IPL RCB vs LSG Match: ಐಪಿಎಲ್ 18ನೇ ಆವೃತ್ತಿಯಲ್ಲಿ ಈಗಾಗಲೇ ನಾಲ್ಕು ತಂಡಗಳು ಪ್ಲೇಆಫ್ಗೆ ಎಂಟ್ರಿ ಪಡೆದಿರುವುದು ಗೊತ್ತೇ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಎರಡು ಲೀಗ್ ಪಂದ್ಯಗಳು ಬಾಕಿ ಇರುವಾಗಲೇ ಪ್ಲೇಆಫ್ಗೆ ಎಂಟ್ರಿ ಪಡೆದುಕೊಂಡಿತ್ತು. ಸದ್ಯ ಇನ್ನೊಂದು ಲೀಗ್ ಪಂದ್ಯ ಬಾಕಿ ಇದೆ. ಇದರ ನಡುವೆಯೇ ತಂಡಕ್ಕೆ ಶುಭ ಸುದ್ದಿ ಸಿಕ್ಕಿದೆ.
ಕಳೆದ ಎರಡು ದಿನಗಳ ಹಿಂದೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಹಿಂದಿನ ಪಂದ್ಯದಲ್ಲಿ ಸೋಲನ್ನು ಕಂಡಿದ್ದ ಬೆಂಗಳೂರು ತಂಡ ಕೊನೆಯ ಪಂದ್ಯದಲ್ಲಿ ಮೇ27ರಂದು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ವಿರುದ್ಧ ಸೆಣಸಲಿದೆ. ಏತನ್ಮಧ್ಯೆ ಈ ಪಂದ್ಯದಲ್ಲಿ ಬೆಂಗಳೂರು ತಂಡ ಉತ್ತಮ ರನ್ ರೇಟ್ನೊಂದಿಗೆ ಗೆಲುವು ಸಾಧಿಸಿದರೇ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯಬಹುದಾಗಿದೆ.
ಇದರೊಂದಿಗೆ ಪ್ಲೇಆಫ್ ಪಂದ್ಯದಲ್ಲಿ ಗೆಲುವು ಸಾಧಿಸಿದರೇ ನೇರವಾಗಿ ಫೈನಲ್ಗೆ ತಲುಪಲಿದೆ. ಒಂದು ವೇಳೆ ಸೋತರು ಎಲಿಮಿನೇಟರ್ ಪಂದ್ಯ ಆಡುವ ಮತ್ತೊಂದು ಅವಕಾಶ ಇರಲಿದೆ.
ಇದಕ್ಕಾಗಿ ತಂಡದ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ. ಏತನ್ಮಧ್ಯೆ, ಆರ್‌ಸಿಬಿ ತಂಡಕ್ಕೆ ಗುಡ್ನ್ಯೂಸ್ ದೊರೆತಿದ್ದು ಫ್ಯಾನ್ಸ್ಗಳ ದೊಡ್ಡ ಆತಂಕ ದೂರವಾಗಿದೆ. ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದಿಂದ ಒಂದು ವಾರ ಐಪಿಎಲ್ ಮುಂದೂಡಲ್ಪಟ್ಟ ನಂತರ, ತಂಡದ ಸ್ಟಾರ್ ಬೌಲರ್ ಹ್ಯಾಜೆಲ್ವುಡ್ ಉಳಿದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬ ಆರಂಭಿಕ ವರದಿಗಳು ಬಂದಿದ್ದವು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ WTC ಫೈನಲ್ ಪಂದ್ಯವೂ ಹೊಸ್ತಿಲ್ಲಲಿರುವುದರಿಂದ ಹ್ಯಾಜಲ್‌ವುಡ್ ಮುಂದಿನ ಪಂದ್ಯಗಳಲ್ಲಿಗೆ ಆರ್‌ಸಿಬಿ ಪರ ಆಡುವುದು ಅನುಮಾನ ಎಂದು ಭಾವಿಸಲಾಗಿತ್ತು. ಇದೀಗ RCB ಕೊನೆಯ ಲೀಗ್ ಪಂದ್ಯಕ್ಕೂ ಮೊದಲೇ ಕ್ಯಾಂಪ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಬೈಲಹೊಂಗಲದಲ್ಲಿ 3 ವರ್ಷದ ಪುಟ್ಟ ಕಂದಮ್ಮನನ್ನ ಮಲತಂದೆಯೇ ಮುಗಿಸಿಬಿಟ್ಟ..!
ಈ ಬಗ್ಗೆ ಆರ್‌ಸಿಬಿ ಅಧಿಕೃತವಾಗಿ ಘೋಷಿಸಿದೆ. ಸದ್ಯ ಈ ಋತುವಿನಲ್ಲಿ ಹ್ಯಾಜಲ್‌ವುಡ್ 10 ಪಂದ್ಯಗಳನ್ನು ಆಡಿದ್ದು ಈ ಅವಧಿಯಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಇವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಹ್ಯಾಜಲ್‌ವುಡ್ ಕೊರತೆ ಕಾಡಿದ್ದು ಇದೀಗ ಉಳಿದ ಪಂದ್ಯಗಳಲ್ಲಿ ಲಭ್ಯವಾಗಿರುವುದು ಆರ್‌ಸಿಬಿ ಬೌಲಿಂಗ್ ಪಡೆಗೆ ದೊಡ್ಡ ಬಲ ಬಂದಂತಾಗಿದೆ.
ಮಾಹಿತಿ ಹಂಚಿಕೊಂಡ ಆರ್‌ಸಿಬಿ: ಹ್ಯಾಜಲ್‌ವುಡ್ ಭಾರತಕ್ಕೆ ಆಗಮಿಸದ ಬೆನ್ನಲ್ಲೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್‌ಸಿಬಿ ಕನ್ನಡ ಸೇರಿ ಆರು ಭಾಷೆಗಳಲ್ಲಿ ಹ್ಯಾಜಲ್‌ವುಡ್ ಬಂದಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಶೇರ್ ಮಾಡಿದೆ.