Home publicfirstnewz

Author: publicfirstnewz (Santosh Shetteppanavar)

Post

ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹಾವಳಿ: ಸವದತ್ತಿ ಎಲ್ಲಮ್ಮನ ದೇಗುಲ ಬಂದ್, ಇನ್ಮುಂದೆ ಭಕ್ತರಿಗಿಲ್ಲ ದರ್ಶನ ಭಾಗ್ಯ

ಬೆಳಗಾವಿ- ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.. ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.. ಬರೋಬ್ಬರಿ 11ತಿಂಗಳ ನಂತರ, ಕಳೆದ ಫೆ.1 ರಂದು ಮತ್ತೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.. ಸದ್ಯ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ...

Post

ಫೆ‌. 1 ರಿಂದ ಸವದತ್ತಿ ಯಲ್ಲಮ್ಮ‌ದೇವಸ್ಥಾನ ಓಪನ್- 11ತಿಂಗಳ ನಂತ್ರ ಮತ್ತೆ ಏಳುಕೊಳ್ಳದಲ್ಲಿ ಮೊಳಗಲಿದೆ ಉದೋ..ಉದೋ..

ನಿತ್ಯವೂ ಪ್ರತಿಧ್ವನಿಸುತ್ತಿದ್ದ ಉದೋ.. ಉದೋ..ಯಲ್ಲಮ್ಮ.. ನಾಮಸ್ಮರಣೆ ಕೇಳಿ ಬರೋಬ್ಬರಿ 11ತಿಂಗಳೇ ಗತಿಸಿದೆ..ರಾಜ್ಯ ಹೊರ ರಾಜ್ಯಗಳ ಲಕ್ಷಾಂತರ ಭಕ್ತರಿಗೆ ಸವದತ್ತಿಯ ಯಲ್ಲಮ್ಮದೇವಿಯ ದರ್ಶನವೇ ಸಿಗದೇ ನಿತ್ಯವೂ ಚಡಪಡಿಸುತ್ತಿದ್ದಾರೆ..ಯಾವಾಗ ದೇವಿ ದರ್ಶನ ಸಿಗುತ್ತೆ ಅಂತ ಭಕ್ತರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದರು.. ಕೊನೆಗೂ ಭಕ್ತರ ನಿರೀಕ್ಷೆ ಕೈಗೂಡಿದೆ. ಇದೇ ಫೆಬ್ರವರಿ 1ರಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಭಕ್ತರಿಗೆ ತೆರೆದುಕೊಳ್ಳುತ್ತಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸವದತ್ತಿ ಯಲ್ಲಮ್ಮ..ಕರ್ನಾಟಕ- ಮಹಾರಾಷ್ಟ್ರ, ತಮಿಳುನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೇವತೆ..ವರ್ಷದ 9ತಿಂಗಳು...

Post

ಹುನಗುಂದದಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ

ಮುಂಡಗೋಡ- ತಾಲೂಕಿನ ಹುನಗುಂದದಲ್ಲಿ ಇಂದು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಿತು.. ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ, ಹತ್ತಾರು ಯುವಕರು ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು.. ಈ ವೇಳೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..

Post

ಪುಟ್ಟ ಮಗು ಬಿಟ್ಟು ಹೋದ್ರಾ ಪೋಷಕರು..? ಹೆತ್ತಮ್ಮನಿಗಾಗಿ ಹಂಬಲಿಸುತ್ತಿದೆ ಕಂದಮ್ಮ.. ಅಕ್ಕಿ ಆಲೂರಿನಲ್ಲಿ ಮನಕಲಕುವ ಘಟನೆ

ಹಾನಗಲ್- ಅದೇನು ನಿಷ್ಕರುಣೆಯೋ ಗೊತ್ತಿಲ್ಲ, ಅಥವಾ ಪೋಷಕರ ನಿರ್ಲಕ್ಷವೋ ಗೊತ್ತಿಲ್ಲ.. ಹಾಲುಗಲ್ಲದ ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದಾರೆ.. ಇದು ನಡೆದದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ನಾಲ್ಕರ ಕ್ರಾಸ್ ಬಳಿ.. ಮುದ್ದು ಕಂದನನ್ನು ಒಬ್ಬಂಟಿಯಾಗಿ ಹಡೆದ ತಾಯಿಯೊಬ್ಬಳು ಬಿಟ್ಟು ಹೋದ ಮನಕಲುಕುವ ಘಟನೆ ಇದು.. ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವನ್ನು ಇಲ್ಲಿನ ಡಾಬಾ ವೊಂದರಲ್ಲಿ ಯಾರೋ ಅಪರಿಚಿತರು ಮಗುವನ್ನು ತಂದು ಆಟವಾಡಿಸುವ ನೆಪದಲ್ಲಿ ಬಿಟ್ಟು ಹೋಗಿದ್ದಾರೆ.. ಮುದ್ದಾದ ಗಂಡು ಮಗು ಕಂಡು...

Post

ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ ಅಪಘಾತದಲ್ಲಿ ದುರ್ಮರಣ- ಸಚಿವ ಹೆಬ್ಬಾರ್ ಸಂತಾಪ

ಯಲ್ಲಾಪುರ- ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಅವರ ಧರ್ಮಪತ್ನಿ ವಿಜಯಾ ಶ್ರೀಪಾದ ನಾಯ್ಕ್ ರವರ ದುರ್ಮರಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.. ಇಂದು ಮುಂಜಾನೆ ಶ್ರೀಪಾದ ನಾಯ್ಕ ಹಾಗೂ ಅವರ ಧರ್ಮಪತ್ನಿ ವಿಜಯಾ ನಾಯ್ಕ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೆಬ್ಬಾರ್ ತಮ್ಮ ಸಂತಾಪ ಸೂಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ...

Post

ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದುರ್ಮರಣ

ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿ, ಸಚಿವರ ಧರ್ಮಪತ್ನಿ ವಿಜಯಾ ಸಾವಿಗೀಡಾಗಿದ್ದಾರೆ.. ಅಲ್ದೆ, ಸಚಿವರ ಆಪ್ತ ಕಾರ್ಯದರ್ಶಿ ಕೂಡ ಮೃತಪಟ್ಟಿದ್ದಾರೆ.. ಇನ್ನು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಸ್ಥಿತಿ ಗಂಭೀರವಾಗಿದೆ ಅಂತಾ ತಿಳಿದು ಬಂದಿದೆ..  

Post

ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಸಚಿವರೂ ಸೇರಿ ನಾಲ್ವರಿಗೆ ಗಾಯ

ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದೆ.. ಕೇಂದ್ರ ಆಯುಷ್ ಇಲಾಖೆ ಸಚಿವರಾಗಿರೋ ಶ್ರೀಪಾದ್ ನಾಯಕ್, ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಘಟನೆ ನಡೆದಿದೆ..ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿಗೆ ಗಂಭೀರ ಗಾಯವಾಗಿರೋ ಮಾಹಿತಿ ಕೆನರಾ ನ್ಯೂಸ್ ಹಂಟ್ ಗೆ ಲಭ್ಯವಾಗಿದೆ.. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ‌ಮಾಡಲಾಗಿದೆ..ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Post

ಹುನಗುಂದ ಕೈ ಕಾರ್ಯಕರ್ತರನ್ನ ಭೇಟಿ ಮಾಡಿದ ಮಾಜಿ ಸಚಿವ ಸಂತೋಷ ಲಾಡ್

ಮುಂಡಗೋಡ- ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಹುನಗುಂದ ಕಾಂಗ್ರೆಸ್ ಕಾರ್ಯಕರ್ತರನ್ನು ಮಾಜಿ ಸಚಿವ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಸಂತೋಷ ಲಾಡ್ ಭೇಟಿ ಮಾಡಿದ್ರು.. ತಾಲೂಕಿನ ಹುನಗುಂದ, ಅಗಡಿ, ಇಂದೂರು, ಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂತೋಷ ಲಾಡ್ ಕಾರ್ಯಕರ್ತರನ್ನು ಭೇಟಿ ಮಾಡಿದ್ರು.. ಬೆಳಿಗ್ಗೆ ಹುನಗುಂದದ ನೂತನ ವಿಠ್ಠಲ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಚಿವ್ರು ಸಿದ್ದನಗೌಡ ಪಾಟೀಲ್, ತುಕಾರಾಮ್ ಹೊನ್ನಳ್ಳಿ ಸೇರಿ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಬೆಂಬಲಿಸುವಂತೆ ಮನವಿ ಮಾಡಿದ್ರು.. ಈ...

Post

ಹುನಗುಂದ ಗ್ರಾಮಕ್ಕೆ ಜಿಪಂ ಸಿಇಓ ಪ್ರಿಯಾಂಗಾ ಭೇಟಿ; ನರೇಗಾ ಕಾಮಗಾರಿಗಳ ವೀಕ್ಷಣೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮಕ್ಕೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗಾ ಎಂ. ಭೇಟಿ ನೀಡಿದ್ರು..  ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ ಸಿಇಓ ಹುನಗುಂದದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಪೌಷ್ಟಿಕ ತೋಟ ಉದ್ಘಾಟಿಸಿದ್ರು.. ಇದಕ್ಕೂ ಮೊದಲು ಅಗಡಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಇಓ ಪ್ರಿಯಾಂಗಾ ರವರು ಅಂಗನವಾಡಿಯ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ್ರು.. ಈ ವೇಳೆ ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸೇರಿ ಹಲವರು ಸಾಥ್ ನೀಡಿದ್ರು..

Post

2019-20 ರಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ; 7.72 ಕೋಟಿ ರೂ. ಲಾಭ- ಸಚಿವ ಹೆಬ್ಬಾರ್

ಶಿರಸಿ : 2019 – 20 ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದ್ದು ಈ ಬಾರಿ ಬ್ಯಾಂಕ್ ಒಟ್ಟು 7.72 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಅಂತಾ ಕಾರ್ಮಿಕ ಹಾಗು ಸಕ್ಕರೆ ಖಾತೆ ಸಚಿವ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ತಿಳಿಸಿದ್ರು.. ಅವರು ಇಂದು ಕೆ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ 2019 – 20 ಸಾಲಿನ ಬ್ಯಾಂಕ್ ನ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿ ಸಂಕ್ಷಿಪ್ತ ವರದಿಯನ್ನು ನೀಡಿ ಮಾತನಾಡುತ್ತಿದ್ದರು.. ಬ್ಯಾಂಕು ಪ್ರಾಥಮಿಕ ಕೃಷಿ...

error: Content is protected !!