ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಗಾಟಿಸಿದ್ರು..

ಇಂದೂರು ಗ್ರಾಮದ ಶ್ರೀ ಗುರು ಗೋವಿಂದ ಸಂತ ಶಿಶುನಾಳ ಶರೀಫರ ಮಠದ ಆವರಣದಲ್ಲಿ ಆಯೋಜನೆಗೊಂಡಿರೋ ಸಮ್ಮೇಳನದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಸಹದೇವಪ್ಪ ನಡಗೇರ್ ಅವರನ್ನು ಸಚಿವರು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸಮ್ಮೇಳನಾಧ್ಯಕ್ಷರ ಹಿತ ನುಡಿಯನ್ನು ಲೋಕಾರ್ಪಣೆಗೊಳಿಸಿದರು.

ಸಮ್ಮೇಳನದಲ್ಲಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜಿಲ್ಲಾಪಂಚಾಯತ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಚುಸಾಪ ಜಿಲ್ಲಾಧ್ಯಕ್ಷ ಜೆ.ಯು.ನಾಯಕ, ತಾಲೂಕಾ ಘಟಕದ ಅಧ್ಯಕ್ಷ ಶ್ರೀ ರಮೇಶ ಅಂಬಿಗೇರ ಹಾಗೂ ಪ್ರಮುಖರು, ಸಾಹಿತಿಗಳು ಹಾಜರಿದ್ದರು..

 

error: Content is protected !!