ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಗಾಂಧಿನಗರದ ದೇವಪುತ್ರ ಗೋರ್ನಾಳ (35) ಎಂಬ ಯುವಕನೇ ನೇಣಿಗೆ ಶರಣಾಗಿದ್ದು, ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!

ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!

 ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದ್ಯಕ್ಷ ವಿ.ಎಸ್. ಪಾಟೀಲರ ತವರಲ್ಲಿ ನಿತ್ಯವೂ ವಿದ್ಯಾರ್ಥಿಗಳು ಗೋಳು ಅನುಭವಿಸ್ತಿದಾರೆ. ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಅಂದಹಾಗೆ..! ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೋ ಇಲ್ಲ. ಈ ಕಾರಣಕ್ಕಾಗಿ ಅದೇಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಈ ಸಮಸ್ಯೆಯ ಕುರಿತು ಹಲವು ಬಾರಿ ಯಲ್ಲಾಪುರ ಡೀಪೋ ಮ್ಯಾನೇಜರ್ ಗಮನಕ್ಕೆ ತರಲಾಗಿದೆ. ಅಲ್ಲದೇ, ಅಧ್ಯಕ್ಷ ವಿ.ಎಸ್.ಪಾಟೀಲರಿಗೂ ಮನವಿ ನೀಡಲಾಗಿದೆ. ಆದ್ರೆ, ಇದ್ತಾವುದಕ್ಕೂ ಅವರು ಕ್ಯಾರೇ ಅಂದಿಲ್ಲ. ಹೀಗಾಗಿ, ಸದ್ಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ. ಬಸ್ ತಡೆದು ಪ್ರತಿಭಟಿಸಿದ್ದಾರೆ. ಅಧಿಕಾರಿ ಭೇಟಿ..! ಇನ್ನು, ಬಸ್...

ಬೆಳಿಗ್ಗೆ ಬಿಜೆಪಿ, ರಾತ್ರಿ ಕಾಂಗ್ರೆಸ್ ಅನ್ನೋ “ಶಕುನಿ” ಲೀಡರ್ಸ್ ನಮಗೆ ಬೇಕಾಗಿಲ್ಲ: ರವಿಗೌಡ ಪಾಟೀಲ್ ಖಡಕ್ ಮಾತು..!

ಬೆಳಿಗ್ಗೆ ಬಿಜೆಪಿ, ರಾತ್ರಿ ಕಾಂಗ್ರೆಸ್ ಅನ್ನೋ “ಶಕುನಿ” ಲೀಡರ್ಸ್ ನಮಗೆ ಬೇಕಾಗಿಲ್ಲ: ರವಿಗೌಡ ಪಾಟೀಲ್ ಖಡಕ್ ಮಾತು..!

 ಬೆಳಿಗ್ಗೆ ಬಿಜೆಪಿಯಲ್ಲಿ ಚಹಾ ಕುಡಿದು, ರಾತ್ರಿಯಾದಂತೆ ಕಾಂಗ್ರೆಸ್ ಜೊತೆ ಚೀಯರ್ಸ್ ಹೇಳೊ, ಬೆನ್ನಿಗೆ ಚೂರಿ ಹಾಕೊ ಕಾರ್ಯಕರ್ತರು, ಮುಖಂಡರು ನಮಗೆ ಬೇಕಾಗಿಲ್ಲ. ಅಂತಹ ಮನಸ್ಥಿತಿಯವರು ಇದ್ರೆ ಈಗಲೇ ಈ ಸಭೆಯಿಂದಲೇ ಎದ್ದು ಹೋಗಿ ಅಂತಾ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್ ಖಡಕ್ಕಾಗೇ ಎಚ್ಚರಿಸಿದ್ರು. ಅವ್ರು, ಮುಂಡಗೋಡ ತಾಲೂಕಿನ ಇಂದೂರಿನ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ಇ‌ಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ರು. ಕೊಪ್ಪರಿಗೆ ಹಾಲಿನಲ್ಲಿ ಒಂದು ಸಣ್ಣ ಉಪ್ಪಿನ ಚೂರು ಹಾಕಿದ್ರೂ ಇಡೀ ಕೊಪ್ಪರಿಗೆ ಹಾಲೇ ಕೆಟ್ಟು ಹೋಗತ್ತೆ ಹೀಗಾಗಿ, ನಮ್ಮ ಪಕ್ಷದ ಹಾಲಿಗೆ ಉಪ್ಪು ಬೆರೆಸೋರು ನಮಗೆ ಬೇಕಾಗಿಲ್ಲ, ಪಕ್ಷದ ಸಂಘಟನೆ ದೃಷ್ಟಿಯಿಂದ ನಮಗೆ ಅಂತಹ ಕಾರ್ಯಕರ್ತರು, ಮುಖಂಡರು ಬೇಡವೇ ಬೇಡ. ನಾವೇಲ್ಲರೂ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತೇವೆ ಅಂತಾ ರವಿಗೌಡ ಪಾಟೀಲ್ ಖಡಕ್ಕಾಗಿ ನುಡಿದ್ರು.   ಇದಕ್ಕೂ ಮುನ್ನ ಮಾತನಾಡಿದ, ಸಿದ್ದಪ್ಪ ಹಡಪದ, ಪಕ್ಷಕ್ಕಾಗಿ ದುಡಿದವರ ಬಗ್ಗೆ ಹಿರಿಯರು ಯೋಚಿಸಬೇಕಿದೆ. ಕಿವಿ ಕಚ್ಚುವವರನ್ನು...

ಬಿಜೆಪಿ ಪಕ್ಷದ ನೆರಳಲ್ಲೇ ನಡಿತಿದೆಯಾ ಮುಂಡಗೋಡ ಕಸಾಪ..? ಅಷ್ಟಕ್ಕೂ ಕಸಾಪ ಅಧ್ಯಕ್ಷ ನಡಗೇರಿಯವರದ್ದು ಯಾವ ಸಿದ್ಧಾಂತ..?

ಬಿಜೆಪಿ ಪಕ್ಷದ ನೆರಳಲ್ಲೇ ನಡಿತಿದೆಯಾ ಮುಂಡಗೋಡ ಕಸಾಪ..? ಅಷ್ಟಕ್ಕೂ ಕಸಾಪ ಅಧ್ಯಕ್ಷ ನಡಗೇರಿಯವರದ್ದು ಯಾವ ಸಿದ್ಧಾಂತ..?

 ಮುಂಡಗೋಡ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಜಕೀಯದ ಪಕ್ಷದ ಅಡಿ ಕೆಲಸ ಮಾಡ್ತಿದೆ..? ಅಷ್ಟಕ್ಕೂ ಇಲ್ಲಿನ ಸಾಹಿತ್ಯ ಪರಿಷತ್ತಿಗೆ ಯಾವುದಾದ್ರೂ ಪಕ್ಷದ ಸಿದ್ದಾಂತಗಳನ್ನ ಹೇರಲಾಗ್ತಿದೆಯಾ..? ಅಥವಾ ಇಡೀ ಪರಿಷತ್ತನ್ನೇ ರಾಜಕೀಯ ಪಕ್ಷದ ಜೊತೆ ವಿಲೀನಗೊಳಿಸಲಾಗಿದೆಯಾ..? ನಿಜಕ್ಕೂ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ತಾಲೂಕಿನಲ್ಲಿ ಸಾಹಿತ್ಯಿಕ ಕೃಷಿ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರು ಪಕ್ಷವೊಂದರ ಬಲವರ್ಧನೆಯಲ್ಲೇ ಬ್ಯುಸಿಯಾಗಿದ್ದಾರೆ. ಅರಿಕೆಯಿರಲಿ..! ನಾವಿಲ್ಲಿ ಯಾವುದೇ ಪಕ್ಷದ ಸಿದ್ಧಾಂತಗಳ ಬಗ್ಗೆ ಖಂಡಿತ ಮಾತನಾಡಲ್ಲ. ವಿರೋಧಿಸುವುದೂ ಇಲ್ಲ. ಆಯಾ ಪಕ್ಷಗಳಿಗೆ ಅದರದ್ದೇ ಆದ ಸಿದ್ಧಾಂತಗಳಿವೆ. ಆ ಸಿದ್ಧಾಂತಗಳನ್ನು ಒಪ್ಪಿ ಕೋಟ್ಯಾಂತರ ಜನ ಕಾರ್ಯಕರ್ತರು ಆಯಾ ಪಕ್ಷಗಳ ಜೊತೆಗೆ ಬೆನ್ನೆಲುಬಾಗಿ ನಿಂತಿರ್ತಾರೆ. ಅದು ಅವರವರ ಸಿದ್ಧಾಂತಗಳು, ಅವರವರ, ಆಯ್ಕೆ.. ಆದ್ರೆ, ಯಾವುದೋ ಒಂದು ವಿಭಿನ್ನ ನಿಲುವಿನ, ವಿಶಿಷ್ಟ ಸಂಪ್ರದಾಯಗಳ, ವಿಶೇಷ ಕಾಳಜಿ ಇರುವ ಸಂಘಟನೆಯೊಂದರ ಅಧ್ಯಕ್ಷರಾಗಿದ್ದು ಮತ್ಯಾವುದೋ ಪಕ್ಷದ ಜೊತೆ ಜೋತು ಬೀಳೋದು ಸರಿನಾ..? ಈ ಪ್ರಶ್ನೆ ಸದ್ಯ ಮುಂಡಗೋಡಿನ ಪ್ರಜ್ಞಾವಂತ ಸಾಹಿತ್ಯಾಭಿಮಾನಿಗಳದ್ದು. ಅವ್ರು ಸಹದೇಪ್ಪ...

ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

 ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ. ರಸ್ತೆಯೋ ಕೆರೆಯೋ..? ಅಸಲು, ಇಂದು ಸಂಜೆ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ‌. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ‌. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ‌. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ, ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದಾರೆ ಇಲ್ಲಿನ ಜನ.. ಅವೈಜ್ಞಾನಿಕ ಕಾಲುವೆ..! ಅಸಲು,...

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.

ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ಇಬ್ಬರ ಮೃತ ದೇಹ ಪತ್ತೆ..!

ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ಇಬ್ಬರ ಮೃತ ದೇಹ ಪತ್ತೆ..!

 ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ಮಲುಗಿದ್ದಾಗ ಗುಡ್ಡ ಕುಸಿದು ನಾಲ್ವರು ಮನೆಯ ಅಡಿಯಲ್ಲ ಸಿಲುಕಿದ್ದರು, ಹೀಗಾಗಿ, ಸದ್ಯ ಇಬ್ಬರ ಶವವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆಗಿದ್ದಾರೆ. ಲಕ್ಷ್ಮಿ ನಾಯ್ಕ ಎನ್ನುವವರ ಮನೆಯ ಮೇಲೆ ಗುಡ್ಡ ಕುಸಿತ ವಾಗಿತ್ತು. ಲಕ್ಷ್ಮೀ ನಾಯ್ಕ, ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ, ಪುತ್ರ ಅನಂತ ನಾಯ್ಕ (32) ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕ (20) ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದರು. ಅವರಲ್ಲಿ ಓರ್ವ ಮಹಿಳೆ, ಓರ್ವ ಪುರುಷನ ಶವ ಹೊರತೆಗೆಯಲಾಗಿದೆ.

ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕಟಗಿ ಅವಿರೋಧ ಆಯ್ಕೆ ಫಿಕ್ಸ್..!

ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕಟಗಿ ಅವಿರೋಧ ಆಯ್ಕೆ ಫಿಕ್ಸ್..!

ಮುಂಡಗೋಡ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚೌಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಾದಿಯ ಫೈಟ್ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ನೇತ್ರಾವತಿ ಬಿಸವಣ್ಣವರ್ ರಾಜೀನಾಮೆಯಿಂದ ಖಾಲಿಯಾಗಿದ್ದ ಅಧ್ಯಕ್ಷ ಖುರ್ಚಿಗೆ ಮಂಜುನಾಥ್ ಕಟಗಿ ನೂತನ ಅಧ್ಯಕ್ಷರಾಗಿ ಪಟ್ಟಕ್ಕೆ ಏರೋದು ಬಹುತೇಕ ಕನ್ಫರ್ಮ್ ಆದಂತಾಗಿದೆ. ಅವಿರೋಧ ಆಯ್ಕೆನಾ..? ಬಿಜೆಪಿಯಲ್ಲೇ ಎರಡೆರಡು ಬಣಗಳಾಗಿ ಕಚ್ಚಾಡಿಕೊಂಡಿದ್ದ ಚೌಡಳ್ಳಿ ಪಂಚಾಯತಿಯ ಅಧಿಕಾರದ ತಿಕ್ಕಾಟ, ಇಡೀ ತಾಲೂಕಿನ ಬಿಜೆಪಿ ಮುಖಂಡರುಗಳಿಗೆ ಮುಜುಗರ ತಂದಿಟ್ಟಿತ್ತು. ಕೋರ್ಟ್ ಅಂಗಳಕ್ಕೂ ಹೋಗಿ ಬಂದಿದ್ದ ಅಧ್ಯಕ್ಷರ ಬದಲಾವಣೆ ಪ್ರಹಸನಗಳು ಖುದ್ದು ಸಚಿವ ಶಿವರಾಮ್ ಹೆಬ್ಬಾರ್ ರಿಗೂ ಬಿಸಿ ತುಪ್ಪದಂತಾಗಿತ್ತು. ಹೀಗಾಗಿ, ನಿರ್ಭಿಡೆಯಿಂದ ಎರಡೂ ಬಣಗಳ‌ ಜೊತೆ ಮಾತನಾಡಿ ಕೊನೆಗೂ ಒಳ ಬೇಗುದಿ ಹತೋಟಿಗೆ ತರಲಾಗಿತ್ತು. ಹೀಗಾಗಿ, ಒಳಗಿನ ಒಪ್ಪಂದದಂತೆ ಮಂಜುನಾಥ್ ಕಟಗಿ ಅವಿರೋಧವಾಗಿ ಆಯ್ಕೆಯಾಗೋದು ಬಹುತೇಕ ಫಿಕ್ಸ್ ಆದಂತಾಗಿದೆ.

ಭಟ್ಕಳದಲ್ಲಿ ಮಹಾಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮನೆಯಡಿ ಸಿಲುಕಿದ ನಾಲ್ವರು..!

ಭಟ್ಕಳದಲ್ಲಿ ಮಹಾಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮನೆಯಡಿ ಸಿಲುಕಿದ ನಾಲ್ವರು..!

 ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಂತೆ, ಭಟ್ಕಳ ತಾಲೂಕಿನಲ್ಲಿ ಮಹಾಮಳೆ ಆತಂಕದ ಛಾಯೆ ಮೂಡಿಸಿದೆ.  ಮಳೆಯಿಂದಾಗಿ ಹಲವು ಭಾಗಗಳಲ್ಲಿ ಅವಘಡಗಳು ಉಂಟಾಗಿದೆ‌. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಹೀಗೆ ಕುಸಿದ ಗುಡ್ಡದ ಅಡಿಯಲ್ಲಿ ಇರುವ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ. ಲಕ್ಷ್ಮೀ ನಾಯ್ಕ, ಅವರ ಮಗಳು ಲಕ್ಷ್ಮೀ, ಮಗ ಅನಂತ್ ನಾಯ್ಕ್ (32), ಇವರ ಸಹೋದರಿಯ ಮಗ ಪ್ರವೀಣ್ ನಾಯ್ಕ (20) ಈ ಮನೆಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ತಡರಾತ್ರಿ ಸುರಿದ ಭರ್ಜರಿ ಮಳೆಯಿಂದ ಅವಘಡ ಉಂಟಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಇಲ್ಲಿಗೆ ಜೆಸಿಬಿ ಕೂಡ ಆಗಮಿಸಲು ತಡವಾಯಿತು. ಸ್ಥಳೀಯರೇ ಸೇರಿ ಮನೆಯವರ ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಇದೀಗ ಸ್ಥಳಕ್ಕೆ ಜೆಸಿಬಿ ಬಂದಿದ್ದು, ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಮಟ್ಯಾಶ್,  ತಡರಾತ್ರಿ ಅಮೇರಿಕ ಸೇನೆಯಿಂದ ಉಗ್ರನ ಸಂಹಾರ..!

ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಮಟ್ಯಾಶ್, ತಡರಾತ್ರಿ ಅಮೇರಿಕ ಸೇನೆಯಿಂದ ಉಗ್ರನ ಸಂಹಾರ..!

ವಾಷಿಂಗ್ಟನ್: ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಲ್ ಖೈದಾ ಸಂಘಟನೆಯ ನಾಯಕ ಅಮ್ಮಾನ್ ಅಲ್ ಜವಾಹಿರಿಯನ್ನು ಅಮೆರಿಕದ ವಾಯುಪಡೆ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಹತ್ಯೆಗೈದಿದೆ. ಈ ಕುರಿತು ಟ್ವಿಟರ್‌ನಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಅಮೇರಿಕಾ ಏರ್ ಸ್ಟೈಕ್ ನಡೆಸಿರುವುದನ್ನು ದೃಢಪಡಿಸಿದ್ದಾರೆ. ಜುಲೈ 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ಅಮೇರಿಕಾ ಸೇನೆಯಿಂದ ವಾಯುದಾಳಿ ನಡೆಸಲಾಗಿದೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಈ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಮೇರಿಕಾದ ದಾಳಿಯನ್ನು ಮುಜಾಹಿದ್ ಖಂಡಿಸಿದ್ದಾನೆ. ಈ ಕಾರ್ಯಾಚರಣೆಯ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೋಮವಾರ ತಡರಾತ್ರಿ ಸ್ಪಷ್ಟಪಡಿಸಿದ್ದು, ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಮತ್ತು ಸೆಪ್ಟೆಂಬರ್ 11, 2001 ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಅಲ್-ಖೈದಾ ಮುಖ್ಯಸ್ಥ ಅಮ್ಮನ್ ಅಲ್-ಜವಾಹಿರಿಯನ್ನು ಯುನೈಟೆಡ್ ಸ್ಟೇಟ್ಸ್ ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.ಜಗತ್ತಿಗೆ ಕಂಟಕವಾಗಿರುವ...

error: Content is protected !!