ಶಿಗ್ಗಾವಿ ಪಟ್ಟಣದಲ್ಲಿ ಶ್ರೀ ಶರಣ ಹಡಪದ ಅಪ್ಪಣ್ಣನವರ 890ನೇ ಜಯಂತ್ಯೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ನಂತರ, ಶಿಗ್ಗಾವಿ-ಸವಣೂರ ತಾಲೂಕಿನಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಹಾವೇರಿ ಜಿಲ್ಲಾ ಸಮಾವೇಶ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಅನ್ನದಾನಿಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಹಾಗೂ ಸಾನಿದ್ಯವನ್ನು ಶ್ರೀ ಮ ನಿ ಪ್ರ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾದ್ಯಕ್ಷ ಸಿದ್ದಪ್ಪ ಹಡಪದ, ಜಿಲ್ಲಾ ಅದ್ಯಕ್ಷ ಷಣ್ಮುಖಪ್ಪ ಕಾಯಕದ, ಮಾಜಿ ಸಚಿವ ಅರ್ ಶಂಕರ್, ಸೋಮಣ್ಣ ಬೇವಿನಮರದ್, ಸಂಜೀವ ಕುಮಾರ ನೀರಲಗಿ, ಸಿ. ಎಂ. ಪೈಜ್, ಮೋಹನ ಚಂದಪ್ಪನವರ್, ಮಲ್ಲಿಕಾರ್ಜುನ ಹಡಪದ, ಹರೀಶ ಕ್ಷೌರದ್ ಉಪಸ್ಥಿತರಿದ್ದರು.

 

error: Content is protected !!