ಭಾರೀ ಮಳೆ, ಗೋಕರ್ಣ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ..!

ಭಾರೀ ಮಳೆ, ಗೋಕರ್ಣ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ..!

 ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ, ಅವಾಂತರಗಳು ಸೃಷ್ಟಿಯಾಗಿವೆ. ಕುಮಟಾ ತಾಲೂಕಿನ ಗೋಕರ್ಣ ಕ್ರಾಸ್ ಬಳಿ ಗುಡ್ಡ ಕುಸಿತವಾಗಿದೆ. ಗೋಕರ್ಣದ ಮಾದನಗೇರಿಯ ಬಳಿ ಗುಡ್ಡ ಕುಸಿತವಾಗಿದ್ದು, ಐಆರ್‌ಬಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಗುಡ್ಡ ಕುಸಿತದಿಂದಾಗಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು, ಹೀಗಾಗಿ, ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೆದ್ದಾರಿಗೆ ಬಿದ್ದ ಮಣ್ಣನ್ನ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಬುಧವಾರ ಹಾಗೂ ಗುರವಾರ ಭಾರೀ ಮಳೆಯ ಸೂಚನೆ‌ ನೀಡಲಾಗಿದೆ. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ನಾಳೆ ಬುಧವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀ‌ಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.

ಸಿನಿಮಿಯ ರೀತಿಯಲ್ಲಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು, ಅಷ್ಟಕ್ಕೂ ಹತ್ಯೆ ನಂತರ ಪೊಲೀಸರಿಗೆ ಕರೆ ಮಾಡಿದ್ರಾ ಹಂತಕರು..?

ಸಿನಿಮಿಯ ರೀತಿಯಲ್ಲಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು, ಅಷ್ಟಕ್ಕೂ ಹತ್ಯೆ ನಂತರ ಪೊಲೀಸರಿಗೆ ಕರೆ ಮಾಡಿದ್ರಾ ಹಂತಕರು..?

 ಬೆಳಗಾವಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಹಂತಕರ ಅರೆಸ್ಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ. ಚಂದ್ರಶೇಖರ್ ಗುರೂಜಿಯವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಹಂತಕರು, ಬಟ್ಟೆ ಬದಲಿಸಿ ಕಾರಲ್ಲೇ ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ತೆರಳುತ್ತಿದ್ರು. ಇದೇ ವೇಳೆ ಮೊಬೈಲ್ ಟವರ್ ಲೋಕೇಶನ್ ಆಧಾರದಲ್ಲಿ ಹತ್ಯೆಯಾದ ಕೇವಲ 4 ಗಂಟೆಯಲ್ಲೇ ಹಂತಕರನ್ನು ಎಳೆದು ತಂದಿದ್ದಾರೆ ಪೊಲೀಸರು. ಆರೋಪಿಗಳಿಂದಲೇ ಕರೆ..! ಇನ್ನು, ಹಾಗೆ ಗುರೂಜಿಯ ಹತ್ಯೆಯ ನಂತರ ಹಂತಕರು ಹುಬ್ಬಳ್ಳಿ ಪೊಲೀಸರಿಗೆ ಖುದ್ದಾಗಿ ಪೋನ್ ಕರೆ ಮಾಡಿದ್ದರಂತೆ. ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹಂತಕರು, ನಾವು ಬೆಳಗಾವಿ ಕಡೆಗೆ ಹೋಗುತ್ತಿದ್ದೇವೆ ಅಂತಾ ಹೇಳಿದ್ದರಂತೆ. ಹೀಗಾಗಿ, ತಕ್ಷಣವೇ ಹುಬ್ಬಳ್ಳಿ ಪೊಲೀಸ್ರು ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ರಾಮದುರ್ಗ ಪೊಲೀಸರು ಹಂತಕರನ್ನು ಬಂಧಿಸಿದ್ದಾರೆ. ಹಾಗಂತ, ಹುಬ್ಬಳ್ಳಿ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಆಪ್ತರಿಂದಲೇ ಹತ್ಯೆಯಾದ್ರಾ ಚಂದ್ರಶೇಖರ ಗುರೂಜಿ..? ಬೇನಾಮಿ ಆಸ್ತಿಗಾಗಿ ಚುಚ್ಚಿ ಚುಚ್ಚಿ ಕೊಂದ್ರಾ ಹಂತಕರು..?

ಆಪ್ತರಿಂದಲೇ ಹತ್ಯೆಯಾದ್ರಾ ಚಂದ್ರಶೇಖರ ಗುರೂಜಿ..? ಬೇನಾಮಿ ಆಸ್ತಿಗಾಗಿ ಚುಚ್ಚಿ ಚುಚ್ಚಿ ಕೊಂದ್ರಾ ಹಂತಕರು..?

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯರ ಬೀಕರ ಹತ್ಯೆಯ ಹಿಂದೆ ಬೇನಾಮಿ ಆಸ್ತಿಯ ನೆರಳಿದೆ. ಬಹುತೇಕ ಆಪ್ತರೇ ಹಂತಕರು ಅನ್ನೋ ಪ್ರಾಥಮಿಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಅಷ್ಟಕ್ಕೂ, ಹಂತಕ ಆರೋಪಿಗಳು ಕಲಘಟಗಿ ತಾಲೂಕಿನ ದುಮ್ಮವಾಡದ ನಿವಾಸಿಗಳು ಎನ್ನಲಾಗಿದೆ. ಬೇನಾಮಿ ಆಸ್ತಿ ಕಾರಣವಾ..? ಇ‌ನ್ನು, ಚಂದ್ರಶೇಖರ್ ಗುರೂಜಿ ವನಜಾಕ್ಷಿಯ ಹೆಸರಿಗೆ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಹಾಗೆ ವನಜಾಕ್ಷಿ ಹೆಸರಲ್ಲಿ ಇದ್ದ ಆಸ್ತಿ ವಾಪಸ್ ಕೇಳಿದ್ದ ಕಾರಣಕ್ಕೆ ಇಂತಹ ಭೀಕರ ಹತ್ಯೆ ನಡೆದಿದೆ ಅನ್ನುವ ಮಾತುಗಳು ಕೇಳಿ ಬಂದಿದೆ.  

ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬರ್ಬರ ಹತ್ಯೆ..! 60 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಹಂತಕರು..!

ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬರ್ಬರ ಹತ್ಯೆ..! 60 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಹಂತಕರು..!

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬೀಕರ ಹತ್ಯೆಯಾಗಿದೆ. ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ಭಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ಕೊಲೆ ನಡೆದಿದೆ. ಕಾಲಿಗೆ ಬೀಳುವ ನೆಪದಲ್ಲಿ ಬಂದ ವ್ಯಕ್ತಿ ಕಾಲಿಗೆ ಬೀಳುತ್ತಿದ್ದಂತೆ, ಮತ್ತೊಂದು ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೇವಲ 40 ಸೆಕೆಂಡ್ ನಲ್ಲೆ 60 ಬಾರಿ ಎದೆಗೆ ಚೂರಿ ಇರಿತವಾಗಿದೆ. ಹೀಗಾಗಿ, ಸ್ಥಳದಲ್ಲೇ ಚಂದ್ರಶೇಖರ ಸ್ವಾಮೀಜಿ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣವೇನು, ಕೊಲೆಗಾರರು ಯಾರು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಮುಂಡಗೋಡ: ತಮ್ಮ ಸುಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ತಮ್ಮ ಮನದಾಳದ ನೋವು ಹಂಚಿಕೊಂಡಿರೋ ಪಾಟೀಲರು, ಮಮ್ಮಲ ಮರುಗಿದ್ದಾರೆ. ಯಾವ ತಂದೆಗೂ ಈ ಪರಿಸ್ಥಿತಿ ಬರೋದು ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ವಿ.ಎಸ್.ಪಾಟೀಲ್, ಈ ಹೆಸ್ರು ಕೇಳಿದ್ರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದ್ರಲ್ಲೂ ಯಲ್ಲಾಪುರ ಕ್ಷೇತ್ರದಲ್ಲಿ ಅದೇನೋ ಒಂದು ಅಭಿಮಾನ. ಅದೇನೋ ಒಂದು ಪ್ರೀತಿ. ಅವರ ಅಪ್ಪಟ ಜವಾರಿ ಭಾಷೆಯ ಮಾತುಗಳು, ನೇರ ನುಡಿಗಳು, ನಿಷ್ಕಲ್ಮಶ ಮನಸ್ಸು ಹೀಗೆ ಅವ್ರನ್ನ ನಾನು ಇವತ್ತಿಗೂ ಒಬ್ಬ ರಾಜಕಾರಣಿ ಅಂತಾ ನೋಡಿಯೇ ಇಲ್ಲ. ಅವ್ರು ನಮ್ಮ ಮಾರ್ಗದರ್ಶಿ ಸ್ಥಾನದಲ್ಲಿ ಯಾವಾಗ್ಲೂ ಇರ್ತಾರೆ. ಹೀಗಿರೋ ಅವ್ರಿಗೆ ಇಂತಹದ್ದೊಂದು ಪರಿಸ್ಥಿತಿ ಬಂದಿದೆಯಾ..? ಆ ಮಟ್ಟಿಗಿನ ಅನಿವಾರ್ಯತೆ ಎದುರಾಗಿದೆಯಾ..? ನಿಜಕ್ಕೂ ವಿ.ಎಸ್.ಪಾಟೀಲರ ಮನಸ್ಸು ಈ ಮಟ್ಟಿಗೆ ನೋವು ಉಂಡಿದೆಯಾ..? ಛೇ ಯಾವ ತಂದೆಗೂ ಬೇಡ ಈ ಅವಸ್ಥೆ..! ನಿನ್ನೆ ರಾತ್ರಿಯಿಂದ ಬಹುತೇಕ ವಾಟ್ಸಾಪ್ ಗಳಲ್ಲಿ ಅದೊಂದು ಸಾರ್ವಜನಿಕ ಪ್ರಕಟಣೆಯ ನೋಟೀಸು ಹರಿದಾಡ್ತಿದೆ. ಮಾಜಿ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಲಿ ಅಧ್ಯಕ್ಷ ವಿ.ಎಸ್.ಪಾಟೀಲ್ ಲೆಟರ್ ಹೆಡ್ ನಲ್ಲೇ ಇಂತಹದ್ದೊಂದು ಪ್ರಕಟಣೆ ಹೊರಡಿಸಲಾಗಿದೆ. ತಮ್ಮ ಪುತ್ರನಿಗೆ ಯಾರೂ ನನ್ನ ಹೆಸರು ಹೇಳಿ ಬಂದ್ರೆ ಸಾಲ ಕೊಡಬೇಡಿ ಅಂತಾ ಉಲ್ಲೇಖಿಸಲಾಗಿರೋ ಪ್ರಕಟಣೆ...

ಹಳಿಯಾಳದಲ್ಲಿ 4 ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಪ್ರತಿಭಟನೆ, ಮಳೆಯ ನಡುವೆಯೂ ಆರದ ಕಿಚ್ಚು..!

ಹಳಿಯಾಳದಲ್ಲಿ 4 ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಪ್ರತಿಭಟನೆ, ಮಳೆಯ ನಡುವೆಯೂ ಆರದ ಕಿಚ್ಚು..!

ಹಳಿಯಾಳ: ಪಟ್ಟಣದ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರೋ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸುರಿಯುತ್ತಿರೋ ಮಳೆಯನ್ನು ಲೆಕ್ಕಿಸದೆ ಮುಷ್ಕರದಲ್ಲಿ ನಿರತರಾಗಿರೋ ಪೌರಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತಾ ಜಿದ್ದಿಗೆ ಬಿದ್ದಿದ್ದಾರೆ. ಅನಿರ್ಧಿಷ್ಟ ಧರಣಿ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಹಳಿಯಾಳ ಘಟಕದ ತಾಲೂಕಾಧ್ಯಕ್ಷ ಫಯಾಜ್ ಅಹ್ಮದ್ ಗೊರೆಖಾನ್, ಉಪಾಧ್ಯಕ್ಷೆ ಲಲಿತ ಚಲವಾದಿ, ಕಾರ್ಯದರ್ಶಿ ಮಂಜುನಾಥ್ ಮಾದಾರ, ಫ್ರಾನ್ಸಿಸ್ ಬ್ರುಗಾಂಜ, ಸುನಿಲ್ ಘೋಟ್ನೇಕರ, ಪರಶುರಾಮ್ ಚಲವಾದಿ, ಅಂಜನ ಕಲ್ಕೆಕನವರ್, ಸುವಾರ್ಥ ಮಾದಾರ, ಸರಸ್ವತಿ ಮಾದಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!

ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!

ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ “ರಾಜೀ”ನಾಮೆ ಕೊಡಿಸುವ ವಿಚಾರ, ಲೊಕಲ್ ಬಿಜೆಪಿಗರಿಗೆ ಭಾರೀ ಪೀಕಲಾಟ ತಂದಿಟ್ಟಿದೆ. ನಾನು ರಾಜೀನಾಮೆ ಕೊಡಲ್ಲ ಅಂತಾ ಕಡ್ಡಿ‌ಮುರಿದಂತೆ ಹೇಳಿರೋ ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ ಮೇಡಂ, ಇಂದೂರಿನ ಬಿಜೆಪಿಗರಿಗೆ ಬಿಸಿ ತುಪ್ಪವಾಗಿದ್ದಾರಾ..? ಹೇಗಾದ್ರೂ ಸರಿ ಮಾತು ಕೊಟ್ಟಂತೆ ನಡೆದುಕೊಳ್ಳಲೇ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಅಸಮಾಧಾನಿತ ಇ‌ಂದೂರಿನ ಸದಸ್ಯರಿಗೆ, ಅದ್ಯಾಕೋ ಏನೋ ಅಂದುಕೊಂಡಂತೆ ಆಗುತ್ತಲೇ ಇಲ್ಲ. ಮಾತು ಬದಲಿಸಿದ್ರಾ ಉಪಾಧ್ಯಕ್ಷ..? ಅಂದಹಾಗೆ, ಅಧ್ಯಕ್ಷರ ಬದಲಾವಣೆಗೆ ಪಣತೊಟ್ಟು ನಿಂತಿರೊ ಇಂದೂರಿನ ಬಿಜೆಪಿ ಬಳಗ, ಈಗಾಗಲೇ ಸಭೆ ಮೇಲೆ ಸಭೆ ಮಾಡುತ್ತಿದೆ. ಒಟ್ಟೂ 12 ಬಿಜೆಪಿ ಬೆಂಬಲಿತರ ಸದಸ್ಯರಿರೋ ಇಂದೂರು ಗ್ರಾಮ ಪಂಚಾಯತಿಯಲ್ಲಿ ಸದ್ಯ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ, ಹಾಗೂ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಹೊರತುಪಡಿಸಿ ಕೇವಲ 10 ಸದಸ್ಯರ ಒಂದೆಡೆ ಇದ್ದಾರೆ. ಇದುವರೆಗೂ ನಾನು ರಾಜೀನಾಮೆ ನೀಡೋಕೆ ರೆಡಿ ಅಂತಾ ಹೇಳಿಕೊಂಡಿದ್ದ ಉಪಾಧ್ಯಕ್ಷ ಸಿಖಂದರ ಬಂಕಾಪುರ, ಈಗ ಅದ್ಯಾಕೋ ಏನೋ ಮಾತು ಬದಲಿಸಿದ್ದಾರಂತೆ. ಅಲ್ದೆ ಮೊನ್ನೆ ಸಭೆಯ ಬಳಿಕ...

ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

error: Content is protected !!