ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!

Economy News: ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಮೇಲೇರಿದೆ. ಭಾರತ ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ.ದೇಶದ ಜಿಡಿಪಿ $4 ಟ್ರಿಲಿಯನ್ ಗಡಿಯನ್ನು ತಲುಪಿದೆ, ಈಗ ಭಾರತವು ಅಮೆರಿಕ, ಚೀನಾ ಮತ್ತು ಜರ್ಮನಿಗಿಂತ ಹಿಂದಿದೆ.

ನೀತಿ ಚಿಂತಕರ ಚಾವಡಿಯ 10 ನೇ ಆಡಳಿತ ಮಂಡಳಿ ಸಭೆಯ ನಂತರ ಮಾತನಾಡಿದ ಸುಬ್ರಹ್ಮಣ್ಯಂ, ದೇಶೀಯ ಸುಧಾರಣೆಗಳ ಸಂಯೋಜನೆ ಮತ್ತು ಭಾರತದ ಪರವಾಗಿ ಹೆಚ್ಚು ಹೆಚ್ಚು ಒಲವು ತೋರುತ್ತಿರುವ ಜಾಗತಿಕ ವಾತಾವರಣವೇ ಈ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.

“ನಾವು ಈಗ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಾವು $4 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಿದ್ದೇವೆ” ಎಂದು ಅವರು ವರದಿಗಾರರಿಗೆ ತಿಳಿಸಿದರು. “ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ ನಮ್ಮ ಮುಂದಿವೆ. ನಾವು ನಮ್ಮ ಹಾದಿಯಲ್ಲಿಯೇ ಮುಂದುವರಿದರೆ, ನಾವು ಕೇವಲ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು” ಎಂದು ಹೇಳಿದರು.

ಭಾರತವು ಪ್ರಮುಖ ಪರ್ಯಾಯ ಉತ್ಪಾದನಾ ಕೇಂದ್ರವಾಗಿ ತನ್ನನ್ನು ತಾನುಸ್ಥಾಪಿಸಿಕೊಳ್ಳುತ್ತಿರುವುದರ ಮಧ್ಯೆ ಈ ಮೈಲಿಗಲ್ಲು ಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಭಾರತದಂತಹ ದೇಶಗಳಲ್ಲಿ ತಯಾರಿಸುವ ಬದಲು ದೇಶೀಯವಾಗಿ ತಯಾರಿಸಬೇಕು ಎಂದು ಹೇಳಿದ್ದಕ್ಕೆ ಸುಬ್ರಹ್ಮಣ್ಯಂ ಪ್ರತಿಕ್ರಿಯಿಸಿದರು.

“ಭವಿಷ್ಯದ ಅಮೆರಿಕದ ಸುಂಕಗಳ ನಿರ್ದಿಷ್ಟತೆಗಳು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು, “ಆದರೆ ಪರಿಸ್ಥಿತಿಯ ಚಲನಶೀಲತೆಯನ್ನು ಗಮನಿಸಿದರೆ, ಉತ್ಪನ್ನ ತಯಾರಿಸಲು ಭಾರತವು ಅಗ್ಗದ ಸ್ಥಳವಾಗಿದೆ. ವೆಚ್ಚ ಕಡಿಮೆಯ ಸ್ಪರ್ಧಾತ್ಮಕ ಉತ್ಪಾದನಾ ನೆಲೆಯನ್ನು ನೀಡುವುದನ್ನು ಭಾರತವು ಮುಂದುವರಿಸುತ್ತದೆ ಎಂದು ಹೇಳಿದರು.

error: Content is protected !!