5 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ, ಬಿಹಾರ ಮೂಲದ ಆರೋಪಿಯನ್ನು ಎನಕೌಂಟರ ಮಾಡಲಾಗಿದೆ. ಮನೆಯ ಮುಂದೆ ಆಟ ಆಡುತ್ತಿದ್ದ 5 ವರ್ಷದ ಬಾಲಕಿಯನ್ನು ಸಂತೋಷ ನಗರದ ಅಜ್ಞಾತ ಸ್ಥಳಕ್ಕೆ ಕರೆದೋಯ್ದಿದ್ದ ಬಿಹಾರ ಮೂಲದ ಯುವಕ ಆಕೆಯ ಸಾವಿಗೆ ಕಾರಣವಾಗಿದ್ದ. ಘಟನೆ ನಡೆಯುತ್ತಿದ್ದಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಳು ಜೋರಾಗಿದ್ದವು. ಆರೋಪಿಯನ್ನು ನಮ್ಮ ಕೈಗೆ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಬಂಧಿಸಲು ಹೋದಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿದ್ದ. ತಕ್ಷಣ ಕಾಲಿಗೆ ಫೈರ್ ಮಾಡಿದ ಪೊಲೀಸರು ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ತಂದಿದ್ದರು. ಆರೋಪಿ ಕಾಲಿಗೆ ಗುಂಡೇಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ.
Top Stories
ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ
ಭೀಕರ ಮಳೆಗೆ ಬೆಂಗಳೂರಲ್ಲಿ ಬಾಲಕ ಸೇರಿ ಮೂವರು ಬಲಿ..! 24 ಗಂಟೆಯಲ್ಲಿ 10.4 ಸೆಂ.ಮೀ. ಮಳೆ ದಾಖಲು..!
ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್….: 9 ಮಂದಿ ‘ಪಾಕಿಸ್ತಾನ ಗೂಢಚಾರರ’ ಬಂಧನ..! ಗದ್ದಾರ್ ಗಳು ಅಂದ್ರೆ ಇವ್ರೇ ಅಲ್ವಾ..?
ಪ್ಲೇಆಪ್ ತಲುಪಿರೋ RCB ತಂಡಕ್ಕೆ ಮತ್ತೊಂದು ಶುಭಸುದ್ದಿ..! ಇದನ್ನ ಲಾಟರಿ ಅಂದ್ರೂ ಓಕೆ.!!
ಲೋಕಾಯುಕ್ತ ಅಧಿಕಾರಿಗಳ ನಾಳೆಯ (ಮೇ 20 ರ) ಮುಂಡಗೋಡ ಕಾರ್ಯಕ್ರಮ ಮೇ. 28ಕ್ಕೆ ಮುಂದೂಡಿಕೆ..!
Rain Alert News: ಭಾರಿ ಮಳೆಯ ಮುನ್ಸೂಚನೆ, ಉತ್ತರ ಕನ್ನಡದಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ: ಎಚ್ಚರಿಕೆ ವಹಿಸಿ; ಡಿಸಿ ಲಕ್ಷ್ಮೀಪ್ರಿಯ
Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!
ಬಂಗಾರದ ಬೆಲೆ ಮತ್ತೆ ₹380 ಹೆಚ್ಚಳ; ಬೆಳ್ಳಿ ₹1000 ತುಟ್ಟಿ, ಈ ದರ ಏರಿಕೆಗೆ ಕಾರಣಗಳೇನು ಗೊತ್ತಾ..?
ಸತತ 2ನೇ ದಿನ ಕುಸಿದ ಷೇರುಪೇಟೆ : ಸೆನ್ಸೆಕ್ಸ್ 270 ಪಾಯಿಂಟ್ಸ್ ಇಳಿಕೆ, ಟಾಪ್ ಗೇನರ್ ಮತ್ತು ಲೂಸರ್ಸ್ ಇಲ್ಲಿವೆ
Lokayukta Raid News :ಅಡ್ಮಿಶನ್ ಮಾಡಿಕೊಳ್ಳಲು ಲಂಚ ಸ್ವೀಕಾರ, ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!
Accident News: ಕಾರ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ BJP ತಾಲೂಕಾ ಮಾಜಿ ಅಧ್ಯಕ್ಷ ಸೇರಿ ಮೂವರು ದುರಂತ ಸಾವು..!
FIRE MISHAP News: ಹೈದರಾಬಾದ್ ಬೆಂಕಿ ಅವಘಡ, ಒಂದೇ ಕುಟುಂಬದ 17 ಜನರ ಸಾವು..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಹುಬ್ಬಳ್ಳಿ: ಇಡೀ ಹುಬ್ಬಳ್ಳಿ ನಗರವೇ ತಲೆತಗ್ಗಿಸುವ ಕ್ರೌರ್ಯವೊಂದು ಅಶೋಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಾರಣವಾದ ಆರೋಪಿಯ ಪತ್ತೆಗಾಗಿ ಐದು ತಂಡಗಳನ್ನ ರಚನೆ ಮಾಡಲಾಗಿದೆ. 5 ವರ್ಷದ ಕಂದಮ್ಮನನ್ನ ಅಪಹರಣ ಮಾಡಿ, ಕಾಮದ ಉದ್ದೇಶದಿಂದ ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗಿದೆ. ಆದರೆ, ಅತೀ ಗಲೀಜಿರುವ ಟಾಯ್ಲೆಟ್ನಲ್ಲಿ ಕೂತ ರೂಪದಲ್ಲಿ ಮಗುವಿನ ಪ್ರಾಣ ಹೋಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಶವವನ್ನ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಆಕ್ರೋಶಗೊಂಡ ಹಲವರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸ್ ಕಮೀಷನರ್ ಕಿಮ್ಸ್ಗೆ ಭೇಟಿ ನೀಡಿದ್ದಾರೆ.
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಅವರು ಶನಿವಾರ ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಜಾತಿ ತಾನೊಂದೆ ವಲಂ ಎಂದ ಕನ್ನಡದ ಆದಿ ಕವಿ ಪಂಪ ನ ನೆನಪಿನಲ್ಲಿ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡುವ ಕುರಿತಂತೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಕೆಯಾದಲ್ಲಿ ಈ ಬಗ್ಗೆ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಬನವಾಸಿಯಲ್ಲಿ ಪಂಪ ವನ ಅಭಿವೃದ್ಧಿಗಾಗಿ 50 ಲಕ್ಷ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕದಂಬ ಉತ್ಸವಕ್ಕೆ ಪ್ರತಿ ವರ್ಷ 2...
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಭೂ ದಾಖಲೆಗಳು ಕಂದಾಯ ಆಡಳಿತದ ಮುಖ್ಯ ಭಾಗವಾಗಿದ್ದು, ಅನೇಕ ದಶಕಗಳವರೆಗೆ ಇರುವ ಭೂ ದಾಖಲೆಗಳು ಒಂದು ನಿರ್ದಿಷ್ಟ ಭೂಮಿಯ ಮೇಲೆ ನಡೆದ ವ್ಯವಹಾರಗಳ ಇತಿಹಾಸದ ಪ್ರಮುಖ ಕೊಂಡಿಯಾಗಿದೆ. ದೀರ್ಘಾವಧಿಯ ವರೆಗೆ ಈ ದಾಖಲೆಗಳ ಸರಿಯಾದ ನಿರ್ವಹಣೆ ಮತ್ತು ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದ್ದು, ಭೂ ಸುರಕ್ಷಾ ಯೋಜನೆಯ ಮೂಲಕ ಭೂದಾಖಲೆಗಳನ್ನು ಸಂರಕ್ಷಿಸಿ ಅದನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ. ಈ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಾಂಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪಲೋಡ್ ಮಾಡಲಾಗುವ ಕಾರ್ಯದಲ್ಲಿ ನಾನ್ ಪೈಲಟ್ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ತಹಶೀಲ್ದಾರ ಕಚೇರಿಯ ಅಭಿಲೇಖಾಲಯದಲ್ಲಿರುವ ಎ ಮತ್ತು ಬಿ ವರ್ಗದ (ಎ ವರ್ಗದ ದಾಖಲೆಗಳು ಶಾಶ್ವತವಾಗಿರುತ್ತದೆ ಹಾಗೂ ಬಿ ವರ್ಗದ ದಾಖಲೆಗಳು 30 ವರ್ಷಗಳ ಕಾಲ ಸಂರಕ್ಷಿಸಲ್ಪಡುತ್ತದೆ.) ದಾಖಲೆಗಳಾದ ಕೈಬರಹ ಪಹಣಿ ,ಮ್ಯುಟೇಶನ್ ವಹಿ, ಭೂಮಂಜೂರಾತಿ ಕಡತಗಳು, ಭೂಪರಿವರ್ತನೆ ಕಡತಗಳು, ಭೂಸುಧಾರಣೆ ಕಡತಗಳನ್ನು ನವೀನ ತಂತ್ರಜ್ಞಾನ...
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ಏಪ್ರಿಲ್ 1 ರಿಂದ ಜೂನ್ 30 ರ ವರೆಗೆ ಸ್ತ್ರೀ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯಡಿ ಮಹಿಳೆಯರಿಗಾಗಿ ವಿಶೇಷ ಸವಲತ್ತು ಮತ್ತು ಅವಕಾಶಗಳನ್ನು ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಹೇಳಿದರು. ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂ. 329ರಲ್ಲಿ ಬಾಳೆಮಡ್ಡಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ಸ್ತ್ರೀ ಚೇತನ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಮನರೇಗಾ ಯೋಜನೆಯಡಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನವನ್ನು ನೀಡುವುದಲ್ಲದೇ ಮಹಿಳೆಯರಿಗೆ ಪ್ರಥಮ ಆದ್ಯತೆಯಲ್ಲಿ ಕೆಲಸ ನೀಡಲಾಗುತ್ತಿದೆ. ಏಪ್ರಿಲ್ 01 ರಿಂದ ಅನ್ವಯವಾಗುವಂತೆ ಕೂಲಿ ಮೊತ್ತವನ್ನು ರೂ. 349 ರಿಂದ ರೂ. 370ಕ್ಕೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಕೂಲಿಕಾರರ ಆರೋಗ್ಯ ಹಿತದೃಷ್ಟಿಯಿಂದ ಏಪ್ರಿಲ್ ಮತ್ತು...
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26 ನೇ ಸಾಲಿಗೆ ಕುಸ್ತಿ (ಬಾಲಕರು/ಬಾಲಕಿಯರು),ಅರ್ಚರಿ (ಬಾಲಕರು) ಫೆನ್ಸಿಂಗ್(ಬಾಲಕರು), ಬಾಕ್ಸಿಂಗ್ (ಬಾಲಕರು/ಬಾಲಕಿಯರು) ಕ್ರೀಡೆಗಳಿಗೆ ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪರಿಶಿಷ್ಟ ಪಂಗಡದ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಏ.14 ರಂದು ಯಲ್ಲಾಪುರ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಸಲಾಗಿದೆ. ಭಾಗವಹಿಸುವ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳು 2025-26 ನೇ ಸಾಲಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ಗೆ ಅರ್ಹತೆ ಪಡೆದಿರಬೇಕು ಜೂನ್ 1 ಕ್ಕೆ 14 ವರ್ಷ(8 ನೇ ತರಗತಿ)ಮತ್ತು (ಪ್ರಥಮ ಪಿ.ಯು.ಸಿ) ಮೀರಿರಬಾರದು. ಜನನ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಾಸ್ಪೋಟ್ ಸೈಜ್ ಫೋಟೋ ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಮೊ.ಸಂ:78991404699, ಕುಸ್ತಿ ತರಬೇತುದಾರರಾದ ಶಿವಾನಂದ ಆರ್ ಮೊ.ಸಂ:7019565606, ತುಕರಾಮ ಗೌಡ ಮೊ.ಸಂ: 9945489193, ಅರ್ಚರಿ ತರಬೇತಿದಾರ ರಾಘು...
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ 12 ವರ್ಷ ಮೇಲ್ಪಟ್ಟ ಬಾಲಕ/ಬಾಲಕೀಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ-2025 ನ್ನು ಏ.15 ರಿಂದ ಏ.29 ರವರೆಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 8.30 ಗಂಟೆಯವರೆಗೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ನೋಂದಣಿಗೆ ಏ.14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಥ್ಲೆಟಿಕ್ ತರಬೇತಿದಾರ ಶಿವಾನಂದ ನಾಯ್ಕ ಮೊ. ಸಂಖ್ಯೆ: 8722516856 ನ್ನು ಸಂಪರ್ಕಿಸುವAತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಕಾರವಾರ: ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭವು ಏ.12 ಮತ್ತು 13 ರಂದು ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯಲಿದೆ. ಕದಂಬೋತ್ಸವ-2025 ರ ಉದ್ಘಾಟನೆಯನ್ನು,ಏ.12 ರಂದು ಸಂಜೆ 5 ಗಂಟೆಗೆ ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಯಲ್ಲಾಪುರ- ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ. ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು...
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲೆಗೆ ನೀಡಿದ ನಿಗಧಿತ ಮಾನವ ದಿನಗಳನ್ನು ಸೃಜಿಸುವ ಕಾರ್ಯದಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, 2023-24 ರ ಅವಧಿಯಲ್ಲೂ ಸಹ ಶೇ.100 ಸಾಧನೆ ಮಾಡಿದ್ದು, ಸತತ ಎರಡನೇ ವರ್ಷವೂ ಗುರಿ ಸಾಧಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 17 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, ಈ ಗುರಿಗೆ ಎದುರಾಗಿ ಒಟ್ಟೂ 17.46 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 102.73 ರಷ್ಟ್ಟು ಸಾಧನೆ ಮಾಡಲಾಗಿದ್ದು, ಕಳೆದ 2023-24 ನೇ ಸಾಲಿನಲ್ಲಿ 18 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಗೆ ಎದುರಾಗಿ ಒಟ್ಟೂ 18.29 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 101.61 ರಷ್ಟ್ಟು ಸಾಧನೆ...
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮುಂಡಗೋಡ ಪಟ್ಟಣದಲ್ಲಿ ಭಾರಿ ಮಳೆ ಗಾಳಿಗೆ ಇನ್ನಿಲ್ಲದ ಅವಾಂತರಗಳು, ಅವಘಡಗಳು ಸಂಭವಿಸಿವೆ. ಪಟ್ಟಣದ ಬಂಕಾಪುರ ರಸ್ತೆಯ PLD ಬ್ಯಾಂಕ್ ಹತ್ತಿರದ ಮೊಬೈಲ್ ಟವರ್ ಮಳೆ ಗಾಳಿಗೆ ಬಿದ್ದಿದೆ. ಅಲ್ದೆ ಹಲವು ಮನೆಗಳಿಗೆ ಹಾನಿಯಾಗಿದೆ. ಆದ್ರೆ, ಖಚಿತ ಮಾಹಿತಿಗಳು ಇನ್ನಷ್ಟೆ ಬರಬೇಕಿದೆ. PLD ಬ್ಯಾಂಕ್ ಪಕ್ಕದಲ್ಲಿರುವ ಮೊಬೈಲ್ ಟವರ್ ಮಳೆಗಾಳಿಗೆ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಇದ್ರಂತೆ ಪಟ್ಟಣದ ನೆಹರು ನಗರ, ಗಾಂಧಿನಗರದಲ್ಲಿ ಹಲವು ಮನೆಗಳ ಮೇಲ್ಚಾವಣಿಗಳು ಮಳೆಗಾಳಿಗೆ ಹಾರಿಹೋಗಿವೆ. ಅಲ್ದೆ, ಮರಗಳು ಮನೆಗಳ ಮೇಲೆ ಬಿದ್ದು ಹಾನಿಯಾಗಿದೆ.