ಮುಂಡಗೋಡ: ತಾಲೂಕಿನ ಯರೇಬೈಲು ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ಮುಂಡಗೋಡ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಯರೆಬೈಲು ಗ್ರಾಮದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಗ್ರಾಮದಲ್ಲಿ ಇನ್ನು ಮುಂದೆ ಸರಾಯಿ ಮಾರಾಟ ಮಾಡದಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಯಾರಾದ್ರೂ ಸರಾಯಿ ಮಾರಾಟ ಮಾಡಿದರೇ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
Top Stories
ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..!
ಪಾಕ್ ಉಗ್ರವಾದಕ್ಕೆ 4 ದಶಕದಲ್ಲಿ 20000 ಭಾರತೀಯರು ಬಲಿ!
ಜಪಾನ್ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!
ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಸಾವು..!
ಸ್ಕೂಟಿ ಹಾಗೂ ಬೈಕ್ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮೊದಲೇ RCB ತಂಡಕ್ಕೆ ಸಂತಸದ ಸುದ್ದಿ ಸಿಕ್ಕಿದೆ..!
ಬೈಲಹೊಂಗಲದಲ್ಲಿ 3 ವರ್ಷದ ಪುಟ್ಟ ಕಂದಮ್ಮನನ್ನ ಮಲತಂದೆಯೇ ಮುಗಿಸಿಬಿಟ್ಟ..!
ಕಾಳಿ ನದಿಯಲ್ಲಿ ಕಾಲುಜಾರಿಬಿದ್ದು ಯುವಕ ನಾಪತ್ತೆ, ನದಿಯ ಹಿನ್ನಿರಿನಲ್ಲಿ ಯುವಕನಿಗೆ ಶೋಧ ಕಾರ್ಯ..!
ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!
ವಾಡಿಕೆಗಿಂತ ಒಂದು ವಾರ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ..!
ದೇಶದಲ್ಲಿ ಮತ್ತೆ ಕೋವಿಡ್ ಆತಂಕ : ರಾಜ್ಯದಲ್ಲಿ 38 ಕೇಸ್, ಬೆಂಗಳೂರಲ್ಲೇ 32 ಸೋಂಕಿತರು..!
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್ ಮೇಲೆ ಬೆಂಗಳೂರಿಗರ ಕಣ್ಣು..!
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!
ವಡಗಟ್ಟಾ ಅಗಡಿ ರಸ್ತೆ ಬಂದ್; ಹುನಗುಂದ ರೈತರ ಗೋಳು ಕೇಳೋರ್ಯಾರು..?
ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ವಡಗಟ್ಟಾ-ಅಗಡಿ ರಸ್ತೆ ಬಂದ್ ಆಗಿದೆ. ಮುಂಡಗೋಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ. ಆಗಿದ್ದೇನು..? ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತಿ, ಇನ್ನೇನು ಮೊಳಕೆ ಒಡೆದು ಸಸಿಯಾಗುವ ಹಂತದಲ್ಲಿರುವಾಗಲೇ ಭಾರೀ ಮಳೆಯ ಕಾರಣಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ. ಅರಶಿಣಗೇರಿ ಕೆರೆ ಕಾಲುವೆ ಫುಲ್.! ಈ ಮದ್ಯೆ, ಅರಶಿಣಗೇರಿ ಕೆರೆಯಿಂದ ರೈತರ ಜಮೀನುಗಳಿಗೆ ಸಂಪರ್ಕಿಸೋ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯ ನೀರು ಹರಿದು ಬರುತ್ತಿದೆ. ಹಾಗೆ ಹರಿದು ಬರುವ ನೀರು ಹುನಗುಂದ ಗ್ರಾಮದ ದೇಶಪಾಂಡೆ ನಗರದಲ್ಲಿ ಬಂದು ನಿಲ್ಲುತ್ತಿದೆ. ಯಾಕಂದ್ರೆ, ರಸ್ತೆಗೆ ಅಡ್ಡಲಾಗಿ ಕಟ್ಟಿರೋ ಚಿಕ್ಕ ಸಿಡಿ ಸಂಪೂರ್ಣ ಕುಸಿತಗೊಂಡಿದೆ. ಆ ಕಾರಣಕ್ಕೆ ಕಾಲುವೆಯಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ರೈತರ ಗದ್ದೆಗಳಿಗೆ ಹೊಕ್ಕಿದೆ. ಹೀಗಾಗಿ ರೈತರ ಜಮೀನುಗಳು ಅಕ್ಷರಶಃ ಕೆರೆಗಳಂತಾಗಿ ಮಾರ್ಪಟ್ಟಿವೆ. ಈ ಕಾರಣಕ್ಕಾಗಿ ರೈತರ ಆಕ್ರೋಶದ ಕಟ್ಟೆಯೊಡೆದಿದೆ. ರೈತನ...
ಜಿಲ್ಲೆಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್: ಹೆಚ್ಚಿದ ಆತಂಕ, ತನಿಖೆ ಚುರುಕು..!
ಕಾರವಾರ: ಕಾರವಾರ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿದೆ. ಯಾವಾಗಿಂದ..? ಕಳೆದ ಸೋವವಾರದಿಂದ ಸತತ ಟ್ರ್ಯಾಕ್ ಆಗುತ್ತಿರುವ ನಿರ್ಬಂಧಿತ ಸ್ಯಾಟಲೈಟ್ ಫೋನ್ ಸಂಬಂಧ, ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ವಿಭಾಗದಿಂದ ತನಿಖೆ ಶುರುವಾಗಿದೆ. ಟ್ರ್ಯಾಕ್ ಆದ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ), ಅರಣ್ಯ ಇಲಾಖೆ ಸ್ಥಳೀಯ ಪೊಲೀಸರೊಳಗೊಂಡ ಐದು ಜನರ ತಂಡ ಜಾಂಬಾ ಗ್ರಾಮ ವ್ಯಾಪ್ತಿಯ ಅರಣ್ಯ ದಲ್ಲಿ ಕೂಮಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಎಲ್ಲೇಲ್ಲಿ ಆಕ್ಟಿವ್..? ಈವರೆಗೆ ಜಿಲ್ಲೆಯ ಕಾರವಾರ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್ ಅಗಿದೆ. ಕೈಗಾ ಅಣುಸ್ಥಾವರ, ನೌಕಾನೆಲೆ ಭದ್ರತೆ ದೃಷ್ಟಿಯಿಂದ ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ಹೆಚ್ಚಿನ ತನಿಖೆ ಶುರು ಮಾಡಿದೆ.
ಮುಂಡಗೋಡ ತಾಲೂಕಿನಲ್ಲಿ ಮಳೆಯಿಂದ 12 ಮನೆಗಳಿಗೆ ಹಾನಿ..!
ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆ, ಗಾಳಿ ಅವಾಂತರ ತಂದಿಟ್ಟಿದೆ. ತಾಲೂಕಿನಲ್ಲಿ ಮಳೆ ಗಾಳಿಗೆ ಒಟ್ಟೂ 12 ಮನೆಗಳಿಗೆ ಹಾನಿಯಾಗಿದ್ದು ಸಂಕಷ್ಟ ತಂದೊಡ್ಡಿದೆ. ಮಳೆಯಿಂದ ಹಾನಿ ಎಲ್ಲೇಲ್ಲಿ..? ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 12 ಮನೆಗಳಿಗೆ ಮಳೆ, ಗಾಳಿಯಿಂದ ಹಾನಿಗೊಳಗಾಗಿದ್ದು, ಹುನಗುಂದ, ಹರಗನಳ್ಳಿ, ಭದ್ರಾಪುರ, ಶ್ಯಾನವಳ್ಳಿ, ಇಂದೂರು, ಗಣೇಶಪುರ, ಚಿಗಳ್ಳಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಇನ್ನು ಮುಂಡಗೋಡ ಪಟ್ಟಣ ಹಾಗೂ ಸನವಳ್ಳಿ ಗ್ರಾಮದಲ್ಲಿ ತಲಾ ಎರಡು ಮನೆಗಳು ಜಖಂಗೊಂಡಿವೆ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಇನ್ನು ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳು ಶೀಘ್ರವೇ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನಲ್ಲಿಂದು ಕೊರೋನಾ ಖೇಲ್ ಖತಂ..! ಶೂನ್ಯವಾಯ್ತು ಸೋಂಕಿತರ ಸಂಖ್ಯೆ..!
ಮುಂಡಗೋಡ:ತಾಲೂಕಿನ ಮಟ್ಟಿಗೆ ಇದು ಸಂತಸದ ಸುದ್ದಿ. ತಾಲೂಕಿನಲ್ಲಿ ಇಂದು ಹೊಸತಾಗಿ ಯಾವುದೇ ಕೊರೋನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿಲ್ಲ. ಸದ್ಯ ತಾಲೂಕಿನಲ್ಲಿ ಒಟ್ಟೂ 105 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 41 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 21 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ದುರಂತದ ಸಂಗತಿಯೆಂದ್ರೆ, ಇಂದು ತಾಲೂಕಿನಲ್ಲಿ ಒಟ್ಟು 2 ಜನ ಸೋಂಕಿತರು ಮೃತ ಪಟ್ಟಿದ್ದಾರೆ. ಟಿಬೇಟಿಯನ್ ಕಾಲೋನಿಯ 80 ವರ್ಷದ ಓರ್ವರು, ಹಾಗೂ ಮುಂಡಗೋಡ ಹಳೂರು ಓಣಿಯ 65 ವರ್ಷದ ಓರ್ವರು ಮೃತಪಟ್ಟಿದ್ದಾರೆ ಅಂತಾ ಮುಂಡಗೋಡ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.
ರಸ್ತೆಯ ಮದ್ಯೆ ಕಾಮಗಾರಿಯ ಗುಂಡಿ: ಆ ಗ್ರಾಮಗಳಿಗೆ ತೆರಳಬೇಕೆಂದ್ರೆ ಕಷ್ಟ ಕಷ್ಟ..!! ಎಲ್ಲದು..?
ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯಲ್ಲಿ ಅದ್ವಾನ ಶುರುವಾಗಿದೆ. ಚೌಡಳ್ಳಿ, ಕ್ಯಾಸನಕೇರಿ, ಮಲವಳ್ಳಿ, ಲಕ್ಕೊಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಅಧಿಕಾರಿಗಳ ನಿರ್ಲಕ್ಷದಿಂದ ಮಳೆಗಾಲದಲ್ಲಿ ಎದ್ದು ಬಿದ್ದು ಹೋಗುವ ಸ್ಥಿತಿಗೆ ತಂದಿಟ್ಟಿದೆ. ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿದೆ. ಪೈಪ್ ಲೈನ್ ಕಾಮಗಾರಿ ಎಫೆಕ್ಟ್..! ಆದ್ರೆ ಹಾಗೆ ಗುಂಡಿ ತೋಡಿ, ಪೈಪುಗಳನ್ನು ಮುಚ್ಚಿದ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚಿಯೇ ಇಲ್ಲ. ಹೀಗಾಗಿ, ಸದ್ಯ ಮಳೆ ಬಂದಿರೋ ಕಾರಣಕ್ಕೆ ಗುಂಡಿಗೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕುಸಿದಿದೆ. ಪರಿಣಾಮ ರಸ್ತೆಯಲ್ಲಿ ವಾಹನಗಳಿರಲಿ, ಜನರೂ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸ್ತಿದಾರೆ. MLC ಗೂ ತಟ್ಟಿದ ಬಿಸಿ..! ಅಂದಹಾಗೆ, ಇವತ್ತು ಬೆಳಿಗ್ಗೆ ಇದೇ ಮಾರ್ಗದಲ್ಲಿ ಸಂಚರಿಸ್ತಿದ್ದ MLC ಶಾಂತಾರಾಮ್...
ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ತತ್ತರ: ಆಗಿರೋ ಅವಾಂತರಗಳೆಷ್ಟು..?
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಭಾರೀ ಗಾಳಿ ಮಳೆಗೆ ಮಲೆನಾಡು ಭಾಗ ಸಂಪೂರ್ಣ ತತ್ತರಿಸಿದೆ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಲ್ಲೇಲ್ಲಿ..? ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿ, ಮುಂಡಗೋಡ ಭಾಗಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಕಳೆದ 3 ದಿನಗಳಲ್ಲಿ ಸಿದ್ದಾಪುರ ತಾಲೂಕು ಒಂದರಲ್ಲೇ ಸುಮಾರು 375 ಮಿಲಿಮಿಟರ್ ಮಳೆ ದಾಖಲಾಗಿದೆ. ಅದ್ರಲ್ಲೂ ನಿನ್ನೆ ರಾತ್ರಿಯಿಂದ ಸಿದ್ದಾಪುರದಲ್ಲಿ 142.4 ಮಿಲಿಮಿಟರ್ ಮಳೆ ದಾಖಲಾಗಿದೆ. ಧರೆಗುರುಳಿದ ವಿದ್ಯುತ್ ಕಂಬಗಳು..! ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮುಂದುವರೆದ ಭಾರೀ ಮಳೆ ಗಾಳಿಯ ಪರಿಣಾಮವಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಗಾಳಿ ಮಳೆಯ ಅಬ್ಬರಕ್ಕೆ ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೀಗಾಗಿ, ಬಹುತೇಕ ಕಡೆ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಕೆರೆಯಂತಾಗಿವೆ ಗದ್ದೆಗಳು..! ಇನ್ನು ಭಾರೀ ಮಳೆಯ ಕಾರಣಕ್ಕೆ ಜಿಲ್ಲೆಯ ಮುಂಡಗೋಡ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ ಭಾಗಗಳಲ್ಲಿ ಅನ್ನದಾತನಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಈಗಷ್ಟೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದ...
ಮುಂಡಗೋಡ ತಾಲೂಕಿನಲ್ಲಿ ಮಳೆರಾಯನ ಅರ್ಭಟ: ಮನೆ ಮೇಲ್ಚಾವಣಿ ಕುಸಿದು ಟ್ರಾಕ್ಟರ್ ಜಖಂ..!
ಮುಂಡಗೋಡ: ತಾಲೂಕಿನಾಧ್ಯಂತ ಮಳೆರಾಯನ ಅರ್ಭಟ ಜೋರಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಇನ್ನು, ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಸನವಳ್ಳಿ ಗ್ರಾಮದಲ್ಲಿ ಅವಘಡ ಸಂಭವಿಸಿದೆ. ಮನೆಯ ಮುಂದೆ ಶೆಡ್ ನಲ್ಲಿ ನಿಂತಿದ್ದ ಟ್ರಾಕ್ಟರ್ ಮೇಲೆ ಮನೆಯ ಮೇಲ್ಚಾವಣಿ ಕಿಸಿದು ಬಿದ್ದಿದೆ. ಪರಿಣಾಮ ಟ್ರಾಕ್ಟರ್ ಮೇಲ್ಭಾಗ ಸಂಪೂರ್ಣ ಜಖಂ ಗೊಂಡಿದೆ. ಸನವಳ್ಳಿಯ ಶಿವಾನಂದ್ ನಾಗಪ್ಪ ಕೇರಿಹೊಲದವರ ಎಂಬುವರಿಗೆ ಸೇರಿದ ಟ್ರಾಕ್ಟರ್ ಇದಾಗಿದ್ದು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಬಂದು ಸ್ಥಳ ಪರಿಶೀಲನೆ ಕೈಗೊಂಡಿದ್ದಾರೆ. ಸೂಕ್ತ ಪರಿಹಾರದ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಲಾರಿಗೆ ಕ್ಯಾಂಟರ್ ಡಿಕ್ಕಿ: ಲಾರಿಯಡಿ ಕಾಲು ಸಿಲುಕಿ ನರಳಾಡಿದ ಚಾಲಕನ ಸ್ಥಿತಿ ಕರುಣಾಜನಕ..!
ಹಾವೇರಿ: ನಗರದ ಹೊರವಲಯದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಅಪಘಾತವಾದ ಲಾರಿಯಲ್ಲಿ ಚಾಲಕ ಸಿಲುಕಿಕೊಂಡು ಒಂ ದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಹೌದು,ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಎಡಗಾಲು ಸಂಪೂರ್ಣ ನುಜ್ಜು ಗುಜ್ಜಾಗಿದ್ದ ಲಾರಿಯಡಿಯೇ ಸಿಲುಕಿಕೊಂಡಿದೆ. ಹೀಗಾಗಿ ಚಾಲಕ ನೋವಿನಿಂದ ಚೀರಾಡಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಈ ವೇಳೆ ಹಾವೇರಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಚಾಲಕನ್ನು ರಕ್ಷಿಸಿದ್ದಾರೆ. ಲಾರಿಯಿಂದ ಹೊರತೆಗೆದಾಗ ಚಾಲಕ ನೋವಿನಿಂದ ನರಳಾಡಿದ್ದಾನೆ. ತಕ್ಷಣವೇ ಗಾಯಗೊಂಡಿರೋ ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಎರಡು ವಾಹನಗಳು ಹುಬ್ಬಳಿಯಿಂದ ಬೆಂಗಳೂರು ಕಡೆ ಹೊರಟಾಗ ಅಪಘಾತವಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೆ ಘಟನೆಗೆ ಕಾರಣ ಎನ್ನಲಾಗಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ನಾನೇ: ಚಂದ್ರಕಾಂತ್ ಬೆಲ್ಲದ್ ಸ್ಪೋಟಕ ನುಡಿ..!
ಧಾರವಾಡ: ಯಡಿಯೂರಪ್ಪರನ್ನ ಸಿಎಂ ಮಾಡಿದ್ದು ನಾನೇ ಅಂತಾ ಧಾರವಾಡದಲ್ಲಿ ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರೋ ಅವ್ರು, ಬಿಎಸ್ವೈ ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ, ಅದರ ಮೂಲಕ ನ್ಯಾಯಯುತವಾಗಿ ನಡೆದುಕೊಳ್ಳಲಿ, ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕು, ಪಕ್ಷ ಹೇಳಿದ್ದನ್ನು ಕೇಳಿಕೊಂಡು ಹೋಗಬೇಕು ಅಂತಾ ಎಚ್ಚರಿಸಿದ್ದಾರೆ. ನಾನು ಬಿಜೆಪಿಗೆ ಬಂದಾಗ ಬಿಎಸ್ವೈ ಒಬ್ಬರೇ ಶಾಸಕರಿದ್ದರು, ಹೀಗಾಗಿ, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ನಾನೇ ಕಾರಣ, ಬಿಎಸ್ವೈರನ್ನು ಸಿಎಂ ಮಾಡಿದ್ದೂ ಕೂಡ ನಾನೇ, ಇದು ಪಕ್ಷದ ಎಲ್ಲರಿಗೂ ಗೊತ್ತು, ರಾಜ್ಯದ ಎಲ್ಲ ನಾಯಕರಿಗೂ ಗೊತ್ತಿದೆ. ಬಿಜೆಪಿ ಬೆಳೆಸಿದ್ದು ಕೂಡ ನಾನೇ ಅಂತಾ ನಾಯಕರಿಗೆ ಗೊತ್ತಿದೆ ಅಂತಾ ಬೆಲ್ಲದ್ ತಿಳಿಸಿದ್ರು. ಇನ್ನು, 1991 ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ ಆಗ ಧಾರವಾಡ ಕ್ಷೇತ್ರದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲಿಲ್ಲ, ಆಗ ಕಾಂಗ್ರೆಸ್ ವಿರುದ್ಧ 20 ಸಾವಿರ ಮತದಿಂದ ಸೋತಿದ್ದೆ ಆಗ ಕಾರ್ಯಕರ್ತರೂ ಇರಲಿಲ್ಲ ಅದು ಕೂಡ ವೈಯಕ್ತಿಕ ವ್ಯಕ್ತಿತ್ವದಿಂದ ನಾನು ಮತ...