ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಮುಂಡಗೋಡಿನಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ರಮೇಶ ಗಂಗಪ್ಪಾ ಮುಗಳಕಟ್ಟಿ(26) ಮಂಜುನಾಥ ಸುಬಾಸ ಸೋಮನಕೊಪ್ಪ (32) ಎಂಬುವ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮುಂಡಗೋಡ ಪಟ್ಟಣದ ಕಲಾಲ್ ಓಣಿಯ ಪೀರಸಾಬ ಅಬ್ದುಲಖಾದರ ಬಂಗ್ಲೆವಾಲೆ ಎಂಬುವವರ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಲ್ಲಿಸಿದ್ದ, ಹೀರೋ ಸ್ಪ್ಲೆಂಡರ್ ಫ್ಲಸ್ ಬೈಕ್ ನ್ನು ದಿನಾಂಕ...
Top Stories
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಟ.. ಐವರು ಪೋಲೀಸರು ಅಮಾನತು..!
ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಅರಿವು ಮೂಡಿಸಿ : ಈಶ್ವರ ಕಾಂದೂ
Tag: mundgod news
ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಕತೆ ಏನಾಯ್ತು..? ಎಸಿಎಫ್ ಸಾಹೇಬ್ರು ಆ ” ಚಕ್ಕಂಬಕ್ಕಳ” ಫಾರೆಸ್ಟರ್ ನ ರಕ್ಷಣೆಗೆ ನಿಂತ್ರಾ..?
ಅಬ್ಬಬ್ಬಾ ಆ ಫಾರೆಸ್ಟರ್ ಅಂದ್ರೆ ಕಾತೂರು ಭಾಗದಲ್ಲಿ ಅದೇಂತದ್ದೋ ಅಂತೆ, ಕಂತೆ..! ಆತನ ಹಿಂದೆ ಸಿಕ್ಕಾಪಟ್ಟೆ ದೊಡ್ಡವರಿದ್ದಾರಂತೆ. ಹೀಗಾಗಿ, ಆತನ ಯಡವಟ್ಟುಗಳು, ದಂಧೆಗಳನ್ನೇಲ್ಲ ಕಣ್ಣಾರೆ ಕಂಡ್ರೂ ಏನೂ ಮಾಡದ ಸ್ಥಿತಿಯಲ್ಲಿ ಕುಳಿತಿದ್ದಾರಂತೆ ಮುಂಡಗೋಡಿನ ಎಸಿಎಫ್ ಸಾಹೇಬಾ..! ನಿಮಗೆ ನೆನಪಿರಬಹುದು, ಕಳೆದ 2022 ರ ಅಕ್ಟೋಬರ್ ತಿಂಗಳಲ್ಲೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಅದೊಂದು ಸುದ್ದಿ ಪ್ರಸಾರ ಮಾಡಿತ್ತು. ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ...
ಮುಂಡಗೋಡ ಬಂಕಾಪುರ ರಸ್ತೆಯಲ್ಲಿ ಬೈಕ್ ಸ್ಕಿಡ್, ಮದುವೆಗೆ ಹೋಗಿದ್ದ ಮೂವರು ಯುವಕರಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಬಂಕಾಪುರ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಬೈಕಗ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮದುವೆಗೆಂದು ಹೊರಟಿದ್ದವರಿಗೆ ಆಘಾತವಾಗಿದೆ. ಗಾಯಗೊಂಡವರನ್ನು ಮುಂಡಗೋಡ ಪಟ್ಟಣದ ಇಂದಿರಾನಗರದ ಇಜಾಜ್, ಜಿಲಾನಿ, ಹಾಗೂ ಮಲ್ಲಿಕ್ ಅಂತಾ ಗುರುತಿಸಲಾಗಿದೆ. ಮೂವರಿಗೂ ಗಂಭೀರ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೂತನ ಸಚಿವರಾದ ಸಂತೋಷ ಲಾಡ್, ಮಧು ಬಂಗಾರಪ್ಪನವರಿಗೆ ಭೇಟಿ ಮಾಡಿ ಶುಭ ಕೋರಿದ ವಿಎಸ್ಪಿ..!
ಬೆಂಗಳೂರು: ನೂತನವಾಗಿ ಸಚಿವ ಸಂಪುಟ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಲಘಟಗಿ ಶಾಸಕ ಸಂತೋಷ ಲಾಡ್ ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ನವರಿಗೆ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಭೇಟಿ ಮಾಡಿ ಶುಭಕೋರಿದ್ರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭೇಟಿ ಮಾಡಿ ಶುಭಾಶಯ ತಿಳಿಸಿದ ವಿ.ಎಸ್.ಪಾಟೀಲ್ ರಿಗೆ ಮುಖಂಡರಾದ ಕೃಷ್ಣ ಹಿರೇಹಳ್ಳಿ, ಎಚ್.ಎಂ.ನಾಯ್ಕ್ ಸೇರಿದಂತೆ ಹಲವರು ಸಾಥ್ ನೀಡಿದ್ರು.
ಮುಂಡಗೋಡ ಅಮ್ಮಾಜಿ ಕೆರೆ ಮೇಲೆ ಆಟೋಗೆ ಕಾರ್ ಡಿಕ್ಕಿ, ಹಲವರಿಗೆ ಗಾಯ..!
ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಅಪಘಾತವಾಗಿದೆ.. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಕಾರ್ ಡಿಕ್ಕಿಯಾದ ಪರಿಣಾಮ ಹಲವರಿಗೆ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಯಲ್ಲಾಪುರ ರಸ್ತೆ ಕಡೆ ಹೊರಟಿದ್ದ ಆಟೋಗೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆ ಹೊರಟಿದ್ದ ಕಾರ್, ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ತಿಳಿದು ಬಂದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿ ಕೆಲವರಿಗೆ ಗಾಯವಾಗಿದೆ. ಆಟೋ ಚಾಲಕ ಇಂದೂರಿನ ಮೆಹೆಬೂಬ್ ಇಂಗಳಗಿ ಗಾಯವಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಕಾರು...
ಧಾರವಾಡ ಡಬ್ಬಲ್ ಮರ್ಡರ್, ನಾಲ್ವರು ಆರೋಪಿಗಳು ಮುಂಡಗೋಡಿನಲ್ಲಿ ವಶಕ್ಕೆ..!
ಧಾರವಾಡದ ಜನತೆಯನ್ನು ಬೆಚ್ಚಿಬಿಳಿಸಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಮುಂಡಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದು ಧಾರವಾಡಕ್ಕೆ ಕರೆದೊಯ್ದಿರೋ ಮಾಹಿತಿ ಲಭ್ಯವಾಗಿದೆ. ಅರ್ಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರೋ ಧಾರವಾಡ ಪೊಲೀಸರು ಸದ್ಯ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ನಡಿಸ್ತಿದಾರೆ. ನಿನ್ನೆ ಅಂದ್ರೆ, ಮೇ.25ರ ತಡರಾತ್ರಿ ಧಾರವಾಡದ ಕಮಲಾಪುರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸಿನಲ್ಲಿ, ಕಮಲಾಪುರ ನಿವಾಸಿ ಮಹಮ್ಮದ ಕುಡಚಿ ಎಂಬುವವರನ್ನು ಆತನ ನಿವಾಸದಲ್ಲೇ ಹತ್ಯೆ ಮಾಡಲಾಗಿತ್ತು. ಆರೋಪಿಗಳೊಂದಿಗೆ...
ಧಾರವಾಡದಲ್ಲಿ ನಡೆದ ಭೀಕರ ಡಬಲ್ ಮರ್ಡರ್ ನಲ್ಲಿ ಮುಂಡಗೋಡ ಯುವಕನ ಹತ್ಯೆ..! ವಿದೇಶಕ್ಕೆ ಹೋಗಬೇಕಾಗಿದ್ದ ಹುಡುಗ ಹೆಣವಾದ..!
ಧಾರವಾಡದಲ್ಲಿ ಡಬಲ್ ಮರ್ಡರ ಆಗಿದೆ. ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ. ಧಾರವಾಡದ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ಘಟನೆ ನಡೆದಿದ್ದು ಇದ್ರಲ್ಲಿ ಮುಂಡಗೋಡಿನ ಯುವಕನೂ ಬರ್ಬರವಾಗಿ ಕೊಲೆಯಾಗಿದ್ದಾನೆ. ಅಂದಹಾಗೆ, ಮುಂಡಗೋಡಿನ ದೇಶಪಾಂಡೆ ನಗರದ ಯುವಕ ಗಣೇಶ್ ಕಮ್ಮಾರ್ (ಸಾಳುಂಕೆ)(24) ಕೊಲೆಯಾಗಿದ್ದಾನೆ. ಮತ್ತೋರ್ವ ಮಹ್ಮದ್ ಖುಡಚಿ (45) ಭೀಕರವಾಗಿ ಹತ್ಯೆಯಾಗಿದ್ದಾನೆ. ಹೀಗಾಗಿ ಚುಮು ಚುಮು ಬೆಳಕಿನಲ್ಲಿ ನಡೆದಿರೋ ಭೀಕರ ಡಬಲ್ ಮರ್ಡರ್ ಗೆ ಧಾರವಾಡದ ಕಮಲಾಪುರ ಗ್ರಾಮ ಬೆಚ್ಚಿ ಬಿದ್ದಿದೆ. ರಿಯಲ್ ಎಸ್ಟೇಟ್...
ವಡಗಟ್ಟಾ ನಾಕಾ ಬಳಿ ಬೈಕ್ ಸ್ಕಿಡ್, ಸವಾರನ ಕಾಲು ಮುರಿತ, ತಾಲೂಕಾಸ್ಪತ್ರೆಗೆ ರವಾನೆ..!
ಮುಂಡಗೋಡ ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ. ಕುಷ್ಟಗಿಯಿಂದ ಮಣಿಪಾಲಕ್ಕೆ ಬೈಕ್ ಮುಖಾಂತರ ತೆರಳುತ್ತಿದ್ದ ನಿರಂಜನ್ ಅಮರೇಶ್ ಅಮ್ಮಿನಗಡ ಎನ್ನುವ ವ್ಯಕ್ತಿಯ ಬೈಕ್ ಅಪಘಾತವಾಗಿದ್ದು, ಸದ್ಯ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಮಾನವೀಯತೆ ತೋರಿದ್ದಾರೆ....
ಕೊಪ್ಪ ಇಂದಿರಾನಗರ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಕೋಡಂಬಿಯ ವ್ಯಕ್ತಿಗೆ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಾಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರೋ ಬೈಕ್ ಸವಾರ, ಕೋಡಂಬಿ ಗ್ರಾಮದ ರಾಘವೇಂದ್ರ ಬಾಬು ಅರ್ಕಸಾಲಿ ಅಂತಾ ಗುರುತಿಸಲಾಗಿದೆ. ಈತ ಸಂಜೆ ತನ್ನ ಬೈಕ್‌ಮೂಲಕ ಇಂದಿರಾನಗರದ ಬಳಿ ಹೊರಟಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ದುರ್ಘಟನೆ ನಡೆದಿದೆ. ನಂತರ ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಸವಾರನಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ...
ಯಲ್ಲಾಪುರ ರಸ್ತೆಯ ಗುಂಜಾವತಿ ಬಳಿ ಕಾರು ಅಪಘಾತ, ಮದುವೆಗೆಂದು ಬಂದಿದ್ದ ಮಹಾರಾಷ್ಟ್ರದ ಕುಟುಂಬಕ್ಕೆ ಆಘಾತ..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ, ಗುಂಜಾವತಿ ನಡುವೆ ಕಾರು ಅಪಘಾತವಾಗಿದೆ. ಮದುವೆಗೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಕಾರಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮಹಾರಾಷ್ಟ್ರ ಮೂಲದ ಕುಟುಂಬ ಇಂದು ಮುಂಡಗೋಡ ತಾಲೂಕಿನಲ್ಲಿ ಮದುವೆ ಇದ್ದ ಕಾರಣ, ಮದುವೆಗೆಂದು ಆಗಮಿಸಿತ್ತು. ಮದುವೆ ಮುಗಿಸಿಕೊಂಡು ಹೊರಡುವಾಗ ಬಡ್ಡಿಗೇರಿ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ಹೀಗಾಗಿ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಆದ್ರೂ ಅದೃಷ್ಟವಶಾತ್ ಕಾರಲ್ಲಿದ್ದವರಿಗೆ...