ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋರೊನಾ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಹೊಂಡ, ಬಸಾಪುರ, ರಾಮಾಪುರ, ಕೆಂದಲಗೇರಿ ಯರೇಬೈಲ್ ಗ್ರಾಮಗಳಲ್ಲಿರೋ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಯಿತು.. ಈ ಲಸಿಕೆ ಹಾಕುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಮಾರೆಕ್ಕ ದುರ್ಗ ಮುರ್ಗಿ, ಉಪಾಧ್ಯಕ್ಷ ಬಸವರಾಜ್ ನಡುವಿನಮನಿ, ಸದಸ್ಯರಾದ ಸಂತೋಷ ಬೋಸ್ಲೆ, ಬರಮು ಅಲೂರು, ರಮೇಶ್ ನೇಮಣ್ಣವರ್, ರೇಷ್ಮಾ ಕಲಘಟಗಿ, ವಿದ್ಯಾ ಕವಟೆ, ಮಹ್ಮದ್ ಕವಲವಾಡ್ ಪರಶು ಕಬ್ಬೇರ್ ಸೇರಿದಂತೆ ಹಲವರು ಭಾಗವಹಿಸಿದ್ದರು..
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಇಂದೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಹೆಬ್ಬಾರ್ ಚಾಲನೆ
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಗಾಟಿಸಿದ್ರು.. ಇಂದೂರು ಗ್ರಾಮದ ಶ್ರೀ ಗುರು ಗೋವಿಂದ ಸಂತ ಶಿಶುನಾಳ ಶರೀಫರ ಮಠದ ಆವರಣದಲ್ಲಿ ಆಯೋಜನೆಗೊಂಡಿರೋ ಸಮ್ಮೇಳನದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಸಹದೇವಪ್ಪ ನಡಗೇರ್ ಅವರನ್ನು ಸಚಿವರು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸಮ್ಮೇಳನಾಧ್ಯಕ್ಷರ ಹಿತ ನುಡಿಯನ್ನು ಲೋಕಾರ್ಪಣೆಗೊಳಿಸಿದರು. ಸಮ್ಮೇಳನದಲ್ಲಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜಿಲ್ಲಾಪಂಚಾಯತ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಚುಸಾಪ ಜಿಲ್ಲಾಧ್ಯಕ್ಷ ಜೆ.ಯು.ನಾಯಕ, ತಾಲೂಕಾ ಘಟಕದ ಅಧ್ಯಕ್ಷ ಶ್ರೀ ರಮೇಶ ಅಂಬಿಗೇರ ಹಾಗೂ ಪ್ರಮುಖರು, ಸಾಹಿತಿಗಳು ಹಾಜರಿದ್ದರು..
ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹಾವಳಿ: ಸವದತ್ತಿ ಎಲ್ಲಮ್ಮನ ದೇಗುಲ ಬಂದ್, ಇನ್ಮುಂದೆ ಭಕ್ತರಿಗಿಲ್ಲ ದರ್ಶನ ಭಾಗ್ಯ
ಬೆಳಗಾವಿ- ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.. ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.. ಬರೋಬ್ಬರಿ 11ತಿಂಗಳ ನಂತರ, ಕಳೆದ ಫೆ.1 ರಂದು ಮತ್ತೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.. ಸದ್ಯ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ..
ಫೆ. 1 ರಿಂದ ಸವದತ್ತಿ ಯಲ್ಲಮ್ಮದೇವಸ್ಥಾನ ಓಪನ್- 11ತಿಂಗಳ ನಂತ್ರ ಮತ್ತೆ ಏಳುಕೊಳ್ಳದಲ್ಲಿ ಮೊಳಗಲಿದೆ ಉದೋ..ಉದೋ..
ನಿತ್ಯವೂ ಪ್ರತಿಧ್ವನಿಸುತ್ತಿದ್ದ ಉದೋ.. ಉದೋ..ಯಲ್ಲಮ್ಮ.. ನಾಮಸ್ಮರಣೆ ಕೇಳಿ ಬರೋಬ್ಬರಿ 11ತಿಂಗಳೇ ಗತಿಸಿದೆ..ರಾಜ್ಯ ಹೊರ ರಾಜ್ಯಗಳ ಲಕ್ಷಾಂತರ ಭಕ್ತರಿಗೆ ಸವದತ್ತಿಯ ಯಲ್ಲಮ್ಮದೇವಿಯ ದರ್ಶನವೇ ಸಿಗದೇ ನಿತ್ಯವೂ ಚಡಪಡಿಸುತ್ತಿದ್ದಾರೆ..ಯಾವಾಗ ದೇವಿ ದರ್ಶನ ಸಿಗುತ್ತೆ ಅಂತ ಭಕ್ತರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದರು.. ಕೊನೆಗೂ ಭಕ್ತರ ನಿರೀಕ್ಷೆ ಕೈಗೂಡಿದೆ. ಇದೇ ಫೆಬ್ರವರಿ 1ರಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಭಕ್ತರಿಗೆ ತೆರೆದುಕೊಳ್ಳುತ್ತಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸವದತ್ತಿ ಯಲ್ಲಮ್ಮ..ಕರ್ನಾಟಕ- ಮಹಾರಾಷ್ಟ್ರ, ತಮಿಳುನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೇವತೆ..ವರ್ಷದ 9ತಿಂಗಳು ಇಲ್ಲಿ ಜಾತ್ರೆ ನಡೆಯುತ್ತೆ… ಜಾತ್ರೆ ಸಂದರ್ಭದಲ್ಲಿ ಭಂಡಾರದ ಜೊತೆಗೆ ಉದೋ.. ಉದೋ.. ಯಲ್ಲಮ್ಮ ಎಂಬ ನಾಮ ಸ್ಮರಣೆ ಗುಡ್ಡದ ತುಂಬ ಪ್ರತಿಧ್ವನಿಸುತ್ತದೆ… ಇಂತಹ ವೈಭವದ ಜಾತ್ರೆ ಸಂಭ್ರಮಕ್ಕೆ ಕೊರೊನಾ ಮಹಾಮಾರಿ ಕಡಿವಾಣ ಹಾಕಿತ್ತು… ಕಳೆದ 11ತಿಂಗಳಿಂದ ಬಂದ್ ಆಗಿದ್ದ ದೇವಸ್ಥಾನವನ್ನು ನಾಳೆ ಅಂದರೆ ಫೆಬ್ರುವರಿ 1ರಂದು ರೀ ಓಪನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆಡಳಿತ...
ಹುನಗುಂದದಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
ಮುಂಡಗೋಡ- ತಾಲೂಕಿನ ಹುನಗುಂದದಲ್ಲಿ ಇಂದು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಿತು.. ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ, ಹತ್ತಾರು ಯುವಕರು ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು.. ಈ ವೇಳೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..
ಪುಟ್ಟ ಮಗು ಬಿಟ್ಟು ಹೋದ್ರಾ ಪೋಷಕರು..? ಹೆತ್ತಮ್ಮನಿಗಾಗಿ ಹಂಬಲಿಸುತ್ತಿದೆ ಕಂದಮ್ಮ.. ಅಕ್ಕಿ ಆಲೂರಿನಲ್ಲಿ ಮನಕಲಕುವ ಘಟನೆ
ಹಾನಗಲ್- ಅದೇನು ನಿಷ್ಕರುಣೆಯೋ ಗೊತ್ತಿಲ್ಲ, ಅಥವಾ ಪೋಷಕರ ನಿರ್ಲಕ್ಷವೋ ಗೊತ್ತಿಲ್ಲ.. ಹಾಲುಗಲ್ಲದ ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದಾರೆ.. ಇದು ನಡೆದದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ನಾಲ್ಕರ ಕ್ರಾಸ್ ಬಳಿ.. ಮುದ್ದು ಕಂದನನ್ನು ಒಬ್ಬಂಟಿಯಾಗಿ ಹಡೆದ ತಾಯಿಯೊಬ್ಬಳು ಬಿಟ್ಟು ಹೋದ ಮನಕಲುಕುವ ಘಟನೆ ಇದು.. ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವನ್ನು ಇಲ್ಲಿನ ಡಾಬಾ ವೊಂದರಲ್ಲಿ ಯಾರೋ ಅಪರಿಚಿತರು ಮಗುವನ್ನು ತಂದು ಆಟವಾಡಿಸುವ ನೆಪದಲ್ಲಿ ಬಿಟ್ಟು ಹೋಗಿದ್ದಾರೆ.. ಮುದ್ದಾದ ಗಂಡು ಮಗು ಕಂಡು ಸ್ಥಳೀಯರು ಮಮ್ಮಲು ಮರುಗಿದ್ದಾರೆ..ಇದನ್ನು ಗಮನಿಸಿದ ಸ್ಥಳೀಯರು ಹಾನಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಮಗು ಪೋಷಕರ ಬಳಿ ಇದ್ದುದರ ವಿಡಿಯೋ ಲಭ್ಯವಾಗಿದೆ… ಆದರೆ ಇದು ಅವಳ ಮಗುನಾ ಅಥವಾ ಕದ್ದಿರುವ ಮಗುನಾ ಎಂಬ ವಿಚಾರ ತಿಳಿಯುವುದಕ್ಕೂ ಮುನ್ನ ಆ ಮಹಿಳೆ ನಾಪತ್ತೆಯಾಗಿದ್ದಾಳೆ.. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಾನಗಲ್ ಪೊಲೀಸ್ ರು ಹಾಗೂ ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ್, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಇದೀಗ...
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ ಅಪಘಾತದಲ್ಲಿ ದುರ್ಮರಣ- ಸಚಿವ ಹೆಬ್ಬಾರ್ ಸಂತಾಪ
ಯಲ್ಲಾಪುರ- ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಅವರ ಧರ್ಮಪತ್ನಿ ವಿಜಯಾ ಶ್ರೀಪಾದ ನಾಯ್ಕ್ ರವರ ದುರ್ಮರಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.. ಇಂದು ಮುಂಜಾನೆ ಶ್ರೀಪಾದ ನಾಯ್ಕ ಹಾಗೂ ಅವರ ಧರ್ಮಪತ್ನಿ ವಿಜಯಾ ನಾಯ್ಕ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೆಬ್ಬಾರ್ ತಮ್ಮ ಸಂತಾಪ ಸೂಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರೋ ಶಿವರಾಮ್ ಹೆಬ್ಬಾರ್, ಶ್ರಿಪಾದ ನಾಯ್ಕರು ಶೀಘ್ರ ಗಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ..
ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದುರ್ಮರಣ
ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿ, ಸಚಿವರ ಧರ್ಮಪತ್ನಿ ವಿಜಯಾ ಸಾವಿಗೀಡಾಗಿದ್ದಾರೆ.. ಅಲ್ದೆ, ಸಚಿವರ ಆಪ್ತ ಕಾರ್ಯದರ್ಶಿ ಕೂಡ ಮೃತಪಟ್ಟಿದ್ದಾರೆ.. ಇನ್ನು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಸ್ಥಿತಿ ಗಂಭೀರವಾಗಿದೆ ಅಂತಾ ತಿಳಿದು ಬಂದಿದೆ..
ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಸಚಿವರೂ ಸೇರಿ ನಾಲ್ವರಿಗೆ ಗಾಯ
ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದೆ.. ಕೇಂದ್ರ ಆಯುಷ್ ಇಲಾಖೆ ಸಚಿವರಾಗಿರೋ ಶ್ರೀಪಾದ್ ನಾಯಕ್, ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಘಟನೆ ನಡೆದಿದೆ..ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿಗೆ ಗಂಭೀರ ಗಾಯವಾಗಿರೋ ಮಾಹಿತಿ ಕೆನರಾ ನ್ಯೂಸ್ ಹಂಟ್ ಗೆ ಲಭ್ಯವಾಗಿದೆ.. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆಮಾಡಲಾಗಿದೆ..ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
ಹುನಗುಂದ ಕೈ ಕಾರ್ಯಕರ್ತರನ್ನ ಭೇಟಿ ಮಾಡಿದ ಮಾಜಿ ಸಚಿವ ಸಂತೋಷ ಲಾಡ್
ಮುಂಡಗೋಡ- ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಹುನಗುಂದ ಕಾಂಗ್ರೆಸ್ ಕಾರ್ಯಕರ್ತರನ್ನು ಮಾಜಿ ಸಚಿವ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಸಂತೋಷ ಲಾಡ್ ಭೇಟಿ ಮಾಡಿದ್ರು.. ತಾಲೂಕಿನ ಹುನಗುಂದ, ಅಗಡಿ, ಇಂದೂರು, ಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂತೋಷ ಲಾಡ್ ಕಾರ್ಯಕರ್ತರನ್ನು ಭೇಟಿ ಮಾಡಿದ್ರು.. ಬೆಳಿಗ್ಗೆ ಹುನಗುಂದದ ನೂತನ ವಿಠ್ಠಲ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಚಿವ್ರು ಸಿದ್ದನಗೌಡ ಪಾಟೀಲ್, ತುಕಾರಾಮ್ ಹೊನ್ನಳ್ಳಿ ಸೇರಿ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಬೆಂಬಲಿಸುವಂತೆ ಮನವಿ ಮಾಡಿದ್ರು.. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಚ್.ಎಂ.ನಾಯ್ಕ, ಬಸವರಾಜ್ ಆಸ್ತಕಟ್ಟಿ, ಮರಿಯಪ್ಪ ಬೆನಕನಳ್ಳಿ, ಫಕ್ಕಿರಯ್ಯ ಹಿರೇಮಠ್, ಶೇಖಪ್ಪ ನಡುವಿನಮನಿ ಸೇರಿ ಹಲವರು ಉಪಸ್ಥಿತರಿದ್ದರು.. ಮುಂಡಗೋಡ ತಾಲೂಕಿನಲ್ಲಿ ಇಂದು ಲಾಡ್ ಪ್ರವಾಸ.. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ ಸಂತೋಷ್ ಲಾಡ್ ಇಂದು ಮುಂಡಗೋಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.. ಹುನುಗುಂದ ಗ್ರಾಮದಿಂದ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಕಾರ್ಯಕರ್ತರನ್ನು ಭೇಟಿಯಾಗಲು...