ಶಿಗ್ಗಾವಿ: ವಾಹನ ಬಿಡುಗಡೆಗೆ ಹಣದ ಬೇಡಿಕೆ ಇಟ್ಟ ಪೊಲೀಸಪ್ಪನೊಬ್ಬ ಅಮಾನತು ಗೊಂಡಿದ್ದಾನೆ. ವಾಹನ ಬಿಡುಗಡೆಗೆ ಸಾರ್ವಜನಕರಿಂದ ಹಣದ ಬೇಡಿಕೆಯನ್ನು ಇಟ್ಟ ರಮೇಶ್ ಭಜಂತ್ರಿ ಎಂಬುವವರನ್ನು ಅಮಾನತು ಮಾಡಿ ಹಾವೇರಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಅಂದಹಾಗೆ, ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ರಮೇಶ ಭಜಂತ್ರಿಯನ್ನು ಅಮಾನತು ಗೊಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾತಿ ಅಂಶುಕುಮಾರ್, ಗುರುವಾರ ರಾತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ರಮೇಶ ಭಜಂತ್ರಿ ಪ್ರಕರಣವೊಂದರಲ್ಲಿ ವಾಹನವನ್ನು ಬಿಡುಗಡೆ ಮಾಡಲು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವ್ಯಾಪಕವಾಗಿ ಚರ್ಚಿಯಾಗಿತ್ತು. ಜವಾಬ್ದಾರಿಯುತ ಹುದ್ದೆಯಲ್ಲಿರುವ ಸದರಿ ಸಿಹೆಚ್ ಸಿ ರಮೇಶ ಭಜಂತ್ರಿ ಗಂಭೀರ ದುರ್ನಡತೆಯನ್ನು ಪ್ರದರ್ಶಿಸಿರುತ್ತಾರೆ. ಆದ್ದರಿಂದ ರಮೇಶ ಭಜಂತ್ರಿ, ಸಿಹೆಚ್ ಸಿ-631, ಶಿಗ್ಗಾವಿ ಪೊಲೀಸ್ ಠಾಣೆ ಅವರನ್ನು ತಕ್ಷಣ ಸೇವೆಯಿಂದ ಅಮಾನತ್ತು ಮಾಡಲಾಗಿದ್ದು, ಇಲಾಖಾ ವಿಚಾರಣಾ ನಡೆಸಿ ಅವರ ಮೇಲೆ ಮುಂದಿನಕಾನೂನು ಕ್ರಮ ಜರುಗಿಸಲಾಗುವದು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.