Crime News Belagavi:
ಬೆಳಗಾವಿಯಲ್ಲಿ ಮಲತಂದೆಯಿಂದ ಮೂರು ವರ್ಷದ ಕಂದಮ್ಮನ ಬರ್ಬರ ಹತ್ಯೆ. ಕಟ್ಟಿಗೆಯಿಂದ ಹೊಡೆದು ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ ಪಾಪಿಗಳು.

ಎರಡನೇ ಮದುವೆಯಾಗಿ ಬಿಹಾರ್ ದಿಂದ ಕೆಲಸಕ್ಕೆಂದು ಬಂದಿದ್ದ ಮಹಿಳೆಯೊಬ್ಬಳು, ತನ್ನೊಟ್ಟಿಗೆ ಮೂರು ವರ್ಷದ ಮಗ ಕಾರ್ತಿಕ್ ನನ್ನ ಕರೆದುಕೊಂಡು ಬಂದಿದ್ದಳು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಬಳಿ ಹತ್ತಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಮತ್ತು ಎರಡನೇ ಗಂಡ, ಕುಡಿದು ಬಂದು ಹೆಂಡತಿ ಜೊತೆಗೆ ಜಗಳ ಮಾಡಿದ್ದ ಮಹೇಶ್ವರ್ ಮಾಂಜಿ. ಮಗನನ್ನ ಯಾಕೆ ಕರೆದುಕೊಂಡು ಬಂದೀಯಾ ಅಂತಾ ಜಗಳ ಮಾಡಿದ್ದ.

ಇದನ್ನೂ ಓದಿ: ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!‌

ಈತನೊಟ್ಟಿಗೆ ಮೂರು ಜನ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ, ಈ ವೇಳೆ ಮಗನನ್ನ ಬಿಟ್ಟು ಓಡಿ ಹೋದ ತಾಯಿ, ಬಳಿಕ ಅಲ್ಲೇ ಇದ್ದ ಕಾರ್ತಿಕ್ ಮೇಲೆ ರಾಕ್ಷಸಿಯ ವರ್ತನೆ ತೋರಿದ ಪಾಪಿಗಳು‌. ತಲೆಗೆ ಕಟ್ಟಿಗೆಯಿಂದ ಹೊಡೆದು ಬಳಿಕ ಅದೇ ಕಟ್ಟಿಗೆಗೆ ಬೆಂಕಿ ಹಚ್ಚಿ ಎಲ್ಲೆಂದರಲ್ಲಿ ಸುಟ್ಟು ಅಟ್ಟಹಾಸ. ಕಾರ್ತಿಕ್ ಮುಕೇಶ್ ಮಾಂಜಿ (3)ಎಂಬ ಪುಟ್ಟ ಕಂದನನ್ನ ಬರ್ಬರ ಹತ್ಯೆ ಮಾಡಿದ ಪಾಪಿಗಳು.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೋವಿಡ್‌ ಆತಂಕ : ರಾಜ್ಯದಲ್ಲಿ 38 ಕೇಸ್‌, ಬೆಂಗಳೂರಲ್ಲೇ 32 ಸೋಂಕಿತರು..!

ವಾಪಾಸ್ ಮನೆಗೆ ತಾಯಿ ಬಂದಾಗ ಘಟನೆ ಬೆಳಕಿಗೆ‌ ಬಂದಿದೆ. ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಹಾರ ಮೂಲದ ನಾಲ್ಕು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

error: Content is protected !!