ಮುಂಡಗೋಡ ತಾಲೂಕಿನ ಪಾಳಾ ಸಮೀಪ ಬುಧವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಈಗಷ್ಟೇ ಮೃತಪಟ್ಟಿದ್ದಾನೆ. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಂಕರಯ್ಯ ಮಲ್ಲಯ್ಯ ಹಿರೇಮಠ್, ಮೃತಪಟ್ಟ ಮತ್ತೋರ್ವ ಯುವಕನಾಗಿದ್ದು, ನಿನ್ನೆ ರಾತ್ರಿ ಪಾಳಾ ಜಾತ್ರೆ ಮುಗಿಸಿ ಮುಂಡಗೋಡಿಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಐ20 ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮುಂಡಗೋಡಿನ ಇಬ್ಬರು ಸಹೋದರರು ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಹಿರೇಮಠನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಅಪಘಾತದ ಭೀಕರತೆ..! ಇನ್ನು ಪಾಳಾ ಸಮೀಪದ ಕಾರು ಅಪಘಾತ ನಿಜಕ್ಕೂ ಭೀಕರವಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಜಾತ್ರೆಯ ಸಡಗರಕ್ಕೆ ತೆರಳಿದ್ದ ಅವಳೀ ಸಹೋದರರಾದ ಗಣೇಶ್ ಗಾಣಿಗೇರ್ ಹಾಗೂ ಮಹೇಶ್ ಗಾಣಿಗೇರ್ ಎಂಬುವ ಇಬ್ಬರನ್ನು ಈ ಅಪಘಾತ ಬಲಿ ಪಡೆಯುವುದಲ್ಲದೇ, ಶಂಕರಯ್ಯ ಅನ್ನೋ ಮತ್ತೋರ್ವ ಯುವಕನ ಪ್ರಾಣವನ್ನೂ...
Top Stories
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಗ್ರಾಮ ಪಂಚಾಯತಿ ಉಪ ಚುನಾವಣೆಗೆ ದಿನಾಂಕ ನಿಗದಿ, ಹುನಗುಂದ ಗ್ರಾಮ ಪಂಚಾಯತಿ 1 ಸ್ಥಾನಕ್ಕೆ ಎಲೆಕ್ಷನ್ ಫಿಕ್ಸ್..!
ಹಾವೇರಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಪತ್ತೆ..!
ಶಂಕ್ರಯ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ, ದಯವಿಟ್ಟು ತಪ್ಪು ಮಾಹಿತಿಯ ಸ್ಟೇಟಸ್ ಬೇಡ ಗೆಳೆಯರೆ, ಎಲ್ಲರೂ ಆತನಿಗಾಗಿ ಪ್ರಾರ್ಥಿಸೋಣ..!
ಮುಂಡಗೋಡಿನ ಪಾಳಾ ಸಮೀಪ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಯುವಕ ಶಂಕರಯ್ಯನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆದ್ರೆ, ಇನ್ನೇನೂ ಬೇರೆಯ ರೀತಿಯ ಅನಾಹುತ ಸಂಭವಿಸಿಲ್ಲ. ತಜ್ಞ ವೈದ್ಯರು ನಿರಂತರವಾಗಿ ಶಂಕರಯ್ಯನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತಾ ಕಿಮ್ಸ್ ನ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ. ಆತ ಬದುಕಿದ್ದಾನೆ. ಹೀಗಾಗಿ, ತಪ್ಪು ಮಾಹಿತಿ ಹರಡಬೇಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದ್ದಾರೆ.. ಬದುಕಿ ಬಾ ತಮ್ಮಾ..! ಅಷ್ಟಕ್ಕೂ, ನಿನ್ನೆ ನಡೆದ ಭೀಕರ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಶಂಕ್ರಯ್ಯ ಮಲ್ಲಯ್ಯ ಹಿರೇಮಠ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆತುತ್ತಿದ್ದಾನೆ. ಈ ಹೊತ್ತಲ್ಲಿ, ಮುಂಡಗೋಡಿಗರು ಆತ ಬದುಕಿ ಬರಲಿ ಅಂತಾ ದೇವರಲ್ಲಿ ಪ್ರಾರ್ಥಿಸೋಣ. ಅದನ್ನು ಬಿಟ್ಟು, ಖಚಿತ ಮಾಹಿತಿ ಪಡೆಯದೇ ದಯವಿಟ್ಟು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ತಪ್ಪು ತಪ್ಪಾದ ಸಂದೇಶ ರವಾನಿಸಬೇಡಿ ಗೆಳೆಯರೆ, ಯಾಕಂದ್ರೆ ಆ ನೋವನ್ನು ಸಹಿಸಿಕೊಳ್ಳಲು ಆತನ ಹಡೆದವ್ವಗೆ ಖಂಡಿತ ಸಾಧ್ಯವಿಲ್ಲ. ಆ ಹಡೆದ ಕರುಳು ಮಗನಿಗಾಗಿ, ಮಗನ ಬದುಕಿಗಾಗಿ ಹಂಬಲಿಸಿರತ್ತೆ, ವೈದ್ಯರೂ ಕೂಡ...
ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಪಾಳಾ ಸಮೀಪ ಭೀಕರ ಅಪಘಾತವಾಗಿದೆ. ಐ20 ಕಾರ್ ಪಲ್ಟಿಯಾದ ಪರಿಣಾಮ ಇಬ್ಬರು ಮುಂಡಗೋಡಿನ ಯುವಕರು ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದೆ. ಮುಂಡಗೋಡಿನ ಗಣೇಶ್ ಗಾಣಿಗೇರ್, ಮಹೇಶ ಗಾಣಿಗೇರ ಮೃತ ದುರ್ದೈವಿಗಳು. ಪಾಳಾದಿಂದ ಮುಂಡಗೋಡಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!
ಶಿಗ್ಗಾವಿ: ಪುರಸಭೆ, ವಾರ್ಡ್ ನಂ.21 ರ ಜನ ರೋಸಿ ಹೋಗಿದ್ದಾರೆ. ಇಲ್ಲಿ ಆಡಳಿತ ವ್ಯವಸ್ಥೆ ಅನ್ನೋದು ಇದೆಯೊ ಇಲ್ಲವೋ ಅಂತಾ ನಿತ್ಯವೂ ಹಿಡಿಶಾಪ ಹಾಕ್ತಿದಾರೆ. ಯಾಕಂದ್ರೆ, ಈ ವಾರ್ಡಿನ ರಸ್ತೆಗಳು ಇವತ್ತು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆ ಅನ್ನೋದು ಗಬ್ಬೇದ್ದು ಹೋಗಿದೆ. ಈ ಕಾರಣಕ್ಕಾಗಿ ಈ ವಾರ್ಡಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಹೀಗಾಗಿನೇ ಇಲ್ಲಿನ ಜನ ನಮ್ಮ ಕಡೆ ಗಮನವಹಿಸಿ ಅಂತಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಂದಹಾಗೆ, ಇದು ಸಿಎಂ ತವರುಕ್ಷೇತ್ರ..! ನಿಜ, ಶಿಗ್ಗಾವಿಯ ಜಯನಗರದಲ್ಲಿ ಒಳಚರಂಡಿ ಹಾಗೂ ಹಾಳಾದ ರಸ್ತೆಗಳನ್ನು ನೋಡಿದ್ರೆ ಎಂಥವರಿಗೂ ಅಸಹ್ಯ ಅನಿಸತ್ತೆ. ಇಲ್ಲಿನ ಪುರಸಭೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಒಂದೂ ಅರ್ಥ ಆಗ್ತಿಲ್ಲ. ಈ ವಾರ್ಡಿನ ಜನರಿಗೆ ಮೂಲಭೂತ ಸಮಸ್ಯೆಗಳದ್ದೇ ಹಾಸುಹೊಕ್ಕಾಗಿದೆ. ಇನ್ನು ಈ ವಾರ್ಡಿನ ಜನಪ್ರತಿನಿಧಿಗಳು ಅದ್ಯಾಕೆ ಈ ಬಗ್ಗೆ ಗಮನ ಹರಿಸ್ತಿಲ್ವೋ ಯಾರಿಗೂ ತಿಳಿದಿಲ್ಲ. ರೋಗಗಳ ಕಾರ್ಖಾನೆ..! ಅಂದಹಾಗೆ, ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ...
ಮುಂಡಗೋಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕರಿಂದ ಅಧಿಕಾರಿಗಳ ತರಾಟೆ, ಕಿಟ್ ಗಾಗಿ ಎಡತಾಕಿಸೋದು ಸರಿನಾ..?
ಮುಂಡಗೋಡ: ಪಟ್ಟಣದಲ್ಲಿ ಇರೋ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿನ ಅಧಿಕಾರಿಗಳ ಮೇಲೆ ನೂರಾರು ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಕಾರ್ಪೆಂಟರ್ ಕೆಲಸದವರು, ಗಾರೆ ಕೆಲಸದವರು ಸೇರಿದಂತೆ ಹಲವರು ಕಾರ್ಮಿಕ ಇಲಾಖೆಯ ತಾಲೂಕಾ ಕಚೇರಿಯ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅಸಮರ್ಪಕ ಕಿಟ್ ಹಂಚಿಕೆ..! ಇನ್ನು, ಕಾರ್ಮಿಕರ ಆರೋಪದಂತೆ, ಈ ತಾಲುಕಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರಂತೆ. ಅರ್ಹರಿಗೆ ಸಿಗಬೇಕಾದ ಕಾರ್ಪೆಂಟರ್ ಕಿಟ್, ಗಾರೆ ಕೆಲಸದ ಕಿಟ್ ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲವಂತೆ. ತಿಂಗಳುಟ್ಟಲೇ ಅಲೆದಾಡಿಸಿ ಕಾರ್ಮಿಕರ ಜೀವ ಹಿಂಡುತ್ತಿದ್ದಾರೆ ಅನ್ನೋದು ನೊಂದ ಕಾರ್ಮಿಕರ ಆಕ್ರೋಶ. ಹೀಗಾಗಿ, ಇವತ್ತು ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಕಾರ್ಮಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮರ್ಪಕವಾಗಿ ಕಿಟ್ ಹಂಚಿ..! ಅಸಲು, ಇಲ್ಲಿನ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಹೇಳತೀರದ್ದಾಗಿದೆ. ಕಾರ್ಮಿಕ ಸಚಿವರ ತವರು ಕ್ಷೇತ್ರದಲ್ಲೇ ಇಂತಹ ಬೇಜವಾಬ್ದಾರಿಗಳು ನಡಿತಿರೋದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಿ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.
ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!
ಶಿಗ್ಗಾವಿ: ಅದೊಂದು ಅಪ್ಪಟ ದೇಸೀ ಗ್ರಾಮೀಣ ಕ್ರೀಡೆ.. ಅಲ್ಲಿನ ಅಖಾಡದಲ್ಲಿ ಧೂಳೆಬ್ಬಿಸುವ ಕುಸ್ತಿ ಕಲಿಗಳು ತೊಡೆ ತಟ್ಟಿ ನಿಂತಿದ್ರು. ನೀನಾ..? ನಾನಾ..? ಅಂತಾ ಕಣದಲ್ಲಿ ಕೇಕೆ ಹಾಕಿದ್ರು. ಇದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನಡೆದ ಕುಸ್ತಿ ಹಬ್ಬದ ರಣರೋಚಕ ದೃಷ್ಯಗಳು. ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಕುಸ್ತಿ ಹಬ್ಬ 2022-23 ಸಮಾರೋಪ ಸಮಾರಂಭ ರವಿವಾರ ನಡೆಯಿತು. ವಿವಿಧ ರಾಜ್ಯಗಳ ಕುಸ್ತಿಪಟುಗಳು..! ಅಂದಹಾಗೆ, ಶಿಗ್ಗಾವಿಯ ಕುಸ್ತಿ ಅಖಾಡಕ್ಕೆ ಕರ್ನಾಟಕ ಅಷ್ಟೇ ಅಲ್ಲದೇ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದ್ದರು. ಬರೋಬ್ಬರಿ 1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಹೋರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು. 800 ಕ್ಕೂ ಹೆಚ್ಚು ಪೈಲ್ವಾನರು.! ಇನ್ನು ಕುಸ್ಯಿ ಹಬ್ಬದಲ್ಲಿ 800 ಕ್ಕೂ ಅಧಿಕ ಪೈಲ್ವಾನರ ಕಾದಾಟ ಜೋರಾಗಿತ್ತು. 80...
ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ ಮೇಡಂ..!
ಮುಂಡಗೋಡ ತಾಲೂಕಿನಲ್ಲಿ ಬಹುಶಃ ಇಂದೂರು ಗ್ರಾಮ ಪಂಚಾಯತಿಯ ಪಿಡಿಓ ಮೇಡಂ ನಷ್ಟು ಬ್ಯುಸಿ ಯಾರೂ ಇರಲಿಕ್ಕಿಲ್ವೇನೊ..? ಯಾಕಂದ್ರೆ, ಈ ಮೇಡಮ್ಮು ಇಂದೂರು ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅಂತಾ ಜನ ಹೇಳ್ತಿದಾರೆ. ತಮ್ಮ ಪಂಚಾಯತಿ ಅಡಿಯಲ್ಲಿ ಏನೇನೇಲ್ಲ ನಡೀತಿವೆ ಅನ್ನೊ ಕನಿಷ್ಟ ಖಬರೂ ಇಲ್ಲದಂತಾಗಿದೆ. ಯಾರ್ಯಾರು ಎಲ್ಲೇಲ್ಲಿ ಏನೇನು ಕಾಮಗಾರಿ ಮಾಡ್ತಿದಾರೆ, ಹೇಗೇ ಹೇಗೆ ನಡಿತಿವೆ ಅನ್ನೊ ಉಸಾಬರಿ ಬಹುತೇಕ ಪಿಡಿಓ ಮೇಡಂಗೆ ಇದೆಯೊ ಇಲ್ವೋ ಅರ್ಥವಾಗಬೇಕಿದೆ. ಬರೋದೇ ಮದ್ಯಾಹ್ನ..! ಅಸಲು, ಇಂದೂರು ಗ್ರಾಮ ಪಂಚಾಯತಿಗೆ ಪಿಡಿಓ ಆಗಿ ಬಂದಿರೋ ಮೇಡಮ್ಮು, ದಿನಾಲು ಆಫೀಸಿಗೆ ಬರೋದೇ ಮದ್ಯಾಹ್ನದ ನಂತರ, ಹೀಗಾಗಿ, ಅದೇಷ್ಟೋ ಸಾರ್ವಜನಿಕರು ಬೆಳಿಗ್ಗೆ ಮೇಡಂ ದರ್ಶನಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಸಣ್ಣದೊಂದು ಪ್ರಮಾಣ ಪತ್ರ ಪಡೆಯಲೂ ಅಲೆದಾಡುವ ಅನಿವಾರ್ಯತೆ ಇದೆ. ಹೀಗಾಗಿ, ಕೆಲಸ ಬಿಟ್ಟು ಪಿಡಿಓ ಸಾಹೇಬ್ರ ದರ್ಶನಕ್ಕಾಗಿ ಕಾದು ಕುಳಿತುಕೊಳ್ಳೊ ಹಣೆಬರಹ ನಮ್ಮ ಗ್ರಾಮಸ್ಥರದು. ಹೀಗಾಗಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಕೊಡಬೇಕಿದೆ. ತಾಪಂ ನಲ್ಲಿ ಕೆಲಸವಂತೆ..! ಅಷ್ಟಕ್ಕೂ, ನಿತ್ಯವೂ...
ಟಿಬೇಟಿಯನ್ ಕಾಲೋನಿಯಲ್ಲಿ ಜೇನು ನೋಣಗಳ ದಾಳಿ, 100 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಜೇನು ನೋಣಗಳು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂ.1 ರಲ್ಲಿ ಜೇನು ದಾಳಿಯಾಗಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ಜೇನುನೋಣಗಳ ದಾಳಿಯಾಗಿದೆ. ಪರಿಣಾಮ ಸುಮಾರು 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅದಹಾಗೆ, ಇಂದು ತಾಲೂಕಿನ ಟಿಬೇಟಿಯನ್ ಕಾಲೋನಿ ನಂಬರ್ 1 ರಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ರು. ಈ ವೇಳೆ ಅದು ಹೇಗೋ ಗೊತ್ತಿಲ್ಲ, ಜೇನು ನೋಣಗಳು ದಾಳಿಮಾಡಿವೆ ಎನ್ನಲಾಗಿದೆ. ಪರಿಣಾಮ 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ಪ್ರಕಾಶ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!
ಶಿಗ್ಗಾವಿ ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿಗಳಿಂದ ತಾರತಮ್ಯವಾಯ್ತಾ..? SCP ಹಾಗೂ TSP ಯೋಜನೆಯಡಿ ಹಸುಗಳನ್ನು ನೀಡುವಾಗ ಫಲಾನುಭವಿಗಳ ಆಯ್ಕೆಯಲ್ಲಿ ಯಪರಾತಪರಾ ಮಾಡಿದ್ದಾರಾ..? ಹಾಗಂತ ಶಿಗ್ಗಾವಿಯ ಅನ್ನದಾತರು ಆರೋಪಿಸಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನ SCP ಹಾಗೂ TSP ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗಷ್ಟೆ ಮಾನ್ಯತೆ ನೀಡಿ ಹಸುಗಳನ್ನ ಮಂಜೂರಿಸಲು ಆಯ್ಕೆಮಾಡಿದ್ದಾರೆ. ಹಸುಗಳನ್ನು ನಿಡುವಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ರೈತರು ತಾಲೂಕಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ರು. ಅರ್ಹರಿಗೆ ಸಿಗಲಿ..! ಇನ್ನು ತಾಲೂಕಿನಲ್ಲಿ ಸಾಕಷ್ಟು ಜನ ಅರ್ಹರು ಇದ್ದಾರೆ. ಹೈನುಗಾರಿಕೆಯನ್ನು ನಂಬಿ ಬದುಕುತ್ತಿದ್ದಾರೆ. ಹೀಗಾಗಿ, ಅರ್ಹರಿಗೆ ಹಸುಗಳನ್ನು ನೀಡಬೇಕು ಅಂದಾಗ ಮಾತ್ರ ಯೋಜನೆ ಸದುಪಯೋಗ ಆಗತ್ತೆ. ಹೀಗಾಗಿ, ಅಧಿಕಾರಿಗಳು ಮತ್ತೊಮ್ಮೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಿ ಅಂತಾ ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಬನೂರು ಬೆಳಗಳಿ, ಹಿರೇಮಣಕಟ್ಟಿ, ಮುಗಳಿ ಹಾಗೂ ಹಲವು ಗ್ರಾಮಗಳ ರೈತರು ಭಾಗಿಯಾಗಿದ್ರು. ವರದಿ:ಮಂಜು ಪಾಟೀಲ್, ಶಿಗ್ಗಾವಿ
ಶಿಗ್ಗಾವಿಯ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳ ರೋಮಾಂಚಕ ಕುಸ್ತಿ, ಪಂದ್ಯಾವಳಿಗೆ ಇಂದು ಚಾಲನೆ..!
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಇಂದು ಎಲ್ಲಿ ನೋಡಿದರು ಪೈಲ್ವಾನ್ ರುಗಳ ಜಬರ್ಧಸ್ತ್ ಸಂಚಾರ. ಕಣದಲ್ಲಿ ಧೂಳೆಬ್ಬಿಸಿ ತೊಡೆತಟ್ಟಿ ನಿಂತ ಕುಸ್ತಿ ಕಲಿಗಳ ರೋಮಾಂಚಕ ಪಟ್ಟು. ಜಿಲ್ಲೆವಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದ ನೂರಾರು ಜಗಜಟ್ಟಿಗಳ ಕಾದಾಟ.. ಅಭಿಮಾನಿಗಳ ಕೇಕೆ ಶಿಳ್ಳೆಗಳ ಝೇಂಕಾರ..! ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಐದು ದಿನಗಳ ಕಾಲ ನಡೆಯುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯವನ್ನ ಇದೆ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಇಂದು ಈ ಕುಸ್ತಿ ಪಂದ್ಯಕ್ಕೆ ಸಾಂಕೇತಿಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು. ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು.1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಗೊಡವಿ ಹೊರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು. ಇಂದು 80 ಕೆಜಿ,60 ಕೆಜಿ,30-40 ಕೆಜಿ ತೂಕದ ಪೈಲ್ವಾನರ ಅಖಾಡಕ್ಕೆ ದುಮುಕಿದರು. ಪಿಟ್ ಎಂಡ್ ಪೈನ್ ಆಗಿದ್ದ ಕಟ್ಟುಮಸ್ತಾದ ಪಟುಗಳ ಇದಕ್ಕಾಗಿ ತಿಂಗಳುಗಳ...