“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!

“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!

  ಮೈಲಾರ: “ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್” ಇದು ಪ್ರಸಕ್ತ ವರ್ಷದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, ವೃತಾದಾರಿ ಗೊರವಯ್ಯ ನುಡಿದ ಕಾರ್ಣಿಕ ನುಡಿ. ಗೊರವಯ್ಯ ರಾಮಪ್ಪ ಎಂಬುವವರು 14 ಅಡಿ ಎತ್ತರದ ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಎಂಬ ಕಾರ್ಣಿಕ ವಿಶ್ಲೇಷಣೆ ಮಾಡಲಾಗಿದೆ. ಡೆಂಕಣಮರಡಿಯಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ. ರಾಜಕೀಯ, ಕೃಷಿ ಈ ಬಾರಿಯ ಕಾರ್ಣಿಕ ನುಡಿಯ ಪ್ರಕಾರ, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವವರೊಬ್ಬರು ರಾಜ್ಯವನ್ನು ಆಳುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಇನ್ನು ಪ್ರಸಕ್ತ ವರ್ಷವೂ ಮಳೆಯ ಪ್ರಮಾಣ ಜಾಸ್ತಿಯಾಗಲಿದೆ. ಬೆಳೆಯೂ ಜಾಸ್ತಿ ಆಗಲಿದೆ, ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯೂ ಆಗಲಿದೆ ಅನ್ನೋ ತಾತ್ಪರ್ಯವನ್ನು ವಿವರಿಸಲಾಗಿದೆ.

ಎಣ್ಣೆ ಏಟಲ್ಲಿ ಮಲಗಿದ್ದವನ ಜೇಬಿಗೆ ಕನ್ನ ಹಾಕಿದ ಅಜ್ಜಿ, ಹಣ ಎಗರಿಸಿ ಪರಾರಿ..!

ಎಣ್ಣೆ ಏಟಲ್ಲಿ ಮಲಗಿದ್ದವನ ಜೇಬಿಗೆ ಕನ್ನ ಹಾಕಿದ ಅಜ್ಜಿ, ಹಣ ಎಗರಿಸಿ ಪರಾರಿ..!

 ಯಲ್ಲಾಪುರ: ಎಣ್ಣೆ ಹೊಡೆದು ಟೈಟ್ ಆಗಿ ಮಲಗಿದ್ದವನ ಜೇಬಿನಿಂದ ವೃದ್ದೆಯೋರ್ವಳು ಹಣ ಎಗರಿಸಿದ್ದಾಳೆ. ಹಾಡಹಗಲೇ ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ ಕೆಮೇರಾದಲ್ಲಿ ಸೆರೆಯಾಗಿದೆ. ಯಲ್ಲಾಪುರ ಬಸ್ ನಿಲ್ದಾಣದ ನಂದಿನ ಹಾಲಿನ ಕೌಂಟರ್ ಬಳಿ ಓರ್ವ ವ್ಯಕ್ತಿ, ಫುಲ್ ಟೈಟ್ ಆಗಿ ನಶೆಯಲ್ಲೇ ಮಲಗಿರ್ತಾನೆ. ಈ ವೇಳೆ ಅಲ್ಲಿಗೆ ಬಂದ ವೃದ್ದೆಯೋರ್ವಳು, ಏಕಾಏಕಿ ನಶೆಯಲ್ಲಿ ಮಲಗಿದ್ದವನ ಜೇವಿಗೆ ಕೈ ಹಾಕಿದ್ದಾಳೆ. ಕೈಗೆ ಸಿಕ್ಕಷ್ಟು ಹಣ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ‌. ಇದನ್ನೇಲ್ಲ ಅಲ್ಲೇ ನೋಡುತ್ತ ನಿಂತಿದ್ದ ಯುವಕರು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಕುಡಿದ ನಶೆಯಲ್ಲಿ ಎಲ್ಲೆಂದರಲ್ಲಿ ಮಲಗುವರಿಗೆ ಎಚ್ಚರಿಕೆ ಎನ್ನುವಂತಾಗಿದೆ.

ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಬೆಳ್ಳಂಬೆಳಿಗ್ಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿ, ಚಾಪೆ, ಹಾಗೂ ರಗ್ಗಿನಲ್ಲಿ ಸುತ್ತಿ ಗೋವಿನಜೋಳದ ಜಮೀನಿನಲ್ಲಿ ಬಿಸಾಕಿ ಹೋಗಿದ್ದಾರೆ ದುಷ್ಕರ್ಮಿಗಳು. ಮೃತ ವ್ಯಕ್ತಿ ಸುಮಾರು 35 ವರ್ಷ ಪ್ರಾಯದವನಾಗಿದ್ದು, ಯಾರು, ಎಲ್ಲಿಯವನು ಅನ್ನೊ ಮಾಹಿತಿ ಇನ್ನೂ ಸಿಕ್ಕಿಲ್ಲ. ಗುಪ್ತಾಂಗಕ್ಕೆ ಹೊಡೆದು ಕೊಲೆ..! ಇನ್ನು ಅದೇಲ್ಲೊ ಕೊಲೆ ಮಾಡಿ, ಶವವನ್ನು ಚಾಪೆಯಲ್ಲಿ ಸುತ್ತಿ, ಜಿಗಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಹೋಗಿರೋ ಶವದ ಮುಖ, ತಲೆ ಹಾಗೂ ಗುಪ್ತಾಂಗಕ್ಕೆ ಏಟುಗಳು ಬಿದ್ದು ರಕ್ತಸಿಕ್ತವಾಗಿದೆ. ಹೀಗಾಗಿ, ಮೇಲ್ನೊಟಕ್ಕೆ ಇದೊಂದು ಭಾರೀ ಸೇಡಿನಿಂದ ನಡೆದಿರೋ ಕೊಲೆ ಅಂತಾ ಅನ್ನಲಾಗ್ತಿದೆ. ಬೆಚ್ಚಿ ಬಿದ್ದ ಜನ..! ಭೀಕರವಾಗಿ ಕೊಲೆಗೈದು ಬಿಸಾಡಿರುವ ಮೃತದೇಹ ಕಂಡು ಜಮೀನು ಮಾಲೀಕ ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮದ ಬಳಿ ಚಂದ್ರಕಾಂತ ಕುಬಿಹಾಳ ಎಂಬುವವರ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿದ್ದಾರೆ‌. ಕೊಲೆಗಾರರ ಬಂಧನಕ್ಕೆ ಬಲೆ‌ ಬೀಸಿದ್ದಾರೆ. ಹಾನಗಲ್ ಪೊಲೀಸ್...

ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ಕಾರವಾರ: ಕೇರಳಕ್ಕೆ ಅಕ್ರಮವಾಗಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್ ದೋಕಲೆ ಬಂಧಿತ ವ್ಯಕ್ತಿಯಾಗಿದ್ದು, ಬಂಧಿತನಿಂದ ದಾಖಲೆ ರಹಿತ ರೂ.20,09,720 ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ದಿಂದ ಕೇರಳಕ್ಕೆ ಹಣ ಕೊಂಡೊಯ್ಯುತಿದ್ದನು ಎನ್ನಲಾಗಿದ್ದು, ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿದೆ.

ಅದ್ದೂರಿಯಾಗಿ ನಡೆದ ಹುನಗುಂದ ಪುರಾತನ ಶ್ರೀ ರಾಮಲಿಂಗೇಶ್ವರ ರಥೋತ್ಸವ..!

ಅದ್ದೂರಿಯಾಗಿ ನಡೆದ ಹುನಗುಂದ ಪುರಾತನ ಶ್ರೀ ರಾಮಲಿಂಗೇಶ್ವರ ರಥೋತ್ಸವ..!

 ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ರಾಮಲಿಂಗೇಶ್ವರ ಸ್ವಾಮಿಯ ಪುರಾತನ ಐತಿಹಾಸಿಕ ರಥೋತ್ಸವ ಅದ್ದೂರಿಯಾಗಿ ಜರುಗಿತು. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಶ್ರೀ ರಾಮಲಿಂಗೇಶ್ವರ ದೇವರ, ಪುರಾತನ ರಥದಲ್ಲಿ ರಾಮಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿ ರಥೋತ್ಸವ ಮಾಡಲಾಯಿತು. ಅಂದಹಾಗೆ, ಹುನಗುಂದ ಗ್ರಾಮದಲ್ಲಿ ಪುರಾತನವಾದ ಬೃಹತ್ ರಥ ಆಕರ್ಷಣೀಯವಾಗಿದ್ದು, ವಿಶಿಷ್ಟ ಕುಸೂರಿ ಕಲೆಗಳನ್ನು ಹೊಂದಿದೆ. ರಥದಲ್ಲಿ ವಿವಿಧ ಪ್ರಕಾರದ ದಾರ್ಮಿಕ ಕಥೆಗಳನ್ನು, ಐತಿಹ್ಯಗಳನ್ನು ಸಾರುವ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದ್ದು ವಿಶೇಷವಾಗಿದೆ. ನಾಳೆಯೂ ವೀರಭದ್ರ ರಥೋತ್ಸವ..! ಅಂದಹಾಗೆ, ನಾಳೆ ಮಂಗಳವಾರವೂ ಶ್ರೀ ವೀರಭದ್ರ ಸ್ವಾಮಿಯ ರಥೋತ್ಸವ ನಡೆಯಲಿದೆ. ನಾಳೆ ಬೆಳಿಗ್ಗೆಯಿಂದಲೇ ವೀರಭದ್ರ ಸ್ವಾಮಿಗೆ ಗುಗ್ಗಳೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ. ಆಕರ್ಷಕ ಕೋಲಾಟ..! ಇನ್ನು, ರಥೋತ್ಸವದ ಮೆರವಣಿಗೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಕೋಲಾಟದ ನೃತ್ಯಗಳು ದಾರಿಯುದ್ದಕ್ಕೂ ಆಕರ್ಷಕವಾಗಿದ್ದವು. ವಿಶೇಷ ಅಲಂಕಾರದೊಂದಿಗೆ ವಿವಿಧ ಜಾನಪದ ಹಾಗೂ ಸಿನಿಮಾ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ರು....

8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!

ಹಳಿಯಾಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಾಕಿ ಚಾಲಕನೊಬ್ಬ ಬರೋಬ್ಬರಿ ಎಂಟು ವರ್ಷಗಳ ನಂತ್ರ ಅರೆಸ್ಟ್ ಆಗಿದ್ದಾನೆ. ಭರ್ಜರಿ ಕಾರ್ಯಾಚರಣೆ ನಡೆಸಿರೊ ಹಳಿಯಾಳ ಪೊಲೀಸರು ಆರೋಪಿಯನ್ನು ಬೆಳಗಾವಿಯ ಸವದತ್ತಿಯಲ್ಲಿ ಪತ್ತೆ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಹೀಗಾಗಿ, ಹಳಿಯಾಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ. ಪಂಚಪ್ಪ ಅಯ್ಯಪ್ಪ ಪವಾಡಿ ಎಂಬುವವನನ್ನ ಎಳೆದು ತರಲಾಗಿದೆ. 2014 ರಲ್ಲಿ..! ಅಂದಹಾಗೆ, 31.10.2014 ರಲ್ಲಿ, ಅಂದ್ರೆ ಎಂಟು ವರ್ಷಗಳ ಹಿಂದೆ, ಹಳಿಯಾಳದ ಯಲ್ಲಾಪುರ ರಸ್ತೆಯ ನೀಲವಾಣಿ ಕ್ರಾಸ್ ಸಮೀಪ ಅಪಘಾತವಾಗಿತ್ತು. ರಸ್ತೆ ಬದಿ ನಿಂತಿದ್ದ ಮೌಲಾಸಾಬ್ ಎಂಬುವವರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೌಲಾಸಾಬ್ ಮೃತಪಟ್ಟಿದ್ದರು. ಹೀಗಾಗಿ, ಅಪಘಾತ ಪಡಿಸಿ ಸಾವಿಗೆ ಕಾರಣವಾಗಿದ್ದ ಆರೋಪಿ ಟ್ಯಾಂಕರ್ ಚಾಲಕನ ಮೇಲೆ ಐಪಿಸಿ ಕಲಂ, 304(a) 279, 338 ಅಡಿಯಲ್ಲಿ ಕೇಸು ದಾಖಲಾಗಿತ್ತು. ಹಳಿಯಾಳ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆಯೂ ನಡೆದಿತ್ತು. ಆದ್ರೆ, ಅವತ್ತಿನಿಂದ ಇವತ್ತಿನವರೆಗೂ ಆರೋಪಿ ಚಾಲಕ ಮಾತ್ರ...

ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಮುಂಡಗೋಡ ತಾಲೂಕಿನ ಇಂದೂರು ಹಾಗೂ ಕೊಪ್ಪ ನಡುವೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರೊ ಬೆಳಗಾವಿ ಮೂಲದ ಮಂಜುನಾಥ್ ದಡ್ಡಿ ಎಂಬುವವನೇ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇಂದು ಈತ ಬೈಕ್‌ ಮೇಲೆ ಬರುತ್ತಿದ್ದಾಗ, ಕೊಪ್ಪ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಹೀಗಾಗಿ, ತಲೆಗೆ, ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ, ಅಷ್ಟಕ್ಕೂ ಆ ನಟೋರಿಯಸ್ ಪಡೆಯ ಸದಸ್ಯ ಸಿಕ್ಕಿದ್ದಾದ್ರೂ ಹೇಗೆ ಗೊತ್ತಾ..?

ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ, ಅಷ್ಟಕ್ಕೂ ಆ ನಟೋರಿಯಸ್ ಪಡೆಯ ಸದಸ್ಯ ಸಿಕ್ಕಿದ್ದಾದ್ರೂ ಹೇಗೆ ಗೊತ್ತಾ..?

ಶಿರಸಿ ಸಬ್ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಪ್ರಕಾಶ್ ಸಿದ್ದಿ ಮತ್ತೆ ತಗಲಾಕ್ಕೊಂಡಿದ್ದಾನೆ. ಇನ್ನೇನು ದಟ್ಟ ಕಾಡಿನಲ್ಲಿ ಲೀ‌ನವಾಗಲು ಹೊಂಚು ಹಾಕಿದ್ದ ರಾಬರಿ ಪಡೆಯ ವಾರಸುದಾರನನ್ನು ಬಲೆಗೆ ಕೆಡವಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯ ದಕ್ಷ ಪಿಎಸ್ಐ ಸೀತಾರಾಮ್ ಮತ್ತವರ ಟೀಂ, ಆರೋಪಿ ಪ್ರಕಾಶನ ರೆಕ್ಕೆ ಪುಕ್ಕಗಳನ್ನೇಲ್ಲ ಕಟ್ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಹರೆಪಾಲ್ ಗ್ರಾಮದ ಅಂಚಿನಲ್ಲಿ ಆರೋಪಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಈ‌ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಆರೋಪಿಯ “ಎಸ್ಕೇಪಾಯಣ” ಒಂದು ಹಂತದಲ್ಲಿ ಸುಖಾಂತ್ಯ ಕಂಡಿದೆ. ಬಾತ್ಮಿ ಕೊಟ್ರು ಜನ..! ಅಂದಹಾಗೆ, ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಶಿರಸಿಯ ಸುತ್ತ ಮುತ್ತಲೇ ಓಡಾಡಿಕೊಂಡಿದ್ದ. ಜೈಲಿನ ಅಧಿಕಾರಿಗಳ ಹುಂಬತನವನ್ನೇ ಬಂಡವಾಳ ಮಾಡಿಕೊಂಡು ಕಾಲ್ಕಿತ್ತಿದ್ದ, ಹೇಗಾದ್ರೂ ಮಾಡಿ ತನ್ನ ಟೀಂ ಸೇರಲು ದಟ್ಟ ಅರಣ್ಯದೆಡೆಗೆ ಸಾಗುತ್ತಿದ್ದ. ಇನ್ನೇನು...

ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?

ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?

ಯಲ್ಲಾಪುರ ಪೊಲೀಸರು ಬಂಧಿಸಿದ್ದ ರಾಬರಿ ಗ್ಯಾಂಗ್ ನ ಆರೋಪಿಯೊಬ್ಬ ಜೈಲಿನಿಂದಲೇ ಎಸ್ಕೇಪ್ ಆಗಿದ್ದಾನೆ. ಶಿರಸಿ ಸಬ್ ಜೈಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇವತ್ತು ಬೆಳ್ಳಂ ಬೆಳಿಗ್ಗೆ ಜೈಲಿನಿಂದಲೇ ಕಾಲ್ಕಿತ್ತಿದ್ದಾನೆ. ಅಂದಹಾಗೆ, ಶಿರಸಿ ಸಬ್ ಜೈಲಿನ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದ್ರೋ ಏನೋ ಗೊತ್ತಿಲ್ಲ. ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ನೀರಲ್ಲಿ ಹೋಮ ಹಾಕಿದಂತೆ ಮಾಡಿದ್ದಾರೆ. ಆತ ಪ್ರಕಾಶ್ ಸಿದ್ದಿ..! 24 ವರ್ಷ ವಯಸ್ಸಿನ ಪ್ರಕಾಶ್ ಕ್ರಷ್ಣಾ ಸಿದ್ದಿ ಎಂಬುವ ಆರೋಪಿ ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಜೈಲಿನಿಂದಲೇ ಪರಾರಿಯಾಗಿದ್ದಾನೆ. ಹೀಗಾಗಿ, ಜೈಲಿನ ಅಧಿಕಾರಿಗಳು ಬಾಯಿ ಬಾಯಿ ಬಡೆದುಕೊಳ್ತಿದಾರೆ. ಬಹುಶಃ ಯಲ್ಲಾಪುರ ಪೊಲೀಸರು ತಿಂಗಳುಗಟ್ಟಲೇ ಮಾಡಿದ್ದ ಕಾರ್ಯವನ್ನ ಕ್ಷಣಮಾತ್ರದಲ್ಲಿ ಉಡೀಸ್ ಮಾಡಿದ್ದಾರೆ ಜೈಲು ಅಧಿಕಾರಿಗಳು. ಈ ಕಾರಣಕ್ಕಾಗೇ ಇಡೀ ಪೊಲೀಸ್ ಇಲಾಖೆಯಲ್ಲಿ ಈ ಕೇಸ್ ಒಂಥರಾ ಮುಜುಗರಕ್ಕೆ ಕಾರಣವಾಗಿದೆ. ಅದ್ರ ಜೊತೆ ನಮ್ಮ ಜೈಲಿನಲ್ಲೂ ಹೆಗ್ಗಣಗಳ ಕಾರುಬಾರು ಇದೆಯಾ..? ಅನ್ನೋ ಅನುಮಾನ ಶುರುವಾಗಿದೆ. ಮಂಜು ನಾಯ್ಕ್ ನಿರ್ಲಕ್ಷ..? ಛೇ, ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ...

ತಡಸ ಬಳಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು..! ಮೈಲಾರಕ್ಕೆ ಟ್ರಾಕ್ಟರ್ ನಲ್ಲಿ ಹೊರಟಿದ್ದವರು ಮಸಣ ಸೇರಿದ್ರು,

ತಡಸ ಬಳಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು..! ಮೈಲಾರಕ್ಕೆ ಟ್ರಾಕ್ಟರ್ ನಲ್ಲಿ ಹೊರಟಿದ್ದವರು ಮಸಣ ಸೇರಿದ್ರು,

ಶಿಗ್ಗಾವಿ: ತಾಲೂಕಿನ ಹೊನ್ನಾಪುರ ಬಳಿ ಭೀಕರ ಅಪಘಾತವಾಗಿದೆ. ಶ್ರೀ ಕ್ಷೇತ್ರ ಮೈಲಾರ ದೇವರ ದರ್ಶನಕ್ಕೆಂದು ಹೊರಟ್ಟಿದ್ದವರು ಮಸಣಕ್ಕೆ ಸೇರಿದ್ದಾರೆ. ವೇಗವಾಗಿ ಬಂದ್ ಸ್ವಿಪ್ಟ್ ಕಾರು ಟ್ಯಾಕ್ಟರ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ, ಸ್ಥಳದಲ್ಲೆ ಇಬ್ಬರ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹನುಮಂತಪ್ಪ ಮುಲಗಿ (55), ಚಂದ್ರು ಸಿರಕೋಳ (40) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಹುಬ್ಬಳ್ಳಿ ಸಮೀಪದ ಸೆರೆವಾಡ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ನೂಲ್ವಿ ಗ್ರಾಮದಿಂದ ಮೈಲಾರಕ್ಕೆ ಮೈಲಾರದೇವರ ಜಾತ್ರೆಗೆ ಟ್ರಾಕ್ಟರ್ ಮೂಲಕ ಹೊರಟಿದ್ದರು. ಈ ವೇಳೆ ಟ್ರಾಕ್ಟರ್ ಹಿಂಭಾಗ ಕಾಲುಜೋತು ಬಿಟ್ಟುಕೊಂಡು ಕುಳಿತಿದ್ದ ಭಕ್ತರಿಗೆ, ಹುಬ್ಬಳ್ಳಿಯಿಂದ ಹಾವೇರಿ ಕಡೆ ಬರುತ್ತಿದ್ದ ಕಾರು ಹಿಂಬದಿಯಿಂದ ಏಕಾಏಕಿ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಶಿಗ್ಗಾವಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಕಂಡು ಸ್ಥಳದಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿದ್ದಾರೆ. ತಡಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ...

error: Content is protected !!