ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..!
ಅಣಬೆ ತಂದಿದ್ದ..!
ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ ಅಣಬೆಗಳು ಹೇರಳವಾಗಿ ಸಿಕ್ತವೆ. ಮಳೆಗಾಲ ಬಂತದ್ರೆ ಸಾಕು ಈ ಪಾಳಾ ಭಾಗದ ಕಾಡಲ್ಲಿ ನಿತ್ಯವೂ ಅಣಬೆಗಳಿಗಾಗಿ ಜನ ತಡಕಾಡುತಿರ್ತಾರೆ. ಹಾಗೆನೇ ರವಿ ಕೂಡ ಅಣಬೆಗಳನ್ನು ತಂದು ಖುಶಿಯಿಂದಲೇ ಮನೆಲಿ ರಾತ್ರಿ ಭರ್ಜರಿ ಊಟ ಮಾಡುವ ಆಸೆ ಇಟ್ಟುಕೊಂಡಿದ್ದ. ಹೀಗಾಗಿನೇ ಮನೆಲಿ ಅಡುಗೆ ಮಾಡಲು ಹೇಳಿದ್ದ.
ರೊಟ್ಟಿ ಮಾಡಿಡಿ ಅಂದಿದ್ನಂತೆ..!
ಇನ್ನು ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ ಬಿಸಿ ರೊಟ್ಟಿ ಮಾಡಿ ಇಡ್ರಿ ಅಂತಾ ಮನೆಲಿ ಹೇಳಿದ್ದ. ಆಮೇಲೆ ಅದ್ಯಾರೋ ಕಾಲ್ ಮಾಡಿದ್ದಾರೆ ಅಂತಾ ಹೊರಗೆ ಹೋದವನು ವಾಪಸ್ ಬರಲೇ ಇಲ್ಲ ಅನ್ನೊ ಮಾತುಗಳಿವೆ. ಸಂಜೆ 7 ಗಂಟೆಯಷ್ಟೊತ್ತಿಗೆ ಹೋದವನು ತಡರಾತ್ರಿಯಾದರೂ ಮನೆಗೆ ಬರಲಿಲ್ಲ ಅಂತಾ ಗಾಬರಿಗೊಂಡಿದ್ರು. ಅದೇಲ್ಲೋ ಪಾರ್ಟಿಗೆ ಹೋಗಿರಬಹುದು ಬಿಡು ಅಂತಾ ಸುಮ್ನಾಗಿದ್ರು. ಆದ್ರೆ ಬೆಳ್ಳಂ ಬೆಳಿಗ್ಗೆ ರವಿ ಹೆಣವಾಗಿ ಸಿಕ್ಕಿದ್ದಾನೆ. ಆಳೆತ್ತರದ ಮಾವಿನ ಗಿಡಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹೀಗಾಗಿ, ಹುಡುಗನ ಹೆಣ ನೋಡಿದವರಿಗೆ ಸಣ್ಣದೊಂದು ಅನುಮಾನ ಶುರುವಾಗಿದೆ. ಅಷ್ಟಕ್ಕೂ ಇದು ಆತ್ಮಹತ್ಯೆನಾ..? ಅನ್ನೋ ಪ್ರಶ್ನೆ ಎದ್ದಿದೆ.
ಇದು ಜಸ್ಟ್ ಅನುಮಾನ ಅಷ್ಟೆ..!
ಅಸಲು, ರವಿ ಅಕ್ಕಸಾಲಿ ಹೆಣ ಮಾವಿನ ಗಿಡಕ್ಕೆ ನೇತು ಬಿದ್ದಿದೆ. ಅದೂ ಕೂಡ ಆತನ ಎರಡೂ ಕಾಲುಗಳು ನೆಲಕ್ಕೆ ತಾಗಿ ಬಾಗಿಕೊಂಡಿವೆ. ಅದ್ರಲ್ಲೂ ನೇಣು ಬಿಗಿದಿರೋ ಹಗ್ಗದ ಗಂಟು ಕುತ್ತಿಗೆಯ ಮುಂದೆ ಇದೆ. ನೀವೇ ಯೋಚಿಸಿ, ಇಲ್ಲಿ ನಿಜವಾಗಿ ಆತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ನೇಣು ಬಿಗಿದಿರೋ ಹಗ್ಗದ ಗಂಟು ಮುಂದೆ ಯಾಕೆ ಹೋಯ್ತು..? ಅಷ್ಟಕ್ಕೂ ಆ ಹಗ್ಗ ಕಟ್ಟಿರೋ ಗಿಡದ ಟೊಂಗೆ ಸಾಯಿಸುವಷ್ಟು ಎತ್ತರದಲ್ಲಿ ಇಲ್ಲವೇ ಇಲ್ಲ. ಹಾಗೆ ನೋಡಿದ್ರೆ, ಯಾವುದೇ ಮನುಷ್ಯ ಸಾವಿನ ಅಂಚಿನಲ್ಲಿ ಆಗುವ ಯಾತನೆಗೆ ಖಂಡಿತ ಒದ್ದಾಡಿರ್ತಾನೆ. ಹಾಗಿದ್ದಾಗ, ಆ ಯಾತನೆ ತಡೆದುಕೊಳ್ಳದೇ ಆತ ತೀರ ಅನ್ನುವಷ್ಟು ಸಾವನ್ನು ಯಾಕೆ ಸಹಿಸಿಕೊಂಡ..? ಅದೂ ಕೂಡ ಕಾಲಿಗೆಟಕುವ ಜಾಗದಲ್ಲಿ..? ಇದು ಸದ್ಯದ ಸಹಜ ಪ್ರಶ್ನೆ.
ರಕ್ತದ ಕಲೆಗಳು..?
ಅಷ್ಟೇ ಅಲ್ಲ, ರವಿ ಅಕ್ಕಸಾಲಿ ಆತ್ಮಹತ್ಯೆ ಮಾಡಿಕೊಂಡಿರೋ ಜಾಗದ ಕೂಗಳತೆ ದೂರದಲ್ಲಿ, ರಸ್ತೆ ಪಕ್ಕದಲ್ಲಿ ಆತನ ಬೈಕ್
ಇತ್ತಂತೆ, ಬೈಕ್ ಪಕ್ಕದ ನೆಲದಲ್ಲಿ ರಕ್ತದ ಕಲೆಗಳಿವೆಯಂತೆ ಹಾಗಂತ ಅಲ್ಲಿನ ಜನ ಹೇಳ್ತಿದಾರೆ. ಹಾಗಿದ್ರೆ, ಆ ರಕ್ತ ಯಾರದ್ದು..? ಯಾವುದೋ ಪ್ರಾಣಿಯದ್ದಾ..? ಅಥವಾ ಸಾವಿಗೀಡಾಗಿರೋ ರವಿಯದ್ದಾ..? ಇದೇಲ್ಲ ಪ್ರಶ್ನೆಗಳು ಹರಿದಾಡ್ತಿವೆ.
ಅದೇನೇ ಆಗಲಿ, ಮುಂಡಗೋಡ ಪೊಲೀಸರು ಸದ್ಯ ಈ ಪ್ರಕರಣವನ್ನು ಅನುಮಾನದಿಂದಲೇ ನೋಡಿರೋ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿ, ಸಣ್ಣದೊಂದು ಸುಳಿವು ಸಿಕ್ಕರೂ ಸತ್ಯಾಸತ್ಯತೆ ಹೆಕ್ಕಿ ತೆಗಿಯೋದು ಪಕ್ಕಾ.. ದೂಸ್ರಾ ಮಾತೇ ಇಲ್ಲ.. ಯಾಕಂದ್ರೆ, ಅದು ನಮ್ಮ ಮುಂಡಗೋಡ್ ಪೊಲೀಸ್ರ ತಾಕತ್ತು..!