ಪಾಳಾ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಯುವಕನ ಶವ, ನೇಣಿಗೆ ಶರಣಾದ ಯುವಕ..!

ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಡಗೋಡ ತಾಲೂಕಿನ ಬದ್ರಾಪುರದ
ರವಿ ಮಾರುತಿ ಅಕ್ಕಸಾಲಿ(25) ಎಂಬುವವನೇ ನೇಣಿಗೆ ಶರಣಾದ ಯುವಕನಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.