ಮುಂಡಗೋಡ: ಪಟ್ಟಣದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಮನವಿ ಅರ್ಪಿಸಲಾಯಿತು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿರೋ ಅಭಿಮಾನಿ ಬಳಗ ಹಿಂದಿ ದಿವಸ್ ಆಚರಣೆ ಬೇಡ ಅಂತಾ ಆಗ್ರಹಿಸಿದ್ದಾರೆ. ಕನ್ನಡ ಒಕ್ಕೂಟ ವ್ಯವಸ್ಥೆ ಮಾರಕವಾಗಿರುವ ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆಯನ್ನು ಸ್ಥಗಿತಗೊಳಿಸಬೇಕು, ಒಕ್ಕೂಟ ಭಾರತ ಸಂವಿಧಾನದಲ್ಲಿ 22 ಭಾಷೆಗಳಿಗೂ ಸರಿ ಸಮಾನತೆಯಿದೆ. ಹೀಗಾಗಿ, ಹಿಂದಿ ಭಾಷೆಗೆ ಅಷ್ಟೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ನಮ್ಮ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಹಿಂದಿ ದಿವಸ್ ಆಚರಣೆ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ ಹೀಗಾಗಿ, ಹಿಂದಿ ದಿವಸ್ ಆಚರಣೆ ಬೇಡವೇ ಬೇಡ ಅಂತಾ ಹಕ್ಕೊತ್ತಾಯ ಮಾಡಿದ್ದಾರೆ. ಈ ವೇಳೆ ಬಳಗದ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ, ಮೈಲಾರಿ ಕುರುಬರ,ಬಸವರಾಜ್ ಬೋವಿ, ಮಂಜುನಾಥ್ ಕೋಣನಕೇರಿ, ಗಣಪತಿ ಗುಡ್ಡಿಕೇರಿ, ಶಿವು ಲಮಾಣಿ, ಕೈಲಾಶ್ ಗಜಕೋಶ, ಬಸವರಾಜ್ ಮೂಲಿಮನಿ, ಶೆಟ್ಟಪ್ಪ ಬೋವಿ, ಗಣಪತಿ ಬಾಳಂಬೀಡ, ಮಾಂತೇಶ್ ವಾಲ್ಮೀಕಿ...
Top Stories
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!
ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನ ಭೀಕರ ಹತ್ಯೆ| ಮನೆಯ ಬಳಿಯೇ ಕೊಚ್ಚಿ ಕೊಚ್ಚಿ ಕೊಂದ್ರು ಹಂತಕರು..!!
ನಾಲ್ಕೂವರೇ ದಶಕಗಳಿಂದ ಎಣ್ಣೆಇಲ್ಲದೇ ಉರಿಯುತ್ತಿದ್ದ ಚಿಗಳ್ಳಿಯ ದೀಪಗಳು ಆರಿ ಹೋದ್ವಾ..?
NMD ಜಮೀರ್ ಅಹ್ಮದ್ ಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಮುಂಡಗೋಡ ಕೋರ್ಟ್..!
NMD ಜಮೀರ್ ಕೋರ್ಟಿಗೆ ಶರಣು..! ಎಸ್ಪಿ ನಾರಾಯಣ್ ರ “ಗುರಿ” ಗೆ ಥರಗುಟ್ಟಿದ ಮುಂಡಗೋಡ ಮೀಟರ್ ಬಡ್ಡಿ ಮಾಫಿಯಾ..!
ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳು, ಬಾಲ ಬಿಚ್ಚಿದ್ರೆ ಸುಮ್ಮನಿರಲ್ಲ,, ರೌಡಿಗಳನ್ನು ಸಾಲ ವಸೂಲಿಗೆ ಬಳಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಡೀಸಿ, ಎಸ್ಪಿ ಜಂಟೀ ವಾರ್ನಿಂಗ್
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ, ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ, ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!
ಮುಂಡಗೋಡಿನಲ್ಲಿ ರಾತ್ರಿ ನಡೀತು ಕಂಡೂ ಕೇಳರಿಯದ ಬಹುದೊಡ್ಡ ಪೊಲೀಸ್ ದಾಳಿ..!ಮೀಟರ್ ಬಡ್ಡಿ ಕುಳಗಳೇ ಪೊಲೀಸರ ಟಾರ್ಗೆಟ್..? ಅಷ್ಟಕ್ಕೂ ಈ ದಾಳಿ ವಿಫಲವಾಯ್ತಾ..?
ಮುಂಡಗೋಡಲ್ಲಿ ಹಾಡಹಗಲೇ ನಡೆದಿದ್ದ ಮನೆಗಳ್ಳತನ ಕೇಸ್ ಬೇಧಿಸಿದ ಪೊಲೀಸ್ರು..! ಇಬ್ಬರು ಲೋಕಲ್ ಆರೋಪಿಗಳ ಬಂಧನ..!
ಮುಂಡಗೋಡ ಖ್ಯಾತ ಸ್ಪರ್ಧಾ ಹೋರಿ ಇಂದೂರು ಹೊಯ್ಸಳ ಅಸ್ತಂಗತ..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!
ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!
ಕರ್ನಾಟಕದಲ್ಲಿ “ಹಿಂದಿ ದಿವಸ್” ಆಚರಣೆ ಬೇಡವೇ ಬೇಡ, ಸರ್ಕಾರಕ್ಕೆ ಮುಂಡಗೋಡ ರಾಯಣ್ಣ ಬಳಗದಿಂದ ಹಕ್ಕೊತ್ತಾಯ..!
ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!
ಹುಬ್ಬಳ್ಳಿ: ವರೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟವರು. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಾಗಿದೆ. ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ರಾತ್ರಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸೊಹೇಲ್ ಸ್ಥಳದಲ್ಲೆ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಚಾಲಕ ಮತ್ತು ಮಹಿಳೆ ಕಿಮ್ಸ್ ಗೆ ದಾಖಿಲಿಸಿದ ಸ್ವಲ್ಪ ಸಮಯದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡ-ಯಲ್ಲಾಪುರ ರಸ್ತೆಯಲ್ಲಿ ಕ್ರೂಸರ್ ವಾಹನ ಪಲ್ಟಿ, ಜಾನಪದ ಕಲಾವಿದರಿಗೆ ಗಾಯ..!
ಮುಂಡಗೋಡ ಯಲ್ಲಾಪುರ ಗಡಿಭಾಗದ ಹುಣಶೆಟ್ಟಿಕೊಪ್ಪದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿದೆ. ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಇನ್ನು, ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತಿದ್ದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಿಗಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಯಲ್ಲಾಪುರದಿಂದ ಜಾನಪದ ಕಲಾವಿದರನ್ನು ಕರೆತರುತ್ತಿದ್ದ ವಾಹನ ಅಪಘಾತಕ್ಕೆ ಈಡಾಗಿದೆ. 7-8 ಜನ ಜಾನಪದ ಕಲಾವಿದರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಹುಣಶೆಟ್ಟಿಕೊಪ್ಪದ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದ್ದ ಕ್ರೂಸರ್ ಅನ್ನು ಅಲ್ಲಿನ ಸ್ಥಳೀಯರ ಸಹಾಯದಿಂದ ರಸ್ತೆಯಿಂದ ತೆರವುಗೊಳಿಸಲಾಗಿದೆ.
ಪಾಳಾ ಕಲಕೊಪ್ಪದಲ್ಲಿ ನಾಯಿ ದಾಳಿಗೆ ಬಲಿಯಾಗುತ್ತಿದ್ದ ಜಿಂಕೆ ರಕ್ಷಣೆ, ಮಾನವೀಯತೆ ತೋರಿದ ಗ್ರಾಮಸ್ಥರು..!
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಕಲಕೊಪ್ಪದ ಪೆಟ್ರೋಲ್ ಬಂಕ್ ಸಮೀಪ ನಾಯಿಗಳ ದಾಳಿಯಿಂದ ಜಿಂಕೆಯನ್ನ ರಕ್ಷಣೆ ಮಾಡಲಾಗಿದೆ. ಈ ಮೂಲಕ ಗ್ರಾಮಸ್ಥರು ಮಾನವೀಯತೆ ತೋರಿದ್ದಾರೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯನ್ನು, ಗ್ರಾಮದ ನಾಯಿಗಳು ಅಟ್ಟಿಸಿಕೊಂಡು ಹೋಗುತಿದ್ದವು, ಅದನ್ನು ಕಂಡ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ಬಚಾವ್ ಮಾಡಿದ್ದಾರೆ. ನಂತರ ಅರಣ್ಯ ರಕ್ಷಕ ನಾರಾಯಣ ಒಣಿಕೇರಿ, ಯಲ್ಲಪ್ಪ ಬಳ್ಳಾರಿ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮದ ಕುಮಾರ್, ಜಗದೀಶ್, ಅಶೋಕ್ ಮುಂತಾದವರು ಸೇರಿ ಜಿಂಕೆಯನ್ನು ರಕ್ಷಿಸಿ ನಾಯಿಗಳ ದಾಳಿಯಿಂದ ಗಾಯಗೊಂಡ ಜಿಂಕೆಗೆ ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ರಾತ್ರೋ ರಾತ್ರಿ ಎಂಟ್ರಿ ಕೊಟ್ರಾ ಪ್ರಧಾನಿ ಮೋದಿ..?
ಕುಮಟಾ: ಅಲ್ಲಿ ಎಲ್ಲಿ ನೋಡಿದರಲ್ಲಿ ಕೇಕೆ, ಚಪ್ಪಾಳೆ, ಜಯಘೋಷಗಳು..! ಮೋದಿ, ಮೋದಿ, ಮೋದಿ ಅನ್ನೋ ಅಭಿಮಾನದ ಹರ್ಷೋದ್ಘಾರ. ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಘೋಷಗಳ ಹೂಮಳೆ. ಇದು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ.. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ರಾತ್ರೊ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಪ್ರಧಾನಿ ಮೋದಿ..! ಅಷ್ಟಕ್ಕೂ ಇವ್ರು ಅಸಲೀ ಮೋದಿ ಅಂತಾ ಅನಕೊಂಡ್ರಾ..? ಖಂಡಿತ ಅಲ್ಲ. ಥೇಟು ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿ ಇವ್ರು. ಅಂದಹಾಗೆ, ಇವ್ರ ಹೆಸ್ರು ಸದಾನಂದ್ ನಾಯಕ್, ಮೂಲತಃ ಉಡುಪಿ ಜಿಲ್ಲೆಯವರು. ಥೇಟು ನರೇಂದ್ರ ಮೋದಯವರಂತೆ ಕಾಣುವ ಈ ಸದಾನಂದ ನಾಯಕರು ಕೈ ಬೀಸುತ್ತಿದ್ದಂತೆ ಜನಸ್ತೋಮ ನಿಬ್ಬೆರಗಾಗಿತ್ತು. ಮೋದಿಯವರೇ ಎದುರಿಗೆ ನಿಂತ ಭಾಸವಾಗಿತ್ತು. ಹೀಗಾಗಿ, ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು...
ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!
ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ, ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು 108 ಅಂಬ್ಯಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉತ್ತರ ಕನ್ನಡ ಡಿಸಿ ಹಾಗೂ ಎಸ್ಪಿಯವರಿಗೆ ಮಾನವ ಹಕ್ಕುಗಳ ಆಯೋಗದಿಂದ ಸಮನ್ಸ್ ಜಾರಿ..!
ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ದಿಂದ ಸಮನ್ಸ್ ಜಾರಿಯಾಗಿದೆ. ಹೊನ್ನಾವರದ ಕಾಸರಕೋಡು ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ದೌರ್ಜನ್ಯದ ಕುರಿತು ದಾಖಲಾದ ದೂರಿನನ್ವಯ ಸಮನ್ಸ್ ಜಾರಿಯಾಗಿದೆ. ಕಾಸರಕೋಡ ಖಾಸಗಿ ಬಂದರು ಕಾಮಗಾರಿ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ದಿನಾಂಕ 24/1/22 ರಂದು ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪ್ರತಿಭಟನಾ ನಿರತ ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹೀಗಾಗಿ, 6/05/22 ರಂದು ರಾಷ್ಟ್ರೀಯ ಮಾನವಹಕ್ಕು ಆಯೋಗದಲ್ಲಿ ಮೀನುಗಾರರು ದೂರು ದಾಖಲಿಸಿದ್ದರು. ಈ ಕಾರಣಕ್ಕಾಗಿ ಎಸ್ಪಿ ಹಾಗೂ ಡೀಸಿಯವರಿಗೆ ಸಮನ್ಸ್ ಜಾರಿಮಾಡಲಾಗಿದೆ
ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!
ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತವಾಗಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಗಾಯಾಳುವಿನ ಬಳಿಯಿದ್ದ 1450 ರೂ. ಹಾಗೂ ಮೊಬೈಲ್ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಹಾಗೂ ಚಾಲಕರು ಸಮಯಪ್ರಜ್ಞೆ ತೋರಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಲಿಹೊಂಡ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಕೊಲೆ ಮಾಡಿ ಬೀಸಾಕಿದ್ರಾ ದುರುಳರು..?
ಮುಂಡಗೋಡ ತಾಲೂಕಿನ ಹುಲಿಹೊಂಡದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ ಹಲವು ಅನುಮಾನ ಮೂಡಿಸಿದೆ. ಇಂದು ಬೆಳಿಗ್ಗೆ ಪತ್ತೆಯಾಗಿರೋ ಶವ ಆತಂಕಕ್ಕೆ ಕಾರಣವಾಗಿದೆ. ಕೊಂದು ಬೀಸಾಕಿದ್ರಾ..? ಅಸಲು, ಮೇಲ್ನೋಟಕ್ಕೆ ಇದು ಕೊಲೆಯೊ ಅಥವಾ ಬೇರಿನ್ನೇನೋ ಕಾರಣಕ್ಕೆ ನಡೆದಿರೋ ಘಟನೆಯೋ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರೋ ಶವದ ಮುಖ ವಿರೂಪಗೊಂಡಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾತೂರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಓರ್ವ ವಿದ್ಯಾರ್ಥಿಗೆ ಗಾಯ, ಲಘು ಲಾಠಿ ಚಾರ್ಜ್..!
ಮುಂಡಗೋಡ; ತಾಲೂಕಿನ ಕಾತೂರಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಾರಾಮಾರಿಯಾಗಿದೆ. ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಹೀಗಾಗಿ, ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಏನು..? ಇಂದು ಕಾತೂರು ಹೈಸ್ಕೂಲು ಮೈದಾನದಲ್ಲಿ ಪ್ರೌಢಶಾಲೆಗಳ ಕ್ರೀಡಾಕೂಟ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಮಳಗಿ ಪ್ರೌಢಶಾಲೆ ಹಾಗೂ ಕಾತೂರು ಪ್ರೌಡಶಾಲೆಯ ವಿದ್ಯಾರ್ಥಿಗಳ ಮದ್ಯೆ ಖೋಖೋ ಪಂದ್ಯ ಶುರುವಾಗಿತ್ತು. ಈ ವೇಳೆ ಅದ್ಯಾವನೋ ನಿರ್ಣಾಯಕ ಮಾಡಿದ ಯಡವಟ್ಟಿನಿಂದ, ಹುದ್ದರಿ ನಷ್ಟದ ತೀರ್ಪಿನಿಂದ ಒಂದು ಅಂಕ ಮಿಸ್ ಆಗಿದೆ ಅನ್ನೋ ಕಾರಣ ಇಟ್ಕೊಂಡು ಸಣ್ಣಗೆ ತಗಾದೆ ತೆಗೆದಿದ್ದಾರೆ ವಿದ್ಯಾರ್ಥಿಗಳು. ಹೀಗೆ ಶುರುವಾದ ಗಲಾಟೆ ವಿದ್ಯಾರ್ಥಿಗಳು ಹಾಗೂ ಅಲ್ಲಿ ನೆರೆದಿದ್ದ ಯುವಕರ ಮದ್ಯೆ ಭಾರೀ ಮಾರಾಮಾರಿಗೆ ಕಾರಣವಾಗಿದೆ. ಈ ಗಲಾಟೆಯಲ್ಲೇ ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟಾಗಿದೆ. ಲಘು ಲಾಠಿ ಪ್ರಹಾರ..! ಇನ್ನು ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಪೊಲೀಸರು ಗಲಾಟೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಅನಿವಾರ್ಯವಾಗಿ...