ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು.

ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ
ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.

ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ ಗೇಟು, ಸಣ್ಣ ಗೇಟುಗಳು, ಕಬ್ಬಿಣದ ಸಾದಾ ಬೀಮ್ ಗಳು, ಕಬ್ಬಿಣದ ಟ್ರೆಸ್‌ಗಳು, ತಯಾರಿಸುವ ಹಂತದಲ್ಲಿದ್ದ ದೂಡುವ ಗಾಡಿಗಳು, ಕಬ್ಬಿಣದ ಏಣಿಗಳು, ಕಬ್ಬಿಣದ ಲಾಡರಗಳು ಸೇರೊದಂತೆ ಇತರೇ ಕೆಲವು ಕಬ್ಬಿಣದ ಸಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವುಗಳ ಒಟ್ಟೂ ಮೌಲ್ಯ ಸುಮಾರು 1,30,000/- ಆಗಿದೆ ಅಂತಾ ಅಂದಾಜಿಸಲಾಗಿದ್ದು. ಠಾಣೆಗೆ ಸಲ್ಲಿಸಿರೋ ದೂರಿನಲ್ಲಿ ವಿವರಿಸಿದ್ದಾರೆ.

ಮುಂಡಗೋಡ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಕಳ್ಳರ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

error: Content is protected !!