ಕೊಪ್ಪದಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕಬ್ಬು ಬೆಂಕಿಗಾಹುತಿ..!

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬೆಂಕಿ ಅವಘಡವಾಗಿದೆ. ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ.

ಕೊಪ್ಪ ಗ್ರಾಮದ ರೈತ ಶಿವಾಜಿ ತುಳಜಾನವರ ಹಾಗೂ ಪಕ್ಕೀರಪ್ಪಾ ತುಳಜಾನವರ ಎಂಬುವವರ ಸುಮಾರು 2-3 ಎಕರೆ ಕಬ್ಬು ಬೆಳೆ ಬೆಂಕಿಗೆ ಅಹುತಿ ಆಗಿದೆ. ಅಂದಹಾಗೆ ಇಂದು ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಹೀಗಾಗಿ, ಕಟಾವು ಮಾಡಿ ಇಟ್ಟಿದ್ದ ಕಬ್ಬೂ ಸೇರಿದಂತೆ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿದೆ.

ಬೆಂಕಿ ತಗುಲಿದ ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಇನ್ನು ಅಗ್ನಿಶಾಮಕ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ನಂದಿಸುವ ಕಾರ್ಯವಾಗಿತ್ತು. ಹೀಗಾಗಿ, ಆಗಬಹುದಾಗಿದ್ದ ಮತ್ತಷ್ಟು ಹಾನಿ ತಪ್ಪಿದಂತಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

*ವರದಿ-ವಿನಾಯಕ ಎಂ.ಪಿ.

error: Content is protected !!