ಮುಂಡಗೋಡ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಅವರ ಜನ್ಮ ದಿನವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು.
ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಎನ್ ದುಂಡಸಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಪ.ಪಂ ಸದಸ್ಯ ಮಹ್ಮದಗೌಸ ಮಖಾಂದಾರ, ಶಿವರಾಜ ಸುಬ್ಬಾಯವರ, ನಜೀರ್ ಅಹ್ಮದ ದರ್ಗಾವಾಲೆ, ಆಲೆಹಸನ ಬೆಂಡಿಗೇರಿ, ಧರ್ಮರಾಜ ನಡಗೇರ, ಶಾರದಾ ರಾಠೋಡ, ಸಲೀಂ ನಂದಿಗಟ್ಟಿ, ಬಸವರಾಜ ಆಸ್ತಕಟ್ಟಿ, ರಪೀಕ್ ಇನಾಮದಾರ, ಬಾಬುರಾವ ಲಾಡನವರ, ಬಸವರಾಜ ಕುಂದರ್ಗಿ ಮುಂತಾದವರು ಉಪಸ್ಥಿತರಿದ್ದರು