಡೆಗೆ ಹಣದ ಬೇಡಿಕೆ, ಶಿಗ್ಗಾವಿ ಠಾಣೆ ಪೊಲೀಸಪ್ಪ ಸಸ್ಪೆಂಡ್..!

ವಾಹನ ಬಿಡುಗಡೆಗೆ ಹಣದ ಬೇಡಿಕೆ, ಶಿಗ್ಗಾವಿ ಠಾಣೆ ಪೊಲೀಸಪ್ಪ ಸಸ್ಪೆಂಡ್..!

ಶಿಗ್ಗಾವಿ: ವಾಹನ ಬಿಡುಗಡೆಗೆ ಹಣದ ಬೇಡಿಕೆ ಇಟ್ಟ ಪೊಲೀಸಪ್ಪನೊಬ್ಬ ಅಮಾನತು ಗೊಂಡಿದ್ದಾನೆ. ವಾಹನ ಬಿಡುಗಡೆಗೆ ಸಾರ್ವಜನಕರಿಂದ ಹಣದ ಬೇಡಿಕೆಯನ್ನು ಇಟ್ಟ ರಮೇಶ್ ಭಜಂತ್ರಿ ಎಂಬುವವರನ್ನು ಅಮಾನತು ಮಾಡಿ ಹಾವೇರಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಅಂದಹಾಗೆ, ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ರಮೇಶ ಭಜಂತ್ರಿಯನ್ನು ಅಮಾನತು ಗೊಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾತಿ ಅಂಶುಕುಮಾರ್, ಗುರುವಾರ ರಾತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇನ್ನು ರಮೇಶ ಭಜಂತ್ರಿ ಪ್ರಕರಣವೊಂದರಲ್ಲಿ ವಾಹನವನ್ನು ಬಿಡುಗಡೆ ಮಾಡಲು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ...

Post
ಅತ್ತಿವೇರಿ ಬಸವಧಾಮದಲ್ಲಿ ಡಿಸೆಂಬರ್ 3 ರಂದು ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ- ಮಾತೆ ಬಸವೇಶ್ವರಿ

ಅತ್ತಿವೇರಿ ಬಸವಧಾಮದಲ್ಲಿ ಡಿಸೆಂಬರ್ 3 ರಂದು ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ- ಮಾತೆ ಬಸವೇಶ್ವರಿ

 ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದಲ್ಲಿ ನಡೆಯಲಿದೆ. ಇದೇ ಡಿಸೆಂಬರ್ 3 ರಂದು ನಡೆಯಲಿರೋ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಳಿಯಾಳದ ಸುಮಂಗಲಾ ಅಂಗಡಿಯವರು ಆಯ್ಕೆಯಾಗಿದ್ದಾರೆ ಅಂತಾ ಅತ್ತಿವೇರಿ ಬಸವಧಾಮದ ಶ್ರೀ ಮಾತೆ ಬಸವೇಶ್ವರಿಯವರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 3 ರಂದು ಜರುಗುವ ವಚನ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಮೂವರು ಹಿರಿಯ ಶ್ರೀಗಳು ಭಾಗಿಯಾಗಲಿದ್ದಾರೆ. ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಚಿತ್ತರಗಿ ವಿಜಯ...

Post
ಮಂಜೂರಾದ ಮನೆ GPS ಮಾಡಲು ಲಂಚ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಸದಸ್ಯ..!

ಮಂಜೂರಾದ ಮನೆ GPS ಮಾಡಲು ಲಂಚ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಸದಸ್ಯ..!

ಸವಣೂರು: ಸರ್ಕಾರದಿಂದ ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿಕೊಡಲು ಲಂಚ ಸ್ವೀಕರಿಸಿದ ಗ್ರಾಮ ಪಂಚಾಯತಿ ಸದಸ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರಡಗಿ ಗ್ರಾಮದ ದಾದಾಪೀರ ಮಹ್ಮದಗೌಸ್ ಲೋಹಾರ ಎಂಬುವವರಿಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಹಣ ಮಂಜೂರಾಗಿತ್ತು. ಹೀಗಾಗಿ, ಕಾರಡಗಿ ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ ಜಾಫರ್ ಸಂಶಿ, ಫಲಾನುಭವಿ ದಾದಪೀರನ ಮನೆಯ ಜಿಪಿಎಸ್ ಮಾಡಿಸಿಕೊಡಲು ರೂ 40 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಸಾವಿರ...

Post
ಬಗಡಗೇರಿಯಲ್ಲಿ ಗ್ರಾಪಂ ಸದಸ್ಯನ ಭೀಕರ ಹತ್ಯೆ, ಗ್ರಾಮದ ನಡುಬೀದಿಯಲ್ಲೇ ಕೊಂದು ಬೀಸಾಕಿದ ದುಷ್ಕರ್ಮಿಗಳು..!

ಬಗಡಗೇರಿಯಲ್ಲಿ ಗ್ರಾಪಂ ಸದಸ್ಯನ ಭೀಕರ ಹತ್ಯೆ, ಗ್ರಾಮದ ನಡುಬೀದಿಯಲ್ಲೇ ಕೊಂದು ಬೀಸಾಕಿದ ದುಷ್ಕರ್ಮಿಗಳು..!

ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಭೀಕರ ಹತ್ಯೆಯಾಗಿದೆ. ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಆಸ್ತಿ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಇನ್ನು ನಡುಬೀದಿಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಇನ್ನು ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Post
ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮ ಗೋಮಾಂಸ ದಂಧೆ, ಇಬ್ಬರು ಆರೆಸ್ಟ್..!

ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮ ಗೋಮಾಂಸ ದಂಧೆ, ಇಬ್ಬರು ಆರೆಸ್ಟ್..!

ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಗೋಮಾಂಸ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಓರ್ವ ಟಿಬೇಟಿಗನೂ ಸೇರಿದಂತೆ ಇಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಟಿಬೇಟಿಯನ್ ಕಾಲೋನಿ ನಂಬರ್ 3 ರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

Post
ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲಿದೆ, ಮೋದಿ ಅಲೆ ಕೆಲಸ ಮಾಡಲಿದೆ- ಟಿಬೇಟಿಯನ್ ಕ್ಯಾಂಪ್ ಗೆ ಆಗಮಿಸಿದ ಅರುಣಾಚಲ ಸಿಎಂ ಪೇಮಾ ಖಂಡು ಹೇಳಿಕೆ

ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲಿದೆ, ಮೋದಿ ಅಲೆ ಕೆಲಸ ಮಾಡಲಿದೆ- ಟಿಬೇಟಿಯನ್ ಕ್ಯಾಂಪ್ ಗೆ ಆಗಮಿಸಿದ ಅರುಣಾಚಲ ಸಿಎಂ ಪೇಮಾ ಖಂಡು ಹೇಳಿಕೆ

 ಮುಂಡಗೋಡ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲಿದೆ, ಬಿಜೆಪಿ ಪರ ಫಲಿತಾಂಶ ಬರುತ್ತದೆ ಪ್ರಧಾನಿ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಆಳ್ವಿಕೆಗೆ ಮೆಚ್ಚುಗೆ ಇದ್ದು ಬಿಜೆಪಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ ಎಂಬ ಭರವಸೆ ಇದೆ ಅಂತಾ ಅರುಣಾಚಲ ಸಿಎಂ ಪೇಮಾ ಖಂಡು ಭವಿಷ್ಯ ನುಡಿದ್ರು. ಎರಡು ದಿನಗಳ ಕಾಲ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ಗೆ ಭೇಟಿ ನೀಡಿರೋ ಅವ್ರು ಮಾತನಾಡಿದರು. ಇನ್ನು ಮಣಿಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಅವ್ರು, ಅಲ್ಲಿ ಗಲಭೆ...

Post
ಮುಂಡಗೋಡಿನಲ್ಲಿ ಖತರ್ನಾಕ ATM ವಂಚಕಿಯ ಬಂಧನ, ಹಣ ಡ್ರಾ ಮಾಡಿ ಕೊಡುವುದಾಗಿ ವಂಚಿಸಿದ್ದ ಲೇಡಿ..!

ಮುಂಡಗೋಡಿನಲ್ಲಿ ಖತರ್ನಾಕ ATM ವಂಚಕಿಯ ಬಂಧನ, ಹಣ ಡ್ರಾ ಮಾಡಿ ಕೊಡುವುದಾಗಿ ವಂಚಿಸಿದ್ದ ಲೇಡಿ..!

ಮುಂಡಗೋಡ: ಎಟಿಎಂ ನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ಹೇಳಿ, ಬರೋಬ್ಬರಿ 69 ಸಾವಿರ ರೂ. ವಂಚಿಸಿದ್ದ ಖತರ್ನಾಕ ವಂಚಕಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದ ಸೆಪ್ಟೆಂಬರ್ 29 ರಂದು ನಡೆದಿದ್ದ ಎಟಿಎಂ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ತಾಲೂಕಿನ ಶಿರಾಳಕೊಪ್ಪದ ಆರೋಪಿ ಮಹಿಳೆ ಕೌಸರಬಾನು ನಜೀರಸಾಬ ಹಿರೇಕರೂರು(35) ಎಂಬುವವಳನ್ನು ಬಂಧಿಸಿ, 12 ಸಾವಿರ ರೂ. ಹಣ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ, ಮುಂಡಗೋಡ ತಾಲೂಕಿನ ಮೈನಳ್ಳಿಯ ಸಹೀನಾಜ್ ಮಹಮ್ಮದ್ ಸಲೀಂ...

Post
ಕಾತೂರು ಸಮೀಪದ ಗೋಟಗೋಡಿಕೊಪ್ಪದಲ್ಲಿ ಚಿರತೆ ದಾರುಣ ಸಾವು..! ಅಷ್ಟಕ್ಕೂ ಚಿರತೆಯ ಸಾವಿಗೆ ಎನು ಕಾರಣ..?

ಕಾತೂರು ಸಮೀಪದ ಗೋಟಗೋಡಿಕೊಪ್ಪದಲ್ಲಿ ಚಿರತೆ ದಾರುಣ ಸಾವು..! ಅಷ್ಟಕ್ಕೂ ಚಿರತೆಯ ಸಾವಿಗೆ ಎನು ಕಾರಣ..?

 ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪ ಸಮೀಪದ ಮುಕ್ತಿ ಮಠದ ಹತ್ತಿರ ಎರಡು ವರ್ಷದ ಗಂಡು ಚಿರತೆ ದಾರುಣ ಸಾವು ಕಂಡಿದೆ‌. ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿರತೆಯ ಸಾವು ಹೇಗಾಯ್ತು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಮದ್ಯಾಹ್ನವೇ..? ಶುಕ್ರವಾರ ಮದ್ಯಾಹ್ನವೇ ಗೋಟಗೋಡಿಕೊಪ್ಪದ ಮುಕ್ತಿ ಮಠದ ಹತ್ತಿರದ ಗದ್ದೆಗಳ ಪಕ್ಕದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ರೈತರು ಚಿರತೆಯ ಮೃತದೇಹ ಕಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಮೃತದೇಹದ...

Post
ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!

ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!

ಮುಂಡಗೋಡ ತಾಲೂಕಿನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿ ದಂಧೆಗೆ ಬಹುತೇಕ ಮೂಗುದಾರ ಬಿದ್ದಂತಾಗಿದೆ. ತಾಲೂಕಿನಲ್ಲಿ ಇನ್ಮೇಲೆ ಮತ್ತೆ ಇಟ್ಟಿಗೆ ಭಟ್ಟಿ ದಂಧೆ ಶುರು ಮಾಡಿದ್ರೆ ಸುಮ್ನೆ ಬಿಡಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತು ಪತ್ರಕರ್ತರು ಹಾಗೂ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ತಹಶೀಲ್ದಾರ್ ಸಂದೇಶ ರವಾನಿಸಿದ್ದಾರೆ. ಎಲ್ಲವೂ ಅನಧಿಕೃತವಂತೆ..! ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಎಲ್ಲವೂ ಅನಧಿಕೃತ ಇಟ್ಟಿಗೆ ಭಟ್ಟಿಗಳಂತೆ. ಇಲ್ಲಿ ಯಾರೊಬ್ರೂ ಅಧಿಕೃತ ಪರವಾನಗಿ ಪಡೆದು ದಂಧೆ ಮಾಡಿಯೇ ಇಲ್ಲ...

Post
ಚಿಗಳ್ಳಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ, ಕಲ್ಲಪ್ಪಜ್ಜನ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಚಿಗಳ್ಳಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ, ಕಲ್ಲಪ್ಪಜ್ಜನ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಹೊರ ವಲಯದಲ್ಲಿರೋ ಕಲ್ಲಪ್ಪಜ್ಜಯ್ಯನ ಗುಡ್ಡದ ದೇವಸ್ಥಾನದ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿದು ಬಂದಿದೆ. ಚಿಗಳ್ಳಿಯ ಈರಪ್ಪ ಫಕ್ಕೀರಪ್ಪ ಲಕ್ಕಿಕೊಪ್ಪ (45) ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ, ಯಾವುದೋ ಕಾರಣಕ್ಕೆ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ...

error: Content is protected !!