ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ ಹಣದಲ್ಲೂ ವ್ಯವಹಾರಕ್ಕಿಳಿದಿದ್ದಾರೆ ಅನ್ನೋದೇ ಬಹುದೊಡ್ಡ ದುರಂತ, ನಾಚಿಗ್ಗೇಡು..! ದಕ್ಷ ತಹಶೀಲ್ದಾರ್..! ಅಸಲು, ನಾವಿಲ್ಲಿ ಒಂದು ವಿಷಯ ತಮಗೇಲ್ಲ ಹೇಳಲೇ ಬೇಕಿದೆ. ಮುಂಡಗೋಡ ತಾಲೂಕಿಗೆ ತಹಶೀಲ್ದಾರ್ ಆಗಿ ಬಂದಿರೋ ಶಂಕರ್ ಗೌಡಿ ನಿಜಕ್ಕೂ ಅಪ್ಪಟ ದಕ್ಷ ಅಧಿಕಾರಿ, ಯಾವತ್ತೂ ತಮ್ಮ ಕಚೇರಿಯಲ್ಲಿ ಬ್ರಷ್ಟರಿಗೆ ಜಾಗವಿಲ್ಲ ಅಂತಾ ಖಡಾಖಂಡಿತ ಆಡಳಿತ ನಡೆಸ್ತಿರೋರು ಇವ್ರು. ಹೀಗಾಗಿನೇ ಇಡೀ ತಾಲೂಕಿನ ಜನ ನೂತನ ತಹಶೀಲ್ದಾರರ ಮೇಲೆ ಸಾಕಷ್ಟು ಭರವಸೆ,...
Top Stories
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!
ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನ ಭೀಕರ ಹತ್ಯೆ| ಮನೆಯ ಬಳಿಯೇ ಕೊಚ್ಚಿ ಕೊಚ್ಚಿ ಕೊಂದ್ರು ಹಂತಕರು..!!
ನಾಲ್ಕೂವರೇ ದಶಕಗಳಿಂದ ಎಣ್ಣೆಇಲ್ಲದೇ ಉರಿಯುತ್ತಿದ್ದ ಚಿಗಳ್ಳಿಯ ದೀಪಗಳು ಆರಿ ಹೋದ್ವಾ..?
NMD ಜಮೀರ್ ಅಹ್ಮದ್ ಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಮುಂಡಗೋಡ ಕೋರ್ಟ್..!
NMD ಜಮೀರ್ ಕೋರ್ಟಿಗೆ ಶರಣು..! ಎಸ್ಪಿ ನಾರಾಯಣ್ ರ “ಗುರಿ” ಗೆ ಥರಗುಟ್ಟಿದ ಮುಂಡಗೋಡ ಮೀಟರ್ ಬಡ್ಡಿ ಮಾಫಿಯಾ..!
ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳು, ಬಾಲ ಬಿಚ್ಚಿದ್ರೆ ಸುಮ್ಮನಿರಲ್ಲ,, ರೌಡಿಗಳನ್ನು ಸಾಲ ವಸೂಲಿಗೆ ಬಳಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಡೀಸಿ, ಎಸ್ಪಿ ಜಂಟೀ ವಾರ್ನಿಂಗ್
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ, ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ, ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!
ಮುಂಡಗೋಡಿನಲ್ಲಿ ರಾತ್ರಿ ನಡೀತು ಕಂಡೂ ಕೇಳರಿಯದ ಬಹುದೊಡ್ಡ ಪೊಲೀಸ್ ದಾಳಿ..!ಮೀಟರ್ ಬಡ್ಡಿ ಕುಳಗಳೇ ಪೊಲೀಸರ ಟಾರ್ಗೆಟ್..? ಅಷ್ಟಕ್ಕೂ ಈ ದಾಳಿ ವಿಫಲವಾಯ್ತಾ..?
ಮುಂಡಗೋಡಲ್ಲಿ ಹಾಡಹಗಲೇ ನಡೆದಿದ್ದ ಮನೆಗಳ್ಳತನ ಕೇಸ್ ಬೇಧಿಸಿದ ಪೊಲೀಸ್ರು..! ಇಬ್ಬರು ಲೋಕಲ್ ಆರೋಪಿಗಳ ಬಂಧನ..!
ಮುಂಡಗೋಡ ಖ್ಯಾತ ಸ್ಪರ್ಧಾ ಹೋರಿ ಇಂದೂರು ಹೊಯ್ಸಳ ಅಸ್ತಂಗತ..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!
ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!
ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು. ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ ಗೇಟು, ಸಣ್ಣ ಗೇಟುಗಳು, ಕಬ್ಬಿಣದ ಸಾದಾ ಬೀಮ್ ಗಳು, ಕಬ್ಬಿಣದ ಟ್ರೆಸ್‌ಗಳು, ತಯಾರಿಸುವ ಹಂತದಲ್ಲಿದ್ದ ದೂಡುವ ಗಾಡಿಗಳು, ಕಬ್ಬಿಣದ ಏಣಿಗಳು, ಕಬ್ಬಿಣದ ಲಾಡರಗಳು ಸೇರೊದಂತೆ ಇತರೇ ಕೆಲವು ಕಬ್ಬಿಣದ ಸಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವುಗಳ ಒಟ್ಟೂ ಮೌಲ್ಯ ಸುಮಾರು 1,30,000/- ಆಗಿದೆ ಅಂತಾ ಅಂದಾಜಿಸಲಾಗಿದ್ದು. ಠಾಣೆಗೆ ಸಲ್ಲಿಸಿರೋ ದೂರಿನಲ್ಲಿ ವಿವರಿಸಿದ್ದಾರೆ. ಮುಂಡಗೋಡ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಕಳ್ಳರ ಹೆಡೆಮುರಿ ಕಟ್ಟಲು ಬಲೆ...
ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಸೆ.20 ರಂದು ಶಿಗ್ಗಾವಿ ಸಿಎಂ ನಿವಾಸದ ಎದುರು ಹಕ್ಕೊತ್ತಾಯ- ಮೃತ್ಯುಂಜಯ ಶ್ರೀ ಘೋಷಣೆ..!
ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಹಕ್ಕೊತ್ತಾಯ ಹಿನ್ನಲೆಯಲ್ಲಿ, ಹಾವೇರಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದೆ ಸೆಪ್ಟೆಂಬರ್ 20 ರಂದು ಶಿಗ್ಗಾವಿಯ ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಶಿಗ್ಗಾವಿಯ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ, ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತದೆ. ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ. ಸದನದ ಒಳಗೆ, ಹೊರಗೆ..! ಇನ್ನು ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿಗಳಿಗೆ ಸಿಎಂ ದ್ರೋಹ..! ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಹೋರಾಟದ ಕಾಲ ಹರಣ ಮಾಡಿದ್ದಾರೆ. ಸಿಎಂ ಅವರು ಪದೇ...
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!
ಧಾರವಾಡ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆದಿದೆ. ನಮ್ಮ ಹುಡುಗಿಗೆ ಕಾಡಿಸುತ್ತೀರಾ, ಲೈಂಗಿಕ ದೌರ್ಜನ್ಯ ಎಸಗಿದ್ದಿರಾ ಅಂತಾ ಧಿಡೀರ್ ಜಗಳ ತೆಗೆದ ಮೂವರು ಆರೋಪಿಗಳು ಮನೋಜ್ ಕರ್ಜಗಿ ಹಾಗೂ ಅಯಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮನೋಜ್ ಗುಡದೂರ್, ಆನಂದ ತಳವಾರ್, ಹಾಗೂ ಉದಯ್ ಕೆಲಗೇರಿ ಎನ್ನುವ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಚಾಕುವಿನಿಂದ ಅಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಎನ್ನಲಾಗಿದ್ದು, ಸದ್ಯ ಹಲ್ಲೆಗೊಳಗಾದ ಅಯಾನ್ ಮತ್ತು ಮನೋಜ್ ಕರ್ಜಗಿ ಕಿಮ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಜ್ ಕರ್ಜಗಿ ಸ್ಪಾ ದಲ್ಲಿದ್ದ ಅಯಾನ್ ಎನ್ನುವ ಯುವಕನಿಂದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಮಹಿಳೆಯರ ಮಾರಾಟ ಜಾಲ ಸಕ್ರೀಯವಾಗಿದೆ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕಳವಳ..!
ಮುಂಡಗೋಡ: ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮಾರಾಟ ಜಾಲ ಸಕ್ರೀಯವಾಗಿದೆ. ನಾವು ಈ ಜಾಲವನ್ನು ಬೇಧಿಸಲು ಸಂಪೂರ್ಣ ಸನ್ನದ್ಧಗೊಳ್ಳುತ್ತೇವೆ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ ಅಂತಾ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ರು. ಮುಂಡಗೋಡಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಪ್ರಮೀಳಾ ನಾಯ್ಡು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರನ್ನು ಮದುವೆ ನೆಪದಲ್ಲಿ ದೂರದ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಮಾರಾಟ ಮಾಡುವ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ರಾಜ್ಯ ಮಹಿಳಾ ಆಯೋಗ ಈ ಕುರಿತು ಸಾಕಷ್ಟು ಜಾಗ್ರತಾ ಕ್ರಮಗಳನ್ನು ಈಗಾಗಲೇ ಪಡೆದುಕೊಂಡಿದೆ. ಪ್ರತೀ ಜಿಲ್ಲೆಗಳಲ್ಲೂ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮಕ್ಕಳು ಮತ್ತು ಮಹಿಳೆಯರ ಮಾರಾಟ ಮತ್ತು ನಾಪತ್ತೆ ಪ್ರಕರಣಗಳಲ್ಲಿ ಎಷ್ಟು ಬೇಗ ದೂರು ದಾಖಲಾಗತ್ತೋ ಅಷ್ಟು ಬೇಗ ಪತ್ತೆ ಕಾರ್ಯಕ್ಕೆ ಅನಕೂಲವಾಗತ್ತೆ. ಹೀಗಾಗಿ, ಅಂತಹ ಪ್ರಕರಣಗಳಲ್ಲಿ ಕೂಡಲೇ ಪೊಲೀಸ್ ಠಾಣೆಗಳಿಗೆ ದೂರು ನೀಡುವುದು ಮುಖ್ಯ ಅಂದ್ರು. ಪ್ರತೀ ಜಿಲ್ಲೆಗಳಲ್ಲೂ ಈ...
ಮುಂಡಗೋಡಿನಲ್ಲಿ ವಿಶ್ವಕರ್ಮ ಜಯಂತಿ ಸರಳ ಉತ್ಸವ..!
ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತ ಹಾಗೂ ಮುಂಡಗೋಡ ತಾಲೂಕ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮ ಭಗವಾನರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಇಲಾಖೆಯ ವತಿಯಿಂದ, ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ, ವಿಶ್ವಕರ್ಮ ಸಮಾಜದ ಶ್ರೀಮತಿ ರೇಣುಕಾ ಬಡಿಗೇರ, ಈಶ್ವರಪ್ಪ ಬಡಿಗೇರ ಇಂದೂರು, ಮೌನೇಶ ಬಡಿಗೇರ ಉಗ್ಗಿನಕೇರಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಇಓ ವೆಂಕಟೇಶ ಪಟಗಾರ “ಏಕಾಗ್ರತೆ ಹಾಗೂ ಒಗ್ಗಟ್ಟಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ”ಎಂದು ಸಮಾಜ ಬಾಂಧವರಿಗೆ ಕಿವಿಮಾತು ಹೇಳಿದರು. ರಾಮಣ್ಣ ಬೆಳ್ಳಾನವರ ಅವರು ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿವಿನಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ರಾಜಕೀಯವಾಗಿ ವಿಶ್ವಕರ್ಮರು ಸಬಲರಾಗಬೇಕು ಎಂದು ಕರೆ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಆರ್ ವಿ ಬಡಿಗೇರ್ ರಾಜಕೀಯ ಶಿಕ್ಷಣದಲ್ಲಿ ಮುಂದಿದ್ದರೆ ಮಾತ್ರ ವಿಶ್ವಕರ್ಮರು ಸಬಲರಾಗಬಲ್ಲರು ಎಂದು...
ಇಂದು “ನಮೋ ಜನ್ಮದಿನ” ಹಡಪದ ಸಮಾಜದಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ..!
ಮುಂಡಗೋಡ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಡಪದ ಅಪ್ಪಣ್ಣ ಸಮಾಜದಿಂದ ವಿಶೇಷವಾಗಿ ಮೋದಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನಪ್ರಜ್ಞಾ ಅಂಧಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಕ್ಷೌರ ಸೇವೆ ಸಲ್ಲಿಸಲಾಯಿತು. ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ನೇತೃತ್ವದಲ್ಲಿ ಸುಮಾರು 35 ಅಂಧ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು. ಕದಂಬ ಹೇರ್ ಡ್ರೆಸಸ್ ನ ಕ್ಷೌರಿಕ ಬಾಂಧವರು ಅಂಧ ಮಕ್ಕಳಿಗೆ ಬೆಳಿಗಿನಿಂದಲೇ ಕ್ಷೌರ ಮಾಡಿದ್ರು. ನಂತರ ಎಲ್ಲ ಮಕ್ಕಳಿಗೂ ಸ್ನಾನ ಮಾಡಿಸಲಾಯಿತು. ಹತ್ತಾರು ಹಡಪದ ಅಪ್ಪಣ್ಣ ಸಮಾಜದ ಯುವಕರು ಈ ಸೇವೆಯಲ್ಲಿ ಭಾಗಿಯಾಗಿದ್ರು. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಇಡೀ ವಿಶ್ವದ ಬೂಪಟದಲ್ಲಿ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ, ಮೋದಿಯವರ ಜನ್ಮ ದಿನ ನಮಗೇಲ್ಲ ಹಬ್ಬದ ಸಂಭ್ರಮವಾಗಿದೆ ಅಂತಾ ಹಡಪದ ಅಪ್ಪಣ್ಣ ಸಮಾಜದ ಮುಖಂಡ ಮಹೇಶ್ ಹಡಪದ ಖುಶಿ ಹಂಚಿಕೊಂಡರು. ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಚಂದ್ರು,...
ಅತ್ತಿವೇರಿಯ ವ್ಯಕ್ತಿ ಲಕ್ಣ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಅತ್ತಿವೇರಿಯ ವ್ಯಕ್ತಿಯೊಬ್ಬ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅತ್ತಿವೇರಿ ಗ್ರಾಮದ ನಬೀಸಾಬ್ ಮತ್ತಿಗಟ್ಟಿ(32) ಎಂಬುವ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ತನ್ನ ಪತ್ನಿಯ ತವರು ಮನೆಯಲ್ಲೇ ವಾಸವಾಗಿದ್ದ ನಬೀಸಾಬ್ ಹೀಗೆ ದಿಢಿರನೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನುಷ ಹಲ್ಲೆ, ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ “ಲೇಡಿ” ಯಾರು..?
ಮುಂಡಗೋಡ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಾನಸಿಕ ಅಸ್ವಸ್ಥಳೊಬ್ಬಳನ್ನು ಮಹಿಳೆಯೋರ್ವಳು ಮನಬಂದಂತೆ ಥಳಿಸಿದ್ದಾಳೆ. ಮನಸೋ ಇಚ್ಚೆ ಚಪ್ಪಲಿಯಿಂದ ನಡುರಸ್ತೆಯಲ್ಲೇ ಥಳಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಸ್ವಸ್ಥೆಯ ನರಳಾಟ..! ನಿಜ ಅಂದ್ರೆ, ಇದು ನಡೆದದ್ದು ಮುಂಡಗೋಡ ಪಟ್ಟಣದ ಪಟ್ಟಣ ಪಂಚಾಯತಿ ಎದುರಗಡೆ. ಮಾನಸಿಕ ಅಸ್ವಸ್ಥೆಯನ್ನು ಅಟ್ಟಾಡಿಸಿ ಹೊಡೆದಿರೋ ಮಹಿಳೆ ಥೇಟು ರೌಡಿಯಂತೆ ನಡೆದುಕೊಂಡಿದ್ದಾಳೆ. ರಸ್ತೆಯಲ್ಲಿ ಹೊಡೆತ ತಾಳಲಾರದೇ ಮಾನಸಿಕ ಅಸ್ವಸ್ಥೆ ಚೀರಾಟ ಮಾಡುತ್ತಿದ್ದರೂ ಕರುಣೆ ಬಾರದೇ ಆ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ. ಇನ್ನು ಘಟನೆ ಕಂಡ ದಾರಿಹೋಕನೊಬ್ಬ ಬಿಡಿಸಲು ಹೋದರೆ ಆತನಿಗೂ ಆ ಮಹಿಳೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ನಿಂತು ನೋಡಿದ ಜನ..! ದುರಂತ, ಅಂದ್ರೆ ಹೀಗೆ ಮಾನಸಿಕ ಅಸ್ವಸ್ಥೆಯ ಮೇಲೆ ಮನಬಂದಂತೆ ಅಟ್ಟಾಡಿಸಿ ಹೊಡೆಯುತ್ತಿದ್ದರೂ ಸಾರ್ವಜನಿಕರು ಮಾತ್ರ ಸಿನಿಮಾ ನೋಡುವಂತೆ ನೋಡಿದ್ದಾರೆ. ಬಿಟ್ಟರೆ ರಕ್ಷಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಆ ಮಾನಸಿಕ ಅಸ್ವಸ್ಥೆಯ ತಪ್ಪು ಅದೇನೇ ಇದ್ದರೂ ಹೀಗೇಲ್ಲ ಸಾರ್ವಜನಿಕ ಸ್ಥಳದಲ್ಲೇ ಅಮಾನುಷವಾಗಿ ಹಲ್ಲೆಮಾಡಿರೋದು ಎಷ್ಟು ಸರಿ..? ಈ ಪ್ರಶ್ನೆ...
ಕೊಪ್ಪದ “ಉತ್ತಮ ಶಿಕ್ಷಕಿ” ಗೆ ಹಳೆಯ ವಿದ್ಯಾರ್ಥಿಗಳು ಹಾಗೂ SDMC ಸದಸ್ಯರಿಂದ ಗೌರವ ಸನ್ಮಾನ..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಗೀತಾ ಪಟಗಾರ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಹೀಗಾಗಿ, ಇಂದು ಕೊಪ್ಪದ ಹಳೆಯ ವಿದ್ಯಾರ್ಥಿಗಳಿಂದ ಹಾಗೂ SDMC ಸದಸ್ಯರುಗಳಿಂದ ಗೌರವ ಸನ್ಮಾನ ಮಾಡಲಾಯಿತು. ಅಂದಹಾಗೆ, 26 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಂದಲಗೇರಿ ಶಾಲೆಯಲ್ಲಿ 9 ವರ್ಷ ಹಾಗೂ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಗೀತಾ ಪಟಗಾರ ಅವರಿಗೆ ಲಭಿಸಿರುವುದರಿಂದ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಗೀತಾ ಪಟಗಾರ ಅವರ ಸೇವೆಯಲ್ಲಿ ಕಲಿತ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಾಗೂ ಶಾಲೆಯ SDMC ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲಾ ಶಿಕ್ಷಕರಿಂದ ಶಾಲು ಹೊದಿಸಿ ಸನ್ಮಾನಿಸಲಾಗಿದೆ. ಹಾಗೂ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ....