ಸಿನಿಮಿಯ ರೀತಿಯಲ್ಲಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು, ಅಷ್ಟಕ್ಕೂ ಹತ್ಯೆ ನಂತರ ಪೊಲೀಸರಿಗೆ ಕರೆ ಮಾಡಿದ್ರಾ ಹಂತಕರು..?


ಬೆಳಗಾವಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಹಂತಕರ ಅರೆಸ್ಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ.

ಚಂದ್ರಶೇಖರ್ ಗುರೂಜಿಯವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಹಂತಕರು, ಬಟ್ಟೆ ಬದಲಿಸಿ ಕಾರಲ್ಲೇ ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ತೆರಳುತ್ತಿದ್ರು. ಇದೇ ವೇಳೆ ಮೊಬೈಲ್ ಟವರ್ ಲೋಕೇಶನ್ ಆಧಾರದಲ್ಲಿ ಹತ್ಯೆಯಾದ ಕೇವಲ 4 ಗಂಟೆಯಲ್ಲೇ ಹಂತಕರನ್ನು ಎಳೆದು ತಂದಿದ್ದಾರೆ ಪೊಲೀಸರು.

ಆರೋಪಿಗಳಿಂದಲೇ ಕರೆ..!
ಇನ್ನು, ಹಾಗೆ ಗುರೂಜಿಯ ಹತ್ಯೆಯ ನಂತರ ಹಂತಕರು ಹುಬ್ಬಳ್ಳಿ ಪೊಲೀಸರಿಗೆ ಖುದ್ದಾಗಿ ಪೋನ್ ಕರೆ ಮಾಡಿದ್ದರಂತೆ. ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹಂತಕರು, ನಾವು ಬೆಳಗಾವಿ ಕಡೆಗೆ ಹೋಗುತ್ತಿದ್ದೇವೆ ಅಂತಾ ಹೇಳಿದ್ದರಂತೆ. ಹೀಗಾಗಿ, ತಕ್ಷಣವೇ ಹುಬ್ಬಳ್ಳಿ ಪೊಲೀಸ್ರು ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ರಾಮದುರ್ಗ ಪೊಲೀಸರು ಹಂತಕರನ್ನು ಬಂಧಿಸಿದ್ದಾರೆ. ಹಾಗಂತ, ಹುಬ್ಬಳ್ಳಿ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

error: Content is protected !!