ಶಿರೂರು ಗುಡ್ಡ ಕುಸಿತ, ಶೋಧ ಕಾರ್ಯ ಸ್ಥಗಿತವಾಗಿಲ್ಲ, ಆದ್ರೆ ಸದ್ಯ ಕಾರ್ಯಾಚರಣೆ ಮಾಡಲು ಸಾಧ್ಯವಾಗ್ತಿಲ್ಲ- ಮಂಕಾಳು ವೈದ್ಯ

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಸದ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಗಿತವಾಗಿದೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ರು.

ಕಳೆದ 13 ದಿನಗಳಿಂದ ಕಾರ್ಯಾಚರಣೆ ನಡೆದಿದೆ. 8 ಜನರ ಶವ ಪತ್ತೆಯಾಗಿದೆ ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಆದ್ರೆ ,ಇದು ಅಂದಾಜು ಮಾತ್ರ ಇನ್ನೂ ಎಷ್ಟು ಜನರ ಶವ ಇದೆಯೋ ಗೊತ್ತಿಲ್ಲ. ನಾವು ಪ್ರಾಮಾಣಿಕವಾಗಿ ಕಾರ್ಯಾಚರಣೆ ಮಾಡಿದ್ದಿವಿ, ಇಲ್ಲಿನ ಶಾಸಕರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಾನೂ ಕೂಡ ಆರು ದಿನಗಳಿಂದ ಇಲ್ಲೇ ಇದ್ದಿನಿ. ಆರ್ಮಿ, ಅಗ್ನಿಶಾಮಕ ಸೇರಿ ಪರಿಣಿತ ತಂಡಗಳೂ ಕೂಡ ಕಾರ್ಯಾಚರಣೆ ಮಾಡಿವೆ. ಆದ್ರೆ ಇನ್ನೂ ಮೂವರ ಶವಗಳು ಪತ್ತೆಯಾಗಿಲ್ಲ. ಅದರ ಬಗ್ಗೆ ತುಂಬಾ ಬೇಸರವಿದೆ ಅಂತಾ ಮಂಕಾಳು ವೈದ್ಯ ಬೇಸರ ತೋಡಿಕೊಂಡ್ರು.

ಇನ್ನು, ಪತ್ತೆಯಾದ ಎಂಟು ಶವಗಳ ಕುಟುಂಬಸ್ಥರಿಗೆ ಪರಿಹಾರದ ಹಣ ಈಗಾಗಲೇ ನೀಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಈಗಾಗಲೇ ನಾಪತ್ತೆಯಾದ ಮೂವರ ಕುಟುಂಬಗಳಿಗೂ ಪರಿಹಾರದ ಹಣ ನೀಡಲು ತಯಾರಾಗಿದ್ದೇವೆ ಅಂತಾ ಮಂಕಾಳು ವೈದ್ಯ ಘೋಶಿಸಿದ್ರು.

ನಾವು ಕಾರ್ಯಾಚರಣೆ ಸ್ಥಗಿತ ಮಾಡುತ್ತಿಲ್ಲ, ನಮಗೂ ಕಾರ್ಯಾಚರಣೆ ಮುಂದುವರೆಸುವ ಜವಾಬ್ದಾರಿಯಿದೆ. ಆದ್ರೆ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನದಿಯ ನೀರಿನ ರಭಸ ಜಾಸ್ತಿ ಇದೆ. ಹೀಗಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಂತಿದೆ. ನದಿ ಹರಿವಿನ ಪ್ರಮಾಣ ಕಡಿಮೆಯಾದ್ರೆ ಖಂಡಿತ ಕಾರ್ಯಾಚರಣೆ ಮುಂದುವರಿಯತ್ತೆ ಅಂತ ವೈದ್ಯ ತಿಳಿಸಿದ್ರು.

ಇನ್ನು ಐಆರ್ ಬಿ ವಿರುದ್ಧ ಮತ್ತೆ ಗುಡುಗಿದ ಮಂಕಾಳು ವೈದ್ಯ, ನಾನು ಸಚಿವ ಆದಾಗಿನಿಂದಲೂ_IRB ಕಾರ್ಯವೈಖರಿ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ, ಅವ್ರು ಜವಾಬ್ದಾರಿಯುತ ಕೆಲಸ ಮಾಡಿಲ್ಲ ಅಂತಾ ಆರೋಪಿಸಿದ್ರು.
IRB ದೇಶದಲ್ಲಿ 15 ಸಾವಿರ ಕಿ.ಮೀಟರ್ ರಸ್ತೆ ನಿರ್ಮಿಸಿದೆ. ಅಂತಹ ದೊಡ್ಡ ಕಂಪನಿಗೆ ಶಿರೂರು ಗುಡ್ಡ ಕುಸಿತ ಘಟನೆಯ ಕಾರ್ಯಾಚರಣೆ ಕುರಿತು ಜವಾಬ್ದಾರಿಯಿಲ್ಲ,
ಕೇಂದ್ರದ ಸಚಿವ ಬಂದು ನೋಡುವ ಸೌಜನ್ಯ ತೋರಿಲ್ಲ.. ಜನರು ಇದೇಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ತಕ್ಕ‌ಪಾಠ ಕಲಿಸಲಿದ್ದಾರೆ ಅಂತಾ ನಿತಿನ್ ಗಡ್ಕರಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ರು.

error: Content is protected !!