ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಮುಂಡಗೋಡಿನ ವ್ಯಕ್ತಿ ಭೀಕರ ಸಾವು ಕಂಡಿದ್ದಾನೆ. ತನ್ನದೇ ಬೈಕ್ ಪಕ್ಕದಲ್ಲಿ ಸಾವನ್ನಪ್ಪಿರೋ ವ್ಯಕ್ತಿ ಅನುಮಾನಾಸ್ಪದವಾಗಿ ಹೆಣವಾಗಿದ್ದಾನೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಮಂಜುನಾಥ್ ಜಾಧವ್(45) ಅಲಿಯಾಸ್ ಮಂಜು ಮೂಡಸಾಲಿ ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿ ಅಂತಾ ಅನುಮಾನಿಸಲಾಗಿದೆ.
ಅಸಲು, KA 31 E F 3587 ನೋಂದಣಿ ಸಂಖ್ಯೆಯ ಪಲ್ಸರ್ ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದಿರೋ ವ್ಯಕ್ತಿ, ಮಂಜುನಾಥ್ ಜಾಧವ್ ಅಂತ ಹೇಳಲಾಗ್ತಿದೆ. ಬಂಕಾಪುರ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿ ಘಟನೆ ನಡೆದಿದೆ. ಇಲ್ಲಿ ಬೈಕ್ ಅಪಘಾತವಾಯ್ತಾ ಅಥವಾ ಯಾರಾದ್ರೂ ಕೊಲೆ ಮಾಡಿ ಅಪಘಾತ ಅಂತಾ ಬಿಂಬಿಸಲು ಯತ್ನಿಸಿದ್ದಾರಾ..? ಅನ್ನೋ ಅನುಮಾನ ಶುರುವಾಗಿದೆ.
ಸದ್ಯ ಬಂಕಾಪುರ ಠಾಣೆಯ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.