ಹಿರೇಕೆರೂರಿನ, ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಪ್ರತಾಪಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರ್ ನಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಾಪಕುಮಾರನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು * ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ. * ದಾವಣಗೆರೆ ತಾಲೂಕಿನ ಕತ್ತಲಗೇರಿ ಗ್ರಾಮದ ನಿವಾಸಿ. * ಕಳೆದ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Author: Public First Newz (Public First Newz)
ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಜಿಲ್ಲಾಧಿಕಾರಿ ಆದೇಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಅವಾಂತರಗಳು ಚಾಲ್ತಿಯಲ್ಲಿವೆ. ಅದ್ರಲ್ಲೂ, ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಹೀಗಾಗಿ, ಕರಾವಳಿ ಭಾಗದ ಐದು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯ ಕಾರಣಕ್ಕಾಗಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..
ಮುಂದುವರೆದ ಮಳೆ ಅವಾಂತರ, ಹೊನ್ನಾವರ ಬಳಿ ರಾ.ಹೆದ್ದಾರಿ ಮೇಲೆ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಮಳೆಯ ಅಬ್ಬರ ಕೊಂಚ ತಣ್ಣಗಾಗಿದ್ದರೂ, ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮೇಲೆಯೇ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮ ರಸ್ತೆ ಸಂಚಾರ ಅಸ್ಯವ್ಯಸ್ತವಾಗಿದೆ. ಹೊನ್ನಾವರ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕರ್ನಲ್ ಹಿಲ್ ಗುಡ್ಡ ಕುಸಿದಿದ್ದು ರಸ್ತೆಯ ಮೇಲೆ ಮಣ್ಣು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ, ಒಂದು ಕಡೆಯಿಂದ ಮಾತ್ರ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಐಆರ್‌ಬಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಗಂಟೆಯಲ್ಲಿ ರಸ್ತೆ ಸಂಚಾರ ಸುಗಮವಾಗಲಿದೆ ಅಂತಾ...
ಮುಂಡಗೋಡಿನಲ್ಲಿ ಯಶಸ್ವಿಯಾಗಿ ನಡೆದ ಸಂಪೂರ್ಣತಾ ಅಭಿಯಾನ ಉತ್ಸವ..!
ಮುಂಡಗೋಡ ಪಟ್ಟಣದ ಟೌನ್ ಹಾಲ್‌ನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ನ ಸಹೋಗದಲ್ಲಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದ ಸಂಪೂರ್ಣತಾ ಅಭಿಯಾನ ಉತ್ಸವ ಹಮ್ಮಿಕೊಳ್ಳಲಾಗಿತ್ತು. ನೀತಿ ಆಯೋಗದ ಪ್ರತಿನಿಧಿಯಾದ ರೀಷಬ್ ಜೈನ್, ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳಾದ ವಿನೋದ ಅಣ್ವೇಕರ, ತಾಲೂಕಾ ಪಂಚಾಯತ್ ಇಓ ಟಿ.ವೈ. ದಾಸನಕೊಪ್ಪ ಅವರು ಜಂಟಿಯಾಗಿ ಉದ್ಘಾಟಿಸಿದರು.. ಉತ್ಸವ ಉದ್ಘಾಟನೆಗೂ ಮುನ್ನ ತಾಲ್ಲೂಕು ಪಂಚಾಯತಿ ಕಚೇರಿಯಿಂದ ನಗರದ ಟೌನ್ ಹಾಲ್ ವರೆಗೂ ಆಶಾ, ಅಂಗನವಾಡಿ, ತಾಪಂ ಅಧಿಕಾರಿಗಳು,...
ಉತ್ತರ ಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀ ಪ್ರಿಯ ಕೆ. ಅಧಿಕಾರ ಸ್ವೀಕಾರ..!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಕೆ. ಇಂದು ಮೊದಲ ಬಾರಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ರು. ನಂತರ, ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀ ಪ್ರಿಯ ಕೆ. ಅಧಿಕಾರ ಸ್ವೀಕರಿಸಿದರು.
ಶಿಗ್ಗಾವಿ “ಕೈ” ಟಿಕೆಟ್ ಗಾಗಿ ನಿಲ್ಲದ ರಂಪಾಟ, ಇಂದು ಮತ್ತೆ ಉಸ್ತುವಾರಿಗಳ ಜತೆ ಹೈ ವೋಲ್ಟೇಜ್ ಮೀಟಿಂಗ್
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ನಲ್ಲಿ ಬಣಗಳ ತಿಕ್ಕಾಟ ಮಿತಿ ಮೀರಿದೆ. ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರ ಬಹುತೇಕ ಕಗ್ಗಂಟಾಗಿದೆ. ಹೀಗಾಗಿ, ಇಂದು ಟಿಕೆಟ್ ಹಂಚಿಕೆ ಉಸ್ತುವಾರಿ ಸಮಿತಿ ಶಿಗ್ಗಾವಿಗೆ ಬಂದಿಳಿಯಲಿದೆ. ಸಚಿವ ಈಶ್ವರ ಖಂಡ್ರೆ ನೇತೃತ್ವದ ಸಮಿತಿಯಿಂದ ಶಿಗ್ಗಾವಿಯಲ್ಲಿ ಬಡಿದಾಟದ ಬಣಗಳ ಜೊತೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಿಕ್ಕಿಯಾಗಿದೆ. ಪೊಲೀಸ್ ಬಂದೋಬಸ್ತ್..! ಅಸಲು, ಎರಡು ದಿನಗಳ ಹಿಂದಷ್ಟೇ ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಸಚಿವ ಸತೀಶ್ ಜಾರಕೀಹೊಳಿ ನೇತೃತ್ವದಲ್ಲಿ ಸಭೆಯೊಂದು ನಡೆದಿತ್ತು. ಆ ವೇಳೆ ಇಲ್ಲಿನ...
ಜಿಲ್ಲೆಯಲ್ಲಿ ಇನ್ಮೇಲೆ ಅಕ್ರಮಿಗಳು ಬಾಲ ಬಿಚ್ಚಂಗಿಲ್ಲ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕ್ತಿವಿ : ನೂತನ ಎಸ್ಪಿ ನಾರಾಯಣ್ ಮೊದಲ ಮಾತು
ಕಾರವಾರ: ಉತ್ತರ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹೇಳಿದ್ರು. ಅವರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದರು. ಇಲ್ಲಿ ಕೆಲಸ ಮಾಡೋದು ಸವಾಲು..! ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯದಿಂದ...
ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ NDRF ತಂಡ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್
ಕಾರವಾರ; ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 2 ರಾಷ್ಟೀಯ ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸುವಂತೆ ಕೋರಿದ್ದು, ಈಗಾಗಲೇ ಈ ತಂಡಗಳು ಬೆಂಗಳೂರಿನಿಂದ ಹೊರಟಿವೆ. ಶುಕ್ರವಾರ ಈ ತಂಡಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ. 2...
ಜಾಗ್ರತೆಯಿರಲಿ..! ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿ..!?
ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಗೆ ಮೊದಲ ಬಲಿಯಾಗಿದೆ. ಅಂಕೋಲದ ಬಾವಿಕೇರಿಯ ನಿವಾಸಿ ಹರೇ ರಾಮ್ ಗೋಪಾಲ್ ಭಟ್ (32) ಡೆಂಗ್ಯೂ ನಿಂದ? ಸಾವನ್ನಪ್ಪಿದ್ದಾರೆ. ಒಂದು ವಾರದ ಹಿಂದೆ ಡೆಂಗ್ಯೂ ನಿಂದ ಬಳಲಿ, ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಹರೇ ರಾಮ್ ಭಟ್, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ 119 ಜನರಲ್ಲಿ ಡೆಂಗ್ಯು ಪತ್ತೆಯಾಗಿದೆ.
ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಅಪರಾಧಿ ಅಲ್ಲ: ದರ್ಶನ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್
ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ದರ್ಶನ್ ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆ. ದರ್ಶನ್ ಬಗ್ಗೆ ಪೋಸ್ಟ್ ಹಾಕಿದ ಮಾಜಿ ಸಂಸದೆ ಸುಮಲತಾ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಘಟನೆ ಬಗ್ಗೆ ಸುದೀರ್ಘ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿರುವ ಸುಮಲತಾ ಅಂಬರೀಶ್, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ...