ಸವದತ್ತಿ ಯಲ್ಲಮ್ಮ..ಕರ್ನಾಟಕ- ಮಹಾರಾಷ್ಟ್ರ, ತಮಿಳುನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೇವತೆ..ವರ್ಷದ 9ತಿಂಗಳು ಇಲ್ಲಿ ಜಾತ್ರೆ ನಡೆಯುತ್ತೆ… ಜಾತ್ರೆ ಸಂದರ್ಭದಲ್ಲಿ ಭಂಡಾರದ ಜೊತೆಗೆ ಉದೋ.. ಉದೋ.. ಯಲ್ಲಮ್ಮ ಎಂಬ ನಾಮ ಸ್ಮರಣೆ ಗುಡ್ಡದ ತುಂಬ ಪ್ರತಿಧ್ವನಿಸುತ್ತದೆ… ಇಂತಹ ವೈಭವದ ಜಾತ್ರೆ ಸಂಭ್ರಮಕ್ಕೆ ಕೊರೊನಾ ಮಹಾಮಾರಿ ಕಡಿವಾಣ ಹಾಕಿತ್ತು… ಕಳೆದ 11ತಿಂಗಳಿಂದ ಬಂದ್ ಆಗಿದ್ದ ದೇವಸ್ಥಾನವನ್ನು ನಾಳೆ ಅಂದರೆ ಫೆಬ್ರುವರಿ 1ರಂದು ರೀ ಓಪನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆಡಳಿತ ಮಂಡಳಿ ಭರದ ಸಿದ್ಧತೆ ಮಾಡಿಕೊಂಡಿದೆ.
ಇನ್ನೂ ನಾಳೆಯಿಂದ ಆರಂಭವಾಗುವ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಪುನಸ್ಕಾರ ಆರಂಭವಾಗಲಿದೆ. ಅದರ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.
1) ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು.
2)ಸನಿಟೈಜರ್ ಬಳಕೆ, ಮಾಸ್ಕ ಕಡ್ಡಾಯವಾಗಿ ಧರಿಸಬೇಕು.
ಹೀಗೆ ಕೋವೀಡ್ ನಿಯಮ ಪಾಲನೆಯನ್ನು ತಪ್ಪದೇ ಪಾಲಿಸಿದ್ರೆ ಮಾತ್ರ ಅವಕಾಶ ನೀಡಲು ದೇವಸ್ಥಾನ ನಿರ್ಧರಿಸಿದೆ.ಇದಕ್ಕಾಗಿ ಭಕ್ತರಿಗಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಪೋಲಿಸ್ ಭದ್ರತೆ ಮಾಡಿಕೊಂಡಿದೆ.
ಕಳೆದ 11ತಿಂಗಳಿಂದ ದೇವಿಯ ದರ್ಶನವಿಲ್ಲದೇ ಪರದಾಡಿದ ಭಕ್ತರಿಗೆ ಈಗ ಸಂಭ್ರಮ ಮನೆ ಮಾಡಿದೆ. ಮತ್ತೆ ಸವದತ್ತಿ ಗುಡ್ಡದಲ್ಲಿ ನಾಳೆಯಿಂದ ಸಂಭ್ರಮ, ಸಡಗರ ಮನೆ ಮಾಡಲಿದೆ. ಉದೋ..ಉದೋ..ಯಲ್ಲಮ್ಮ ಎನ್ನುವ ನಾಮಸ್ಮರಣೆ ಮೊಳಗಲಿದೆ..ದೇವಸ್ಥಾನದಲ್ಲಿ ಮೊದಲಿನ ಕಳೆ ಕಟ್ಟಲಿದೆ. ದೇವಸ್ಥಾನ ಆರಂಭ ಆಯ್ತು ಅಂತ ದೇವಸ್ಥಾನಕ್ಕೆ ಬರುವ ಭಕ್ತರು ಕೋವಿಡ್ ನಿಯಮ ಪಾಲನೆ ಮಾಡಬೇಕಿರುವುದು ಕಡ್ಡಾಯವಿದೆ.