ಮುಂಡಗೋಡ: ತಾಲೂಕಿನಲ್ಲಿ ಸೋಮವಾರದಿಂದ ಅಂಗನವಾಡಿ ಕೇಂದ್ರಗಳು ಮತ್ತೆ ಚಾಲನೆ ಪಡೆದುಕೊಂಡಿವೆ. ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಅಂಗಮವಾಡಿ ಕೇಂದ್ರಗಳನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿ, ಪೂಜೆ ಮಾಡಿ ಪುನರಾರಂಭ ಮಾಡಲಾಗಿದೆ. ಕೊರೋನಾ ಸಂಕಷ್ಟದ ನಡುವೆ ಬಂದ್ ಆಗಿದ್ದ ಅಂಗನವಾಡಿಗಳು ಇಂದಿನಿಂದ ಪುಟ್ಟ ಪುಟ್ಟ ಮಕ್ಕಳ ಕಲರವದೊಂದಿಗೆ ಶುರುವಾದವು. ತಾಲೂಕಿನ ಅಗಡಿಯಲ್ಲಿ ಅಂಗನವಾಡಿಯ ಪುನರಾರಂಭಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಗನವಾಡಿ ಕಾರ್ಯಕರ್ತರು ಮಕ್ಕಳನ್ನು ಬರಮಾಡಿಕೊಂಡರು..