ಮುಂಡಗೋಡ ತಾಲೂಕಿನ ರಾಜಕೀಯ ಈ ಮಟ್ಟಿಗೆ ಹೀನ ಸ್ಥಿತಿಗೆ ತಲುಪಿತಾ..? ಅದ್ರಲ್ಲೂ ಈಗ ಬಂದಿರೋ ಆರೋಪ ನಿಜವೇ ಆಗಿದ್ದರೆ, ಮಾನ್ಯ ಸಚಿವ ಶಿವರಾಮ್ ಹೆಬ್ಬಾರ್ ಸಾಹೇಬ್ರು ಈ ಮಟ್ಟಕ್ಕೆ ರಾಜಕೀಯ ಮಗ್ಗುಲಿಗೆ ಅನಿವಾರ್ಯವಾಗಿ ಹೊರಳಿಕೊಂಡ್ರಾ..? ಹಾಗಾಗಿದ್ದರೆ ನಿಜಕ್ಕೂ ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ದುರಂತ. ಅವ್ರು ಮಾತೆ ಬಸವೇಶ್ವರಿ..! ಮುಂಡಗೋಡ ತಾಲೂಕಿನಲ್ಲಿ ಮನೆ ಮನೆಗೂ ಪರಿಚಿತರಾಗಿ, ಗುರು ಸ್ಥಾನ ಪಡೆದುಕೊಂಡಿರೋ ಅತ್ತಿವೇರಿ ಬಸವಧಾಮದ ಶ್ರೀಮಾತೆ ಬಸವೇಶ್ವರಿಗೆ ಸಚಿವ ಶಿವರಾಮ್ ಹೆಬ್ಬಾರ್, ಏಕ ವಚನದಲ್ಲಿ ನಿಂದಿಸಿದ್ದಾರೆ ಅಂತಾ ಮುಂಡಗೋಡಿನಲ್ಲಿ ಇವತ್ತು ಹಲವು ಮುಖಂಡರು, ಭಕ್ತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಪತ್ರಿಕಾಗೋಷ್ಟಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತೆಯವರಿಗೆ ನಿಂದಿಸಿದ್ದನ್ನು ಖಂಡಿಸಿದ್ದಾರೆ. ಹೀಗಾಗಿ, ಸಚಿವ್ರು ಬಹಿರಂಗವಾಗಿ ಮಾತೆಯವರಲ್ಲಿ ಕ್ಷಮೆ ಕೇಳಬೇಕು ಅಂತಾ ಆಗ್ರಹಿಸಿದ್ದಾರೆ. ಅಷ್ಟಕ್ಕೂ ಏನಿದು ಕೇಸ್..? ಪತ್ರಿಕಾಗೋಷ್ಟಿಯಲ್ಲಿ ಮುಖಂಡರು ಮಾಹಿತಿ ನೀಡಿದ ಪ್ರಕಾರ, ಮುಂಡಗೋಡ ತಾಲೂಕಿನ ಉಗ್ನಿಕೇರಿಯಲ್ಲಿ ಇದೇ ಬರುವ ಫೆಬ್ರುವರಿ ಮೊದಲ ವಾರದಲ್ಲಿ ಗ್ರಾಮದೇವಿಯ ಜಾತ್ರೆ...
Top Stories
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಿರಲಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?
ಗೋಕರ್ಣ: ಮೂತ್ರ ವಿಸರ್ಜನೆಗೆ ಹೋಗಿ ಪ್ರವಾಸಿಗನೊಬ್ಬ ಬಾವಿಗೆ ಬಿದ್ದು ಕೆಲಹೊತ್ತು ಅಲ್ಲೇ ಪರದಾಡಿದ ವಿಚಿತ್ರ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮೇಲಿನಕೇರಿಯಲ್ಲಿ ನಡೆದಿದೆ. ದೆಹಲಿ ಮೂಲದ ರಾಮೇಶ್ವರ್ ಬಾವಿಗೆ ಬಿದ್ದ ಪ್ರವಾಸಿಗನಾಗಿದ್ದಾನೆ. ಯುವತಿಯೊಂದಿಗೆ ಗೋಕರ್ಣದ ಪ್ರವಾಸಕ್ಕೆ ಬಂದಿದ್ದ ಯುವಕ, ಮೂತ್ರವಿಸರ್ಜನೆಗೆ ಎಂದು ಕತ್ತಲಲ್ಲಿ ತೆರಳಿದ್ದಾಗ ತೆರದ ಬಾವಿಗೆ ಬಿದ್ದಿದ್ದ, ಹೀಗಾಗಿ, ಬಾವಿಯಲ್ಲಿ ಬಿದ್ದು ಹೊರಬರಲಾರದೇ ಕೆಲಹೊತ್ತು ಅಲ್ಲೇ ಪರದಾಡಿದ್ದ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿ.ಎಸ್.ಪಾಟೀಲರ ಕಾರಿಗೆ ಹಿಂಬದಿಯಿಂದ ಗುದ್ದಿದ ಟ್ರಾಕ್ಟರ್,ಅದೃಷ್ಟವಶಾತ್ ತಪ್ಪಿದ ಅನಾಹುತ..!
ಮುಂಡಗೋಡ: ಮಾಜಿ ಶಾಸಕ, ಯಲ್ಲಾಪುರ ಕ್ಷೇತ್ರದ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲರ ಕಾರಿಗೆ ಪುಟ್ಟ ಅಪಘಾತವಾಗಿದೆ. ಮುಂಡಗೋಡ ಪಟ್ಟಣದ ಬನ್ನಿಕಟ್ಟಿ ಹತ್ತಿರ ಕಬ್ಬು ತುಂಬುವ ಟ್ರಾಕ್ಟರ್ ಹಿಂಬದಿಗೆ ಎರಡು ಬಾರಿ ಗುದ್ದಿದ ಪರಿಣಾಮ ಕಾರಿನ ಹಿಂಬದಿಯ ಭಾಗ ಕೊಂಚ ಜಖಂ ಆಗಿದೆ. ಅದೃಷ್ಟವಶಾತ್ ವಿ.ಎಸ್.ಪಾಟೀಲರಿಗೆ ಯಾವುದೇ ಅಪಾಯವಾಗಿಲ್ಲ. ಮುಂಡಗೋಡಿನಿಂದ ಯಲ್ಲಾಪುರ ಕಡೆಗೆ ಹೊರಟಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲರ ಕಾರಿಗೆ, ಹಿಂದಿನಿಂದ ಅದೇ ಮಾರ್ಗದಲ್ಲಿ ಹೊರಟಿದ್ದ ಕಬ್ಬು ಸಾಗಿಸುವ ಟ್ರಾಕ್ಟರ್ ಗುದ್ದಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ, ತಕ್ಷಣವೇ ಸ್ಥಳೀಯರು ಟ್ರಾಕ್ಟರ್ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!
ಕುಮಟಾ: ತಾಲೂಕಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದೋಳಿ ಮುಳುಗಡೆಯಾಗಿ ಮೀನುಗಾರ ಸಾವು ಕಂಡಿದ್ದಾನೆ. ಕುಮಟಾದ ಲುಕ್ಕೇರಿ ನಿವಾಸಿಯಾಗಿದ್ದ ವಿಘ್ನೇಶ್ವರ ಅಂಬಿಗ (24) ಮೃತ ದುರ್ದೈವಿಯಾಗಿದ್ದಾನೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಒಳನೀರಿನ ಹರಿವಿನಿಂದ ದೋಣಿ ಮುಳುಗಿದೆ. ಹೀಗಾಗಿ, ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥನಾಗಿದ್ದ ವಿಘ್ನೇಶ್ವರ ಆಸ್ಪತ್ರೆಗೆ ಸಾಗಿಸುವ ಸಾವು ಕಂಡಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವರ್ಷ ಉಳವಿ ಜಾತ್ರೆಗೆ ಚಕ್ಕಡಿ, ಎತ್ತಿನ ಗಾಡಿ ಒಯ್ಯಂಗಿಲ್ಲ, ಜಿಲ್ಲಾಡಳಿತದಿಂದ ಎತ್ತಿನ ಬಂಡಿ ನಿಷೇಧ..!
ಉಳವಿ: ಇತಿಹಾಸ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಜಾತ್ರೆ ಇನ್ನೇನು ಶುರುವಾಗಲಿದೆ. ಆದ್ರೆ, ಉಳವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಎತ್ತಿನಬಂಡಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ಹೇರಿರುವುದು ಭಕ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಯಾಕಂದ್ರೆ, ಪ್ರತಿ ವರ್ಷ ಉಳವಿ ಜಾತ್ರೆಗೆ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಜಾತ್ರೆಗೆಂದು ಎತ್ತಿನಬಂಡಿಗಳನ್ನು ವಿಶೇಷ ರೀತಿಯಲ್ಲಿ ಸಿಂಗರಿಸುವುದು ಒಂದು ಪರಂಪರೆಯಾಗಿಯೇ ಬೆಳೆದುಬಂದಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ (Lumpy Skin Disease – LSD) ಕಾಣಿಸಿಕೊಂಡಿದ್ದರಿಂದ ಎತ್ತಿನಬಂಡಿಗಳಿಗೆ ನಿಷೇಧ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ. ಉಳವಿ ಜಾತ್ರೆಯು ಜನವರಿ 28ರಿಂದ ಫೆ 8ರವರೆಗೆ ನಡೆಯಲಿದೆ. ಭಕ್ತರು ಈಗಾಗಲೇ ಉಳವಿಯತ್ತ ಬರುತ್ತಿದ್ದಾರೆ. ವಾಹನಗಳಲ್ಲಿ ಬರಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಟ್ರ್ಯಾಕ್ಟರ್, ಕಾರು, ಬಸ್ ಮತ್ತು ಕಾಲ್ನಡಿಗೆಯಲ್ಲಿ ಭಕ್ತರು ಉಳವಿಗೆ ಬರುತ್ತಿದ್ದಾರೆ. ನೂರಾರು ವರ್ಷಗಳ ಉಳವಿ ಜಾತ್ರೆಯ ಪರಂಪರೆಯಲ್ಲಿ ಎತ್ತಿನಬಂಡಿಗಳಿಲ್ಲದ ಜಾತ್ರೆ ನಡೆಯುತ್ತಿರುವುದು...
ಕೊಪ್ಪದಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕಬ್ಬು ಬೆಂಕಿಗಾಹುತಿ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬೆಂಕಿ ಅವಘಡವಾಗಿದೆ. ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಕೊಪ್ಪ ಗ್ರಾಮದ ರೈತ ಶಿವಾಜಿ ತುಳಜಾನವರ ಹಾಗೂ ಪಕ್ಕೀರಪ್ಪಾ ತುಳಜಾನವರ ಎಂಬುವವರ ಸುಮಾರು 2-3 ಎಕರೆ ಕಬ್ಬು ಬೆಳೆ ಬೆಂಕಿಗೆ ಅಹುತಿ ಆಗಿದೆ. ಅಂದಹಾಗೆ ಇಂದು ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಹೀಗಾಗಿ, ಕಟಾವು ಮಾಡಿ ಇಟ್ಟಿದ್ದ ಕಬ್ಬೂ ಸೇರಿದಂತೆ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿದೆ. ಬೆಂಕಿ ತಗುಲಿದ ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಇನ್ನು ಅಗ್ನಿಶಾಮಕ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ನಂದಿಸುವ ಕಾರ್ಯವಾಗಿತ್ತು. ಹೀಗಾಗಿ, ಆಗಬಹುದಾಗಿದ್ದ ಮತ್ತಷ್ಟು ಹಾನಿ ತಪ್ಪಿದಂತಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. *ವರದಿ-ವಿನಾಯಕ ಎಂ.ಪಿ.
ಇಂದೂರಿನ ಗ್ರಾಮ ಒನ್ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ, ಅಪಾರ ಹಾನಿ..!
ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಲ್ಲಿನ ಅಶೋಕ ನಡಿಗೇರ ಎಂಬುವವರಿಗೆ ಸೇರಿದ ಗ್ರಾಮ ಒನ್ ಕೇಂದ್ರದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಕಂಪ್ಯೂಟರ್ ಸೇರಿದಂತೆ ಗಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್..? ಅಸಲು, ಇಂದು ಮದ್ಯಾನ ನಡದಿರೋ ಈ ಬೆಂಕಿ ಅನಾಹುತ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಅಂತಾ ಹೇಳಲಾಗಿದೆ. ಆದ್ರೆ, ತಾಲೂಕಿನ ಇಂದೂರು, ಹುನಗುಂದ, ನಂದಿಕಟ್ಟಾ ಸೇರಿ ಹಲವು ಭಾಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಹೆಸ್ಕಾಂ ಮುಂಡಗೋಡ ವಿಭಾಗದಲ್ಲಿ ದುರಸ್ತಿ ಕಾರ್ಯದ ಸಲುವಾಗಿ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಹೀಗಾಗಿ, ಬೆಂಕಿ ಹೇಗೆ ತಗುಲಿದೆ ಅಂತಾ ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಬೆಂಕಿಯ ಅನಾಹುತದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಗ್ರಾಮ ಒನ್ ಕೇಂದ್ರದ ಪಿಠೋಪಕರಣಗಳು ಸೇರಿದಂತೆ, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿ ಆಗಿವೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಂಬಾಣಿ ತಾಂಡಾಗಳ ಅಭಿವೃದ್ಧಿಗೆ ಕಟಿಬದ್ಧ: ಅರಶಿಣಗೇರಿಯಲ್ಲಿ ಸಚಿವ ಹೆಬ್ಬಾರ್ ಭರವಸೆ..!
ಮುಂಡಗೋಡ: ತಾಲೂಕಿನ ಬಂಜಾರಾ ಸಮುದಾಯದ, ಲಂಬಾಣಿ ತಾಂಡಾಗಳ ಅಮೂಲಾಗ್ರ ಬದಲಾವಣೆಗೆ, ಅಭಿವೃದ್ದಿಗೆ ನಾನು ಕಟಿಬದ್ಧವಾಗಿದ್ದೆನೆ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಘೋಷಿಸಿದ್ರು. ಅವ್ರು ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ಲಂಬಾಣಿ ತಾಂಡಾದಲ್ಲಿ, ಶ್ರೀ ಸಂತ ಸೇವಾಭಾಯಾ ದೇವಸ್ಥಾನದ ಮೂರ್ತಿ ಪ್ರಟಣ ಪ್ರತಿಷ್ಟಾಪನೆ ಹಾಗೂ ನೂತನ ದೇವಾಲಯದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂಡಗೋಡ ತಾಲೂಕಿನ ಪ್ರತಿಯೊಂದೂ ಲಂಬಾಣಿ ತಾಂಡಾಗಳಲ್ಲೂ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುವಂತಹ ವ್ಯವಸ್ಥೆ ಮಾಡಿದ್ದೇವೆ. ಬಹುತೇಕ ತಾಂಡಾಗಳಲ್ಲೂ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. ಹೀಗಾಗಿ, ಈ ಭಾಗದಲ್ಲಿ ಬಂಜಾರಾ ಸಮುದಾಯದ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಅಂತಾ ಸಚಿವ್ರು ಆಶ್ವಾಸನೆ ನೀಡಿದ್ರು. ಇನ್ನು ಮುಂದಿನ ಐದು ವರ್ಷಗಳಲ್ಲಿ ಮುಂಡಗೋಡ ತಾಲೂಕಿನ ಚಿತ್ರಣವೇ ಬದಲಾಗಲಿದೆ ಅಂತಾ ಭರವಸೆ ನೀಡಿದ ಸಚಿವರು ತಾಲೂಕಿನ ಅಭಿವೃದ್ಧಿಗೆ ತಮ್ಮೇಲ್ಲರ ಆಶೀರ್ವಾದ ಇರಬೇಕು ಅಂತಾ ತಿಳಿಸಿದ್ರು. ಈ ವೇಳೆ ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್, ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರು,...
ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್ ಹುಟ್ಟು ಹಬ್ಬ, ಅಂಧ ಮಕ್ಕಳ ಜೊತೆ ಹುಟ್ಟಿದ ದಿನದ ಸಂಭ್ರಮ..!
ಮುಂಡಗೋಡ: ಮಾಜಿ ಜಿ.ಪಂ.ಸದಸ್ಯ ಎಲ್.ಟಿ. ಪಾಟೀಲ ಅವರ 65ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಪಟ್ಟಣದ ದೇಶಪಾಂಡೆ ನಗರದರಲ್ಲಿರುವ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಹುಟ್ಟು ಹಬ್ಬವನ್ನು ಶನಿವಾರ ಆಚರಿಸಲಾಯಿತು. ಈ ವೇಳೆ ಎಲ್.ಟಿ.ಪಾಟೀಲ ಮಾತನಾಡಿ, 84 ಲಕ್ಷ ಜೀವ ರಾಶಿಯನ್ನು ದಾಟಿ ಮಾನವನಾಗಿ ಜನಿಸುತ್ತೇವೆ. ಹುಟ್ಟು ಮತ್ತು ಸಾವಿನ ಮಧ್ಯೆ ನಾವೇನು ಸಾಧಿಸುತ್ತೇವೆ’ ಎಂಬುವುದು ಮುಖ್ಯವಾಗಿದೆ. ದೇವರು ನಿಮ್ಮೆಲ್ಲರ ಬಾಳಿನಲ್ಲಿ ಪ್ರಜ್ವಲ ಶಕ್ತಿ ನೀಡಲಿ ಎಂದು ಅಂದ ಮಕ್ಕಳಿಗೆ ಹಾರೈಸಿ, ಅಂದ ಮಕ್ಕಳಿಗೆ ಇಷ್ಟ ಆಗುವ ಅಡುಗೆ ಮಾಡಿಸಿ ಬಡಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ ಅವರಿಗೆ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯ ಮುಖ್ಯೋಪಧ್ಯಾಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಎಲ್.ಟಿ. ಪಾಟೀಲ ಅಭಿಮಾನಿಗಳು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?
ಮುಂಡಗೋಡ ಪಟ್ಟಣದ ಹೊರವಲಯದ ನೂರಾನಿ ಗಲ್ಲಿಯ ಹತ್ತಿರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಯಾರೋ ಆಗಷ್ಟೇ ಹೆರಿಗೆ ಮಾಡಿಸಿ, ಅಥವಾ ಗರ್ಭಪಾತ ಮಾಡಿಸಿ ಬಾಕ್ಸ್ ನಲ್ಲಿ ಶಿಶುವನ್ನು ಎಸೆದು ಹೋಗಿದ್ದಾರೆ. ರಕ್ತಸಿಕ್ತವಾಗಿದ್ದ ಶಿಶುವನ್ನು ನಾಯಿಗಳು ಎಳೆದಾಡಿ ಕಚ್ಚಿ ಹಾಕಿವೆ. ಹೀಗಾಗಿ, ಶಿಶು ಮರಣಹೊಂದಿದ್ದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ಅಬಾರ್ಷನ್ ಮಾಡಿದ್ರಾ..? ಅಸಲು, ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿಶುವನ್ನು ನೋಡಿದ್ರೆ, ಅಬಾರ್ಷನ್ ಮಾಡಿಸಿರಬಹುದಾ ಅನ್ನೋ ಅನುಮಾನವಿದೆ. ಅಲ್ಲದೆ, ಅನೈತಿಕತೆಗೆ ಹುಟ್ಟಿದ ಬೇಡವಾದ ಕಂದಮ್ಮನನ್ನು ಹೀಗೆ ಅಮಾನುಷವಾಗಿ ಬೀಸಾಕಿ ಹೋದ್ರಾ ಕಟುಕರು ಅನ್ನೋ ಅನುಮಾನ ಶುರುವಾಗಿದೆ. ಒಟ್ನಲ್ಲಿ ದಾರಿಹೋಕರು ರಸ್ತೆಯಲ್ಲಿ ಬಿದ್ದಿದ್ದ ಕಂದಮ್ಮನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.