ಯಲ್ಲಾಪುರ- ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಅವರ ಧರ್ಮಪತ್ನಿ ವಿಜಯಾ ಶ್ರೀಪಾದ ನಾಯ್ಕ್ ರವರ ದುರ್ಮರಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ..
ಇಂದು ಮುಂಜಾನೆ ಶ್ರೀಪಾದ ನಾಯ್ಕ ಹಾಗೂ ಅವರ ಧರ್ಮಪತ್ನಿ ವಿಜಯಾ ನಾಯ್ಕ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೆಬ್ಬಾರ್ ತಮ್ಮ ಸಂತಾಪ ಸೂಚಿಸಿದ್ದಾರೆ.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರೋ ಶಿವರಾಮ್ ಹೆಬ್ಬಾರ್, ಶ್ರಿಪಾದ ನಾಯ್ಕರು ಶೀಘ್ರ ಗಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ..