ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!

ಮುಂಡಗೋಡ ಪಟ್ಟಣದ ನೆಹರು ನಗರದಲ್ಲಿ ಜೇನು ನೋಣಗಳ ದಾಳಿಯಾಗಿದೆ. ಪರಿಣಾಮ ಆರು ಜನರಿಗೆ ಗಾಯವಾಗಿದೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಪಟ್ಟಣದ ನೆಹರು ನಗರದ ನನ್ನೇಸಾಬ್ ಶೇಖ್ ಮನೆಯ ಹತ್ತಿರದ ಗಿಡದಲ್ಲಿ ಜೇನು ಗೂಡು ಕಟ್ಟಿತ್ತು. ಇವತ್ತು ಮದ್ಯಾನ ಬಿಸಿಲಿನ ತಾಪಕ್ಕೋ ಅಥವಾ ಯಾರಾದ್ರೂ ಕಲ್ಲೆಸೆದ ಕಾರಣಕ್ಕೋ ಜೇನು ನೋಣಗಳು ಎದ್ದಿವೆ. ಈ ಹೊತ್ತಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಆರು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯಗೊಳಿಸಿವೆ.

ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿ ಅರುಣ್ ಕುಮಾರ್ ಕಾಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಟ್ಟಣ ಪಂಚಾಯತಿಅಧಿಕಾರಿಗಳು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು, ಪಟ್ಟಣದಲ್ಲಿನ ಭಯಾನಕ ಜೇನುಗೂಡುಗಳ ತೆರವು ಕಾರ್ಯ ಮಾಡಬೇಕು ಅನ್ನೋದು ಸಾರ್ವಕನಿಕರ ಆಗ್ರಹವಾಗಿದೆ‌.

error: Content is protected !!