ಪತ್ರಕರ್ತನಿಗೆ ದಂಡ ತೀರ್ಪಿಗೆ  ಜಿಲ್ಲಾ ಕೋರ್ಟ್ ತಡೆಯಾಜ್ಞೆ

ಕಾರವಾರ : ಇಲ್ಲಿನ ಸರ್ವೆ ಅಧಿಕಾರಿ ಒಬ್ಬರ ಕರ್ತವ್ಯಕ್ಕೆ ಪತ್ರಕರ್ತ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ನಾಯ್ಕ ಬರ್ಗಿ ಹಾಗೂ ಸಾಯಿಕಿರಣ ಬಾಬ್ರೇಕರ್ ಎನ್ನುವವರಿಗೆ ತಲಾ ಆರು ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ ತಲಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪತ್ರಕರ್ತ ಉದಯ ಬರ್ಗಿ ಅವರು ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.

ಈ ಇಬ್ಬರ ಪರವಾಗಿ ಕುಮಟಾದ ಖ್ಯಾತ ಯುವ ನ್ಯಾಯವಾದಿ, ವಿರೇಂದ್ರ ಗಿರಿಯಣ್ಣ ನಾಯಕ, ತೋರ್ಕೆ ಅವರು ವಾದವನ್ನು ಮಂಡಿಸಿದ್ದರು. ಇವರ ವಾದ ಆಲಿಸಿದ ಮಾನ್ಯ ನ್ಯಾಯಾಲಯವು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.

error: Content is protected !!