ಬಾಚಣಕಿ ನಾಡಬಾಂಬ್ ಸ್ಪೋಟ ಪ್ರಕರಣ, ಕಾರವಾರ ಎಸ್ಪಿ ಸ್ಥಳಕ್ಕೆ ಭೇಟಿ..! ಅರಣ್ಯ ಅಧಿಕಾರಿಗಳೇ ನಿಮಗೆ ಏನೂ ಅನಿಸ್ತಿಲ್ವಾ..?

ಬಾಚಣಕಿ ನಾಡಬಾಂಬ್ ಸ್ಪೋಟ ಪ್ರಕರಣ, ಕಾರವಾರ ಎಸ್ಪಿ ಸ್ಥಳಕ್ಕೆ ಭೇಟಿ..! ಅರಣ್ಯ ಅಧಿಕಾರಿಗಳೇ ನಿಮಗೆ ಏನೂ ಅನಿಸ್ತಿಲ್ವಾ..?

ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಅಂಗಡಿ ಕೆರೆ ಬಳಿ ನಾಡಬಾಂಬ್ ಸ್ಪೋಟಗೊಂಡ ಘಟನೆಗೆ ಸಂಬಂಧಿಸಿದಂತೆ, ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಶುಕ್ರವಾರ ರಾತ್ರಿ ಮಜ್ಜಿಗೇರಿ ಗ್ರಾಮಕ್ಕೆ ಭೇಟಿ ನೀಡಿದ್ರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರೋ ರೈತ, ಕುರಿಗಾಹಿ ಬರಮಪ್ಪ ವಡ್ಡರ್ ಆರೋಗ್ಯ ವಿಚಾರಿಸಿದ್ರು. ಅಲ್ಲದೇ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ್ರು. ಇದು ದುರಂತ..! ಅಸಲು, ಘಟನೆ ನಡೆದು ಎರಡು ದಿನವಾಗಿದೆ. ಯಾವಾಗ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಘಟನೆಯ ಸಂಪೂರ್ಣ ಚಿತ್ರಣ ತೆರೆದು ಇಟ್ಟಿತ್ತೋ ಅದೇ ಕ್ಷಣದಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಮುಂಡಗೋಡಿನ ಸಿಂಗಂ ಸಿಪಿಐ  ಬರಮಪ್ಪ ಲೋಕಾಪುರ್ ಸಾಹೇಬ್ರು, ಪಿಎಸ್ಐ ಪರಶುರಾಮ್ ಸೇರಿದಂತೆ ಕಾರವಾರದಿಂದ ಎಸ್ಪಿ ಸಾಹೇಬ್ರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯ ಕರಾಳತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ‌. ಇಲ್ಲಿನವರೇ ಇಲ್ಲ..! ಆದ್ರೆ, ಈ ಪ್ರಕರಣ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದು, ಕಾಡು ಪ್ರಾಣಿಗಳ ಜೀವ ತೆಗೆಯಲೆಂದೇ ವ್ಯವಸ್ಥಿತ ಗ್ಯಾಂಗ್ ಹೀನ ಕೃತ್ಯ ಮಾಡ್ತಿದೆ...

ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ, ಗಾಯಾಳು ರೈತನ ಮನೆಗೆ ಪಿಎಸ್ಐ ಸೇರಿ ಅರಣ್ಯಾಧಿಕಾರಿಗಳು ಭೇಟಿ..!

ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ, ಗಾಯಾಳು ರೈತನ ಮನೆಗೆ ಪಿಎಸ್ಐ ಸೇರಿ ಅರಣ್ಯಾಧಿಕಾರಿಗಳು ಭೇಟಿ..!

 ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟಗೊಂಡು ಗಾಯಗೊಂಡಿದ್ದ ಮಜ್ಜಿಗೇರಿ ಗ್ರಾಮದ ರೈತನ ಮನೆಗೆ ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಿಎಸ್ಐ ಪರಶುರಾಮ್ ಭೇಟಿ ನೀಡಿದ್ರು. ಗಾಯಾಳುವಿನ ಆರೋಗ್ಯ ವಿಚಾರಿಸಿದ ಅಧಿಕಾರಿಗಳು, ಘಟನೆಯ ಮಾಹಿತಿ ಪಡೆದುಕೊಂಡ್ರು. ಇದಕ್ಕೂ ಮೊದಲು, ಘಟನಾ ಸ್ಥಳದ ಪರಿಶೀಲನೆ ನಡೆಸಿದ ಪಿಎಸ್ಐ ಪರಶುರಾಮ್ ಹಾಗೂ ಅರಣ್ಯ ಅಧಿಕಾರಿಗಳು ಈ ಘಟನೆಯ ಕುರಿತು ಚರ್ಚಿಸಿದ್ರು.

ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ..? ರೈತನಿಗೆ ತೀವ್ರ ಗಾಯ, ಕೈ ಬೆರಳುಗಳೇ ಕಟ್..! ಅಲ್ರಿ ಅಧಿಕಾರಿಗಳೇ ಇದೇಲ್ಲ ನಿಮ್ಮ ಗಮನಕ್ಕೇ ಇಲ್ವಾ..?

ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ..? ರೈತನಿಗೆ ತೀವ್ರ ಗಾಯ, ಕೈ ಬೆರಳುಗಳೇ ಕಟ್..! ಅಲ್ರಿ ಅಧಿಕಾರಿಗಳೇ ಇದೇಲ್ಲ ನಿಮ್ಮ ಗಮನಕ್ಕೇ ಇಲ್ವಾ..?

ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ನಡೆಯಬಾರದ ಭಯಾನಕ ಘಟನೆಯೊಂದು ನಡೆದಿದೆ. ಕುರಿ ಕಾಯುತ್ತಿದ್ದ ವ್ಯಕ್ತಿಯೋರ್ವ ನಾಡಬಾಂಬ್? ಸ್ಪೋಟಗೊಂಡು ಗಾಯಗೊಂಡಿದ್ದಾನೆ‌. ಘಟನೆ ನಡೆದು ಹತ್ತಾರು ಗಂಟೆಗಳೇ ಕಳೆದ್ರೂ ಮುಂಡಗೋಡಿನ ಯಾವೊಬ್ಬ ಅಧಿಕಾರಿಯೂ ಹೇಗಿದ್ದಿಯಪ್ಪಾ ಯಜಮಾನಾ ಅಂತಾ ಬಂದು ಮಾತಾಡಿಸಿಲ್ಲ. ಅದು ಭಯಾನಕ..! ಅಂದಹಾಗೆ, ಬಾಚಣಕಿಯ ಬರಮಪ್ಪ ವಡ್ಡರ್ ಎಂಬುವ ರೈತನೇ ಸದ್ಯ ನಾಡಬಾಂಬ್? ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದಾನೆ. ಈತ ತನ್ನ ಕುರಿಗಳನ್ನು ಮೇಯಿಸಲು ಊರ ಪಕ್ಕದಲ್ಲೇ ಇರೋ ಕೆರೆಯ ಹತ್ತಿರ ಹೋಗಿದ್ದ. ಈ ವೇಳೆ ಬಹಿರ್ದೆಸೆಗೆ ಅಂತಾ ಹೋಗಿದ್ದಾಗ ಹೊಳಪಿರೋ ಒಂದು ವಸ್ತು ಕಂಡಿದೆ. ಅದು ಏನಿರಬಹುದು ಅಂತಾ ಕೈಯಿಂದ ಅದನ್ನ ಹಿಡಿದು ಹಿಚುಕಿದ್ದಾನೆ ಅಷ್ಟೆ. ತಕ್ಷಣವೇ ಅದು ಭಯಾನಕವಾಗಿ ಸ್ಪೋಟಗೊಂಡಿದೆ. ಪರಿಣಾಮ ರೈತನ ಎಡಗೈನ ಎರಡು ಬೆರಳುಗಳೇ ಕಟ್ ಆಗಿವೆ. ಹೀಗಾಗಿ, ಮುಂಡಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ರೈತ ಚಿಕಿತ್ಸೆ ಪಡೆದು ಸದ್ಯ ಮನೆಗೆ ಬಂದಿದ್ದಾನೆ‌. ಆದ್ರೆ, ಇಷ್ಟೇಲ್ಲ ದುರಂತ ಆದ್ರೂ ಈ ಕ್ಷಣದವರೆಗೂ ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ....

ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?

ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಕಾಲೇಜು ಬಳಿ KSRTC ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ. ಗುರುವಾರ ನಡುರಾತ್ರಿಯಲ್ಲಿ ಘಟನೆ ನಡೆದಿದ್ದು ಮಂಗಳೂರಿಗೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ‌. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಭೀಮಪ್ಪ ಮುತ್ತಪ್ಪ ಗಡಾದಿ(34) ತೀವ್ರ ಗಾಯಗೊಂಡಿದ್ದಾನೆ.   ಅಂಬ್ಯುಲೆನ್ಸ್ ಸಿಬ್ಬಂದಿಗೆ ತರಾಟೆ..! ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲು ವೈದ್ಯರು ಸೂಚಿಸಿದ್ದರು. ಹೀಗಾಗಿ, ತಾಲೂಸ್ಪತ್ರೆಯ “ನಗು ಮಗು” ಅಂಬ್ಯುಲೆನ್ಸ್ ಗೆ ಸಂಪರ್ಕಿಸಿದಾಗ ಅಂಬ್ಯುಲೆನ್ಸ್ ಸಿಬ್ಬಂದಿಗಳು ಗಾಯಾಳುವನ್ನು ಸಾಗಿಸಲು ನಕರಾ ಮಾಡಿದ್ದಾರೆ. ಹೀಗಾಗಿ, ಸಾರ್ವಜನಿಕರು ಅಂಬ್ಯುಲೆನ್ಸ್ ಸಿಬ್ಬಂದಿಗಳೊಗೆ ಹಿಗ್ಗಾಮುಗ್ಗಾ ತರಾಟೆಗೆ ಪಡೆದಿದ್ದಾರೆ. ನಂತರ ಸಾರ್ವಜನಿಕರೇ ಅಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಕೂರಿಸಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮಮಂದಿರ ವಿರುದ್ಧ ವಿವಾದಿತ ಸ್ಟೇಟಸ್ ಗಲಾಟೆ, ಗರಗ ಠಾಣೆ ಪಿಎಸ್ಐ ತಲೆದಂಡ..!

ರಾಮಮಂದಿರ ವಿರುದ್ಧ ವಿವಾದಿತ ಸ್ಟೇಟಸ್ ಗಲಾಟೆ, ಗರಗ ಠಾಣೆ ಪಿಎಸ್ಐ ತಲೆದಂಡ..!

ಧಾರವಾಡ ತಾಲೂಕಿನ ಗರಗ ಠಾಣಾ ವ್ಯಾಪ್ತಿಯ ತಡಕೋಡ ಗ್ರಾಮದಲ್ಲಿ ನಡೆದಿದ್ದ ವಿವಾದಿತ ಸ್ಟೇಟಸ್ ಗಲಾಟೆ ವಿಚಾರವಾಗಿ ಗರಗ ಠಾಣೆ ಪಿಎಸ್‌ಐ ತಲೆದಂಡವಾಗಿದೆ. ಪಿಎಸ್‌ಐ ಪ್ರಕಾಶ ಡಿ. ಅಮಾನತು ಮಾಡಿ ಉತ್ತರ ವಲಯ ಐಜಿ ವಿಕಾಸ ಕುಮಾರ್ ಆದೇಶ ಹೊರಡಿಸಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ತಡಕೋಡದಲ್ಲಿ ರಾಮಮಂದಿರ ವಿರುದ್ಧ ಸ್ಟೇಟಸ್ ಹಾಕಿದ್ದ ಸದ್ದಾಂ ಹುಸೇನ್ ಬಂಧನದ ಬಳಿಕ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಘಟನೆಯಲ್ಲಿ ಸದ್ದಾಂ ಮನೆಯ ಎದುರು ಜಮಾಯಿಸಿದ್ದ ಜನರು ಗಲಾಟೆ ಮಾಡಿದ್ದರು. ಗಲಾಟೆ ಬಳಿಕ ಗ್ರಾಮದಲ್ಲಿ ಉಂಟಾಗಿದ್ದ ಅಶಾಂತಿ ಸಂಬಂಧ, ಮುಂಜಾಗ್ರತೆ ತೆಗೆದುಕೊಳ್ಳದೇ ಕರ್ತವ್ಯ ಲೋಪ ಎಸಗಿರೋ ಆರೋಪ ಪಿಎಸ್ ಐ ತಲೆಗೆ ಕಟ್ಟಲಾಗಿದೆ. ಎಸ್ಪಿ ವರದಿ ಆಧರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ.

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂದೂರಿನ ಯುವಕ ಚಿಕಿತ್ಸೆ ಫಲಿಸದೇ ಸಾವು..! ಪ್ರೀತಿಯೇ ಸಾವಿಗೆ ಕಾರಣವಾಯ್ತಾ..?

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂದೂರಿನ ಯುವಕ ಚಿಕಿತ್ಸೆ ಫಲಿಸದೇ ಸಾವು..! ಪ್ರೀತಿಯೇ ಸಾವಿಗೆ ಕಾರಣವಾಯ್ತಾ..?

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಕಳೆದ ರವಿವಾರ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಅಂತಾ ಕುಟುಂಬದ ಮೂಲಗಳು ತಿಳಿಸಿವೆ. ಪವನ್ ಕಬನೂರ್(ಸುತಗಟ್ಟಿ)(23) ಎಂಬುವವನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಈತ ಕಳೆದ ರವಿವಾರ ಮನೆಯಲ್ಲೇ ಕಳೆನಾಶಕ ಸೇವಿಸಿದ್ದ. ಹೀಗಾಗಿ, ತಕ್ಷಣವೇ ಈತನನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಪ್ರೀತಿಗೆ ಬಲಿಯಾಯ್ತಾ ಜೀವ..? ಅಂದಹಾಗೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದ್ರೂ, ಯುವತಿಯೋರ್ವಳ ಪ್ರೀತಿಯಲ್ಲಿ ಬಿದ್ದಿದ್ದ ಮೃತನಿಗೆ ಯುವತಿಯ ತಾಯಿ ಬುದ್ದಿವಾದ ಹೇಳಿದ್ದಳು ಎನ್ನಲಾಗಿದೆ. ಈ ಕಾರಣಕ್ಕಾಗೇ ಯುವಕ ಆತ್ಮಹತ್ಯೆ ಮಾಡಿಕೊಂಡನಾ..? ಗೊತ್ತಿಲ್ಲ, ಇನ್ನಷ್ಟೇ ತಿಳಿದು ಬರಬೇಕಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಖತರ್ನಾಕ ಕಳ್ಳಿಯರ ಬಂಧನ..!

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಖತರ್ನಾಕ ಕಳ್ಳಿಯರ ಬಂಧನ..!

ಮುಂಡಗೋಡಿನ ಯಂಗ್ ಆಂಡ್ ಎನರ್ಜಿಟಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡಸಿದ್ದಾರೆ. ಪರಿಣಾಮ ಇಬ್ಬರು ಖತರ್ನಾಕ ಅಂತರ್ ಜಿಲ್ಲಾ ಕಳ್ಳಿಯರನ್ನು ಹೆಡೆಮುರಿ ಕಟ್ಟಿದ್ದಾರೆ. ಕಳ್ಳಿಯರ ಜಾಡು ಹಿಡಿದು ದೂರದ ಶಿವಮೊಗ್ಗ ಜಿಲ್ಲೆಯಿಂದ ಕಳ್ಳಿಯರನ್ನು ತಂದು ಕೂರಿಸಿದ್ದಾರೆ. ಅಂದಹಾಗೆ ಬಂಧಿತ ಇಬ್ಬರೂ ಕಳ್ಳಿಯರ ಕರಾಮತ್ತುಗಳು ಒಂದೆರಡಲ್ಲ. ಮುಂಡಗೋಡ ಹಾಗೂ ಶಿರಸಿಯಲ್ಲಿ ಅನಾಮತ್ತಾಗಿ ಲಕ್ಷ ಲಕ್ಷ ಬೆಲೆಯ ಬಂಗಾರ, ಹಣ ದೋಚಿಕೊಂಡು ಹೋಗುವ ಹೀನ ದಂಧೆಯವರು. ಅದು ಎರಡು ವರ್ಷದ ಹಿಂದೆ..! ನಿಮಗೆ ನೆನಪಿರಬಹುದು, ಕಳೆದ ಎರಡು ವರ್ಷದ ಹಿ‌ಂದೆ, ಅಂದ್ರೆ, 16.05. 2022 ರಂದು, ಮುಂಡಗೋಡ ಪಟ್ಟಣದ SBI ಬ್ಯಾಂಕ್ ಬಳಿ ಅನಾಮತ್ತಾಗಿ 49 ಸಾವಿರ ರೂಪಾಯಿಗಳನ್ನು ಓರ್ವ ಯುವತಿ ಕಳೆದುಕೊಂಡು ಗೋಳಾಡುತ್ತಿದ್ದಳು. ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಬಶೆಟ್ಟೆಪ್ಪ ಅರಳಿಕಟ್ಟಿ ಎಂಬುವ ಯುವತಿ ಅವತ್ತು ಬ್ಯಾಂಕಿನಿಂದ 49 ಸಾವಿರ ಹಣ ಡ್ರಾ ಮಾಡಿಕೊಂಡು ಇನ್ನೇನು ತನ್ನ ಊರಿಗೆ ಹೋಗಬೇಕು ಅನ್ನುವಷ್ಟರಲ್ಲೇ ಈ ಖತರ್ನಾಕ ಕಳ್ಳಿಯರು ಹಣವನ್ನು ಎಗರಿಸಿ ಬಿಟ್ಟಿದ್ದರು. ಹೀಗಾಗಿ, ಅವತ್ತೇ ಮುಂಡಗೋಡ...

ಉಗ್ರನೊಂದಿಗೆ “ನಂಟಿನ” ಆರೋಪ,  ಭಟ್ಕಳದ ಮಹಿಳೆ ATS ಅಧಿಕಾರಿಗಳ ವಶದಲ್ಲಿ, ವಿಚಾರಣೆ..!

ಉಗ್ರನೊಂದಿಗೆ “ನಂಟಿನ” ಆರೋಪ, ಭಟ್ಕಳದ ಮಹಿಳೆ ATS ಅಧಿಕಾರಿಗಳ ವಶದಲ್ಲಿ, ವಿಚಾರಣೆ..!

ಭಟ್ಕಳ-ಮುಂಬೈನಲ್ಲಿ ಬಂಧಿತನಾಗಿರೋ ಉಗ್ರನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಭಟ್ಕಳದ ಮಹಿಳೆಯನ್ನ ಮುಂಬೈ ಎಟಿಎಸ್ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ತಂಡ ಆಕೆಯನ್ನು ವಶಕ್ಕೆ ಪಡೆದು ಗುರುವಾರ ಭಟ್ಕಳದಲ್ಲಿಯೇ ವಿಚಾರಣೆ ನಡೆಸುತ್ತಿದೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮಹಿಳೆಯನ್ನು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಜಾದ್ ನಗರದ ನಿವಾಸಿ ಆಯಿಷಾ ಎಂದು ಗುರುತಿಸಲಾಗಿದೆ. ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜೊತೆ ನಂಟು ಹೊಂದಿರುವ ಮಹಾರಾಷ್ಟ್ರ ನಾಸಿಕ್ ಮೂಲದ ಯುವಕನನ್ನು ಮುಂಬೈ ಎಟಿಎಸ್ ತಂಡ ಬಂಧಿಸಿತ್ತು. ಆತನ ಜೊತೆ ಸಂಪರ್ಕದಲ್ಲಿದ್ದ ಮುಂಬೈನ ಓರ್ವ ಮಹಿಳೆಯ ಸಂಪರ್ಕದಲ್ಲಿ ಈ ಭಟ್ಕಳದ ಮಹಿಳೆ ಇದ್ದಳು ಎನ್ನಲಾಗಿದೆ. ಈಕೆಯ ಪತಿ ಮರಣಹೊಂದಿದ್ದು, ತಂದೆ ತಾಯಿ ಮಕ್ಕಳ ಜೊತೆ ವಾಸವಾಗಿದ್ದಾಳೆ. ಸ್ಥಳೀಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಹೆಣ್ಣು ಮಕ್ಕಳಿಗೆ ಧರ್ಮಶಿಕ್ಷಣ ಬೋಧಿಸುತ್ತಿದ್ದಳು. ಬಂಧಿತ ಉಗ್ರನಿಗೆ ಹಣ...

ಕಾತೂರು ಬಳಿ ಶಿರಸಿ ಹುಬ್ಬಳ್ಳಿ ರಸ್ತೆ ಮೇಲೆ ಬಿದ್ದ ಬೃಹತ್ ಮರ, ಸಂಚಾರ ಸ್ಥಗಿತ..!

ಕಾತೂರು ಬಳಿ ಶಿರಸಿ ಹುಬ್ಬಳ್ಳಿ ರಸ್ತೆ ಮೇಲೆ ಬಿದ್ದ ಬೃಹತ್ ಮರ, ಸಂಚಾರ ಸ್ಥಗಿತ..!

ಮುಂಡಗೋಡ ತಾಲೂಕಿನ ಮೂಡಸಾಲಿ ಕಾತೂರು ಬಳಿ ಬೃಹತ್ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಶಿರಸಿ ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಕಾತೂರು ಸಮೀಪದಲ್ಲಿ ಘಟನೆ ನಡೆದಿದ್ದು, ರಸ್ತೆಯ ಮೇಲೆಯೇ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.

ಎಂಟು ದಿನಗಳ ನಂತ್ರ, ಕೊನೆಗೂ ತಾಯಿ ಮಡಿಲು ಸೇರಿದ ಚಿರತೆ ಮರಿಗಳು, ನಿಟ್ಟುಸಿರು ಬಿಟ್ಟ ಮುಂಡಗೋಡ  ಅರಣ್ಯ ಅಧಿಕಾರಿಗಳು..!

ಎಂಟು ದಿನಗಳ ನಂತ್ರ, ಕೊನೆಗೂ ತಾಯಿ ಮಡಿಲು ಸೇರಿದ ಚಿರತೆ ಮರಿಗಳು, ನಿಟ್ಟುಸಿರು ಬಿಟ್ಟ ಮುಂಡಗೋಡ ಅರಣ್ಯ ಅಧಿಕಾರಿಗಳು..!

ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎಂಟು ದಿನಗಳಿಂದ ತಾಯಿ ಮಡಿಲಿಗಾಗಿ ಕಾಯುತ್ತಿದ್ದ ಎರಡು ಚಿರತೆ ಮರಿಗಳನ್ನು ಕೊನೆಗೂ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಆದ್ರೆ, ಹಾಗೆ ಎರಡೂ ಪುಟ್ಟ ಕಂದಮ್ಮಗಳನ್ನು ತಾಯಿ ಮಡಿಲು ಸೇರಿಸುವಲ್ಲಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಮತ್ತು ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ..! ಅದು ಕಬ್ಬಿನ ಗದ್ದೆ..! ಅಂದಹಾಗೆ, ಕಳೆದ ದಿನಾಂಕ 12.01.2024ರಂದು ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಶಿವಾನಂದ ಕೆಂಗಾಪುರ್ ಅವರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕೊದ್ದವು. ಗದ್ದೆಯಲ್ಲಿ ಹುಲುಸಾಗಿ ಬೆಳೆದಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದ ಕಾರ್ಮಿಕರು, ಸ್ಥಳದಲ್ಲಿ ಸಿಕ್ಕ ಚಿರತೆ ಮರಿಗಳನ್ನು ಅನತಿ ದೂರದಲ್ಲಿಟ್ಟು ಇಲಾಖೆಗೆ ವಿಷಯವನ್ನು ತಿಳಿಸಿದ್ದರು. ಅಲ್ಲಿ ಸಿಕ್ಕಿದ್ದು ಎರಡು ಮರಿಗಳು..! ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮರಿಗಳನ್ನು ಸಿಕ್ಕ ಸ್ಥಳದಲ್ಲಿಯೇ ಬಿಟ್ಟು ತಾಯಿ ಚಿರತೆ ತನ್ನ ಮರಿಗಳನ್ನು ತೆಗೆದುಕೊಂಡು ಹೋಗುತ್ತದೆ ಅಂತಾ ಗ್ರಾಮಸ್ಥರಲ್ಲಿ ತಿಳಿಸಿದ್ದರು. ಅದ್ರಂತೆ...

error: Content is protected !!