ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಲ್ಲಿನ ಅಶೋಕ ನಡಿಗೇರ ಎಂಬುವವರಿಗೆ ಸೇರಿದ ಗ್ರಾಮ ಒನ್ ಕೇಂದ್ರದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಕಂಪ್ಯೂಟರ್ ಸೇರಿದಂತೆ ಗಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್..?
ಅಸಲು, ಇಂದು ಮದ್ಯಾನ ನಡದಿರೋ ಈ ಬೆಂಕಿ ಅನಾಹುತ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಅಂತಾ ಹೇಳಲಾಗಿದೆ. ಆದ್ರೆ, ತಾಲೂಕಿನ ಇಂದೂರು, ಹುನಗುಂದ, ನಂದಿಕಟ್ಟಾ ಸೇರಿ ಹಲವು ಭಾಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಹೆಸ್ಕಾಂ ಮುಂಡಗೋಡ ವಿಭಾಗದಲ್ಲಿ ದುರಸ್ತಿ ಕಾರ್ಯದ ಸಲುವಾಗಿ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಹೀಗಾಗಿ, ಬೆಂಕಿ ಹೇಗೆ ತಗುಲಿದೆ ಅಂತಾ ಇನ್ನಷ್ಟೇ ತಿಳಿದು ಬರಬೇಕಿದೆ.
ಸದ್ಯ ಬೆಂಕಿಯ ಅನಾಹುತದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಗ್ರಾಮ ಒನ್ ಕೇಂದ್ರದ ಪಿಠೋಪಕರಣಗಳು ಸೇರಿದಂತೆ, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿ ಆಗಿವೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.