ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಮುಂಡಗೋಡ; ತಾಲೂಕಿನ ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟ ಪುನೀತ್ ರಾಜಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಪುನೀತ್ ಅಭಿಮಾನಿಗಳು ಶಾಲಾ ಮಕ್ಕಳಿಗೆ ಪುನೀತ್ ನೆನಪಿಗಾಗಿ ಕಲಿಕಾ ಸಾಮಗ್ರಿಯ ಕಾಣಿಕೆ ನೀಡಿದ್ರು..ಈ ವೇಳೆ ಸಂತೋಷ ಆಲದಕಟ್ಟಿ, ಎಂ.ಪಿ.ಕುಸೂರ, ರಾಜಶೇಖರ ಹಿರೇಮಠ, ಉದಯ ಕುಸೂರ, ಪರಶುರಾಮ ಟಿಕ್ಕೋಜಿ, ಪರಶುರಾಮ ತೆಗ್ಗಳ್ಳಿ, ಮಹಾಬಲೇಶ್ವರ ಬನವಾಸಿ, ಸಿ.ಬಿ. ಅರಳಿಕಟ್ಟಿ, ಹುಸೇನಸಾಬ್ ಕೊಳಗಿ, ಉದಯ ಕುಸೂರ, ಮೋಹನ ಗುಲ್ಮಾನವರ, ಮುಖ್ಯಾಧ್ಯಾಪಕಿ ನಾಗರತ್ನಮ್ಮ, ಶಿಕ್ಷಕರಾದ ಬಸವರಾಜ ಬೆಂಡಲಗಟ್ಟಿ, ಗೋವಿಂದರಾಜ ಜೋಶಿ, ಸುಜಾತಾ ನಾಯ್ಕ, ಪ್ರತಿಮಾ ಶೆಟ್ಟಿ, ಸರೋಜಾ ಗೌಡ, ಮಂಗಳಾ ನಾಯ್ಕ ಹಾಜರಿದ್ದರು.

ಇಂದೂರಿನಲ್ಲಿ “ಪುನೀತ್” ಪುಣ್ಯಸ್ಮರಣೆ, ಕ್ಯಾಂಡಲ್ ಹಚ್ಚಿ ಶೃದ್ಧಾಂಜಲಿ..!

ಇಂದೂರಿನಲ್ಲಿ “ಪುನೀತ್” ಪುಣ್ಯಸ್ಮರಣೆ, ಕ್ಯಾಂಡಲ್ ಹಚ್ಚಿ ಶೃದ್ಧಾಂಜಲಿ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ರವರ 11 ದಿನದ ಪುಣ್ಯತಿಥಿಯ ನಿಮಿತ್ತ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು. ಸೋಮವಾರ ಸಂಜೆ ಇಲ್ಲಿನ ಮುಖ್ಯ ಸರ್ಕಲ್ ನಲ್ಲಿ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನಂತರ ಮೇಣದ ಬತ್ತಿ ಹಚ್ಚಿ ಶೃದ್ಧಾಂಜಲಿ ಅರ್ಪಿಸಲಾಯಿತು. ಪುನೀತ್ ರಾಜಕುಮಾರ್ ಮತ್ತೆ ಹುಟ್ಟಿ ಬನ್ನಿ ಅಂತಾ ಘೋಷಣೆ ಕೂಗಿದ ಅಭಿಮಾನಿಗಳು ಪುನೀತ್ ಅಕಾಲಿಕ ನಿಧನಕ್ಕೆ ಕಂಬನಿ‌ ಮಿಡಿದ್ರು.

ಸಿದ್ದನಕೊಪ್ಪದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳೇ ಕಣದಲ್ಲಿ ಘರ್ಜನೆ..!

ಸಿದ್ದನಕೊಪ್ಪದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳೇ ಕಣದಲ್ಲಿ ಘರ್ಜನೆ..!

ಮುಂಡಗೋಡ: ತಾಲೂಕಿನ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಉದ್ಘಾಟನೆಗೆ ಬಂದಿದ್ದ ಅತಿಥಿಗಳು ಕಬಡ್ಡಿ ಆಟ ಆಡಿ ಸಂಭ್ರಮಿಸಿದ್ರು. ಎರಡು ತಂಡಗಳಾಗಿ ಕಣಕ್ಕಿಳಿದ ಅತಿಥಿ ಮಹೋದಯರು ಕಬಡ್ಡಿ ಆಟದ ಮಜಲುಗಳನ್ನು ಪ್ರದರ್ಶಿಸಿದ್ರು. ಮಳಗಿಯ ಸಂತೋಷ ಶೇಟ್ ರಾಯ್ಕರ್,ಪಕ್ಕೀರಪ್ಪ, ಶಿವಾಜಿ ಸಿಂಧೆ, ಪ್ರಕಾಶ ಅಜ್ಜಮನವರ್ ಸೇರಿದಂತೆ ಹಲವರು ಕಬಡ್ಡಿ ಆಟದಲ್ಲಿ ಪಾಲ್ಗೊಂಡರು. ಇನ್ನು ನಿನ್ನೆಯಿಂದಲೂ ಸಿದ್ದನಕೊಪ್ಪ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿವೆ.

ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಮತ್ತೆ ಚಿಣ್ಣರ ಕಲರವ..!

ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಮತ್ತೆ ಚಿಣ್ಣರ ಕಲರವ..!

ಮುಂಡಗೋಡ: ತಾಲೂಕಿನಲ್ಲಿ ಸೋಮವಾರದಿಂದ ಅಂಗನವಾಡಿ ಕೇಂದ್ರಗಳು ಮತ್ತೆ ಚಾಲನೆ ಪಡೆದುಕೊಂಡಿವೆ. ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಅಂಗಮವಾಡಿ ಕೇಂದ್ರಗಳನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿ, ಪೂಜೆ ಮಾಡಿ ಪುನರಾರಂಭ ಮಾಡಲಾಗಿದೆ. ಕೊರೋನಾ ಸಂಕಷ್ಟದ ನಡುವೆ ಬಂದ್ ಆಗಿದ್ದ ಅಂಗನವಾಡಿಗಳು ಇಂದಿನಿಂದ ಪುಟ್ಟ ಪುಟ್ಟ ಮಕ್ಕಳ ಕಲರವದೊಂದಿಗೆ ಶುರುವಾದವು. ತಾಲೂಕಿನ ಅಗಡಿಯಲ್ಲಿ ಅಂಗನವಾಡಿಯ ಪುನರಾರಂಭಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಗನವಾಡಿ ಕಾರ್ಯಕರ್ತರು ಮಕ್ಕಳನ್ನು ಬರಮಾಡಿಕೊಂಡರು..

ಮುಂಡಗೋಡಿನಲ್ಲಿ ಹಾಡಹಗಲೇ ಕಳ್ಳನ ಕರಾಮತ್ತು, ಹಣದ ಬ್ಯಾಗ್ ಕಿತ್ತು ಪರಾರಿ ಯತ್ನ, ಬೆನ್ನತ್ತಿ ಹಿಡಿದ ಸಾರ್ವಜನಿಕರು..!

ಮುಂಡಗೋಡಿನಲ್ಲಿ ಹಾಡಹಗಲೇ ಕಳ್ಳನ ಕರಾಮತ್ತು, ಹಣದ ಬ್ಯಾಗ್ ಕಿತ್ತು ಪರಾರಿ ಯತ್ನ, ಬೆನ್ನತ್ತಿ ಹಿಡಿದ ಸಾರ್ವಜನಿಕರು..!

ಮುಂಡಗೋಡ: ಪಟ್ಟಣದಲ್ಲಿ ಚಾಲಾಕಿ ಕಳ್ಳನೊಬ್ಬ ಹಾಡಹಗಲೇ ಹಣದ ಬ್ಯಾಗ್ ಕಿತ್ತುಕೊಂಡು ಓಡಿ ಹೋದ ಘಟನೆ ನಡೆದಿದೆ.. ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ಇಂದು ಒಂದು ಲಕ್ಷ ರೂ. ಹಣವನ್ನು ತಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಬ್ಯಾಂಕ್ ಗೆ ಜಮಾ ಮಾಡಲು ಹೊರಟಿದ್ದಾರೆ. ಈ ವೇಳೆ ಯಲ್ಲಾಪುರ ರಸ್ತೆಯ ತಂಗಮ್ ಮೆಡಿಕಲ್ಸ್ ನಲ್ಲಿ ಮಾತ್ರೆ ಖರೀಧಿಸಲು ಹೋಗಿದ್ದಾರೆ‌. ಈ ವೇಳೆ ಇದನ್ನೇಲ್ಲ ಗಮಿಸುತ್ತಲೇ ಇದ್ದ ವ್ಯಕ್ತಿ ಏಕಾಏಕಿ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ನಂತರ ಬ್ಯಾಗ್ ಕಳೆದುಕೊಂಡ ಅಂಚೆಕಚೇರಿ ಸಿಬ್ಬಂದಿ ಕೂಗಾಡಿದಾಗ ಸಾರ್ವಜನಿಕರು ಕಳ್ಳನನ್ನು ಬೆನ್ನತ್ತಿದ್ದಾರೆ. ಎಲ್ಲರಿಂದಲೂ ತಪ್ಪಿಸಿಕೊಂಡು ಓಡಿ ಹೋದ ಕಳ್ಳ, ಕೊನೆಗೆ ಶಿವಾಜಿ ಬ್ಯಾಂಕ್ ಬಳಿ ಸಾರ್ವಜನಿಕರ ಕೈಗೆ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ‌. ತಾಯಿಯ ಜೊತೆ ಬಂದಿದ್ದ..! ಅಂದಹಾಗೆ, ಸಾರ್ವಜನಿಕರ ಕೈಗೆ ಸಿಕ್ಕು ಧರ್ಮದೇಟು ತಿಂತಿದ್ದ ಕಳ್ಳನನ್ನು ಬಿಡಿಸಿಕೊಳ್ಳಲು ಆತನ ತಾಯಿಯೂ ಸ್ಥಳಕ್ಕೆ ಬಂದಿದ್ದಾಳೆ‌. ತಕ್ಷಣವೇ ಸುದ್ದಿ ತಿಳಿದ ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಕಳ್ಳತನದ ಆರೋಪಿ ತಾಯಿ...

ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ..!

ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ..!

ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಚಾಲನೆ ಪಡೆದಿದೆ‌. ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಇಲ್ಲಿನ ಗ್ರಾಮ ಪಂಚಾಯತಿ ಅದ್ಯಕ್ಷೆ ರೇಣುಕಾ ಮಾಯಣ್ಣವರ್ ಉದ್ಘಾಟಿಸಿದ್ರು. ಈ ವೇಳೆ ಸಂತೋಷ ಶೇಟ್ ರಾಯ್ಕರ್, ಆಶಾ ರಾಯ್ಕರ್, ಪಕ್ಕೀರಪ್ಪ, ಶಿವಾಜಿ ಸಿಂಧೆ, ಪ್ರಕಾಶ ಅಜ್ಜಮನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ಮುಂಡಗೋಡ; ತಾಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುತ್ತ ಮುತ್ತಲ ತಾಲೂಕು ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಾ ಹೋರಿಗಳು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾದವು. ಜಿಲ್ಲೆ ಹೊರಜಿಲ್ಲೆಗಳಿಂದ ಬಂದಿದ್ದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಗಳ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ತಮ್ಮ ನೆಚ್ಚಿನ ಹೋರಿಗಳು ಕಣದಲ್ಲಿ ಇಳಿಯುತ್ತಲೇ ಕೇಕೆ ಹಾಕಿ ಸಂಭ್ರಮಿಸಿದ್ರು. ಇನ್ನು ಹಾಗೆ ಕಣದಲ್ಲಿ ಬಿಟ್ಟ ಹೋರಿಗಳನ್ನು ಹಿಡಿಯಲು ಯುವಕರ ದಂಡೇ ಅಲ್ಲಿ ನೆರೆದಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಗಳಿಗೆ ಬಹುಮಾನ ನೀಡಲಾಯಿತು.

42 ಲಕ್ಷ ರೂ. ಲಪಟಾಯಿಸಿದ್ದ ಶಿರಸಿಯ ವ್ಯಕ್ತಿ ಅಂದರ್..!

42 ಲಕ್ಷ ರೂ. ಲಪಟಾಯಿಸಿದ್ದ ಶಿರಸಿಯ ವ್ಯಕ್ತಿ ಅಂದರ್..!

ಶಿರಸಿ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಬರೋಬ್ಬರಿ 42 ಲಕ್ಷ ರೂ. ವಂಚಿಸಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸಿದ್ದಾರೆ. 42 ಲಕ್ಷ ರೂ. ವಂಚಿಸಿದ್ದ ಶಿರಸಿಯ ಮೊಹಮದ್ ಇಬ್ರಾಹಿಂ ಕಲಬುರ್ಗಿ @ರೆಡ್ಡಿ (45) ಎಂಬುವ ಆರೋಪಿಯನ್ನು ಬಂಧಿಸಿದ್ದಾರೆ. ರಾಮನಬೈಲ್ ಮೂಲದ ವ್ಯಕ್ತಿಯಾಗಿರೋ ಮೊಹಮ್ಮದ್ ಕಾರ್ ಬ್ರೋಕರ್ ಆಗಿದ್ದ. ತೆಲಂಗಾಣದಲ್ಲಿ ಕೈಚಳಕ ತೋರಿದ್ದ ಈತನ ಮೇಲೆ ತೆಲಂಗಾಣ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು ಶಿರಸಿ ಡಿವೈಎಸ್ಪಿ ಹಾಗೂ ಸಿಪಿಐ, ಶಹರ ಠಾಣೆ ಪಿಎಸೈ ಸಹಕಾರದೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ****************************************************************************** ಜಾಹೀರಾತುಗಳು

ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಡಿಕೆಶಿ ರಣಕಹಳೆ: ಜೆಸಿಬಿ‌ ಮೂಲಕ ಹೂಮಳೆಗೈದ “ಕೈ” ಕಾರ್ಯಕರ್ತರು..!

ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಡಿಕೆಶಿ ರಣಕಹಳೆ: ಜೆಸಿಬಿ‌ ಮೂಲಕ ಹೂಮಳೆಗೈದ “ಕೈ” ಕಾರ್ಯಕರ್ತರು..!

ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಿಂದಲೇ ರಣಕಹಳೆ ಮೊಳಗಿಸಿದ್ದಾರೆ. ಹಾನಗಲ್ ಉಪಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿ, ಸಿಎಂಗೆ ಠಕ್ಕರ್ ಕೊಟ್ಟಿರೋ ಕೈ ಪಡೆ ಈಗ ಶಿಗ್ಗಾವಿಯಲ್ಲೂ ಅದೇ ಮಾದರಿಯ ಗೆಲುವಿಗೆ ಈಗಿಂದಲೇ ತಯಾರಿ ಶುರುವಿಟ್ಟಿದೆಯಾ ಅನ್ನೊ ಪ್ರಶ್ನೆ ಏಳುವಂತೆ ಮಾಡಿದೆ. ಹೀಗಾಗಿ, ಇಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಿರೋ ಡಿಕಶಿಗೆ ಶಿಗ್ಗಾವಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಡಿಕೆಶಿ ಶಿಗ್ಗಾವಿ ಪಟ್ಟಣಕ್ಕೆ ಎಂಟ್ರಿ ನೀಡುತ್ತಲೇ ಜೆಸಿಬಿಗಳಲ್ಲಿ ನಿಂತು ಹೂ ಮಳೆಗರೆದು ಸ್ವಾಗತ ಕೋರಿದ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಪರ ಘೋಷಣೆಗಳ ಸುರಿಮಳೆಗೈದರು. ಇನ್ನು, ಹಾನಗಲ್ ಗೆ ತೆರಳೋ ಮುನ್ನ ಶಿಗ್ಗಾವಿಗೆ ಆಗಮಿಸಿದ ಡಿಕೆ ಶಿವಕುಮಾರ್ ಗೆ ಅದ್ದೂರಿ ಸ್ವಾಗತ ನೀಡಲಾಯಿತು. ಅಂದಹಾಗೆ, ಹಾನಗಲ್ ನೂತನ ಶಾಸಕ ಶ್ರೀನಿವಾಸ್ ಮಾನೆಗೆ ಶಿಗ್ಗಾವುಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಹೀಗಾಗಿ, ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯುತ್ತಿರೋ ಸನ್ಮಾನ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಮಾತನಾಡಿದ್ರು. ಈ ವೇಳೆ ಕೆಪಿಸಿಸಿ...

ಮತ್ತೊಬ್ಬ ಅಪ್ಪು ಅಭಿಮಾನಿ ಸಾವು..! ಪುನೀತ್ ನಿಧನದಿಂದ ಊಟವನ್ನೇ ತ್ಯಜಿಸಿದ್ದ ಅಭಿಮಾನಿ..!!

ಮತ್ತೊಬ್ಬ ಅಪ್ಪು ಅಭಿಮಾನಿ ಸಾವು..! ಪುನೀತ್ ನಿಧನದಿಂದ ಊಟವನ್ನೇ ತ್ಯಜಿಸಿದ್ದ ಅಭಿಮಾನಿ..!!

ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮತ್ತೊಬ್ಬ ಅಭಿಮಾನಿ ಸಾವು ಕಂಡಿದ್ದಾನೆ. ಚಾಮರಾಜನಗರದಲ್ಲಿ ಮತ್ತೊಬ್ಬ ಪುನೀತ್ ಅಭಿಮಾನಿ ಸಾವು ಕಂಡಿದ್ದು, ಶಿವಮೂರ್ತಿ(31) ಮೃತ ಅಭಿಮಾನಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಭೀಮನಗರ ನಿವಾಸಿಯಾಗಿದ್ದ ಈತ, ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೆ ಒಳಗಾಗಿದ್ದ, ಅಲ್ಲದೇ ನೆಚ್ಚಿನ‌ ನಟನ ಸಾವಿನಿಂದ ಊಟ ತ್ಯಜಿಸಿದ್ದ ಹೀಗಾಗಿ, ಕಳೆದ ಒಂದು ವಾರದಿಂದ ಊಟವಿಲ್ಲದೆ ಕ್ಷೀಣಗೊಂಡಿದ್ದ ಶಿವಮೂರ್ತಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಈ ಕಾರಣಕ್ಕಾಗಿ ನೆನ್ನೆ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಶಿವಮೂರ್ತಿ ಹಲವು ಬಾರಿ ಪುನೀತ್ ರನ್ನ ಭೇಟಿಯಾಗುತ್ತಿದ್ದ, ಅಪ್ಪು ಕಂಡರೆ ಶಿವಮೂರ್ತಿಗೆ ಪಂಚಪ್ರಾಣವಾಗಿತ್ತು. ಅಪ್ಪು ನಿಧನದ ಬಳಿಕ ಪುನೀತ್ ಜೊತೆ ತೆಗೆಸಿಕೊಂಡಿದ್ದ ಪೋಟೋ ನೋಡಿ ಕಣ್ಣೀರು ಹಾಕುತ್ತಿದ್ದ ಅಭಿಮಾನಿ. *************************************** ಜಾಹೀರಾತುಗಳು

error: Content is protected !!