ರಾಜ್ಯದಲ್ಲಿ ಮಹಿಳೆಯರ ಮಾರಾಟ ಜಾಲ ಸಕ್ರೀಯವಾಗಿದೆ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕಳವಳ..!


ಮುಂಡಗೋಡ: ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮಾರಾಟ ಜಾಲ ಸಕ್ರೀಯವಾಗಿದೆ. ನಾವು ಈ ಜಾಲವನ್ನು ಬೇಧಿಸಲು ಸಂಪೂರ್ಣ ಸನ್ನದ್ಧಗೊಳ್ಳುತ್ತೇವೆ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ ಅಂತಾ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ರು.

ಮುಂಡಗೋಡಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಪ್ರಮೀಳಾ ನಾಯ್ಡು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರನ್ನು‌ ಮದುವೆ ನೆಪದಲ್ಲಿ ದೂರದ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಮಾರಾಟ ಮಾಡುವ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ರಾಜ್ಯ ಮಹಿಳಾ ಆಯೋಗ ಈ ಕುರಿತು ಸಾಕಷ್ಟು ಜಾಗ್ರತಾ ಕ್ರಮಗಳನ್ನು ಈಗಾಗಲೇ ಪಡೆದುಕೊಂಡಿದೆ. ಪ್ರತೀ ಜಿಲ್ಲೆಗಳಲ್ಲೂ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮಕ್ಕಳು ಮತ್ತು ಮಹಿಳೆಯರ ಮಾರಾಟ ಮತ್ತು ನಾಪತ್ತೆ ಪ್ರಕರಣಗಳಲ್ಲಿ ಎಷ್ಟು ಬೇಗ ದೂರು ದಾಖಲಾಗತ್ತೋ ಅಷ್ಟು ಬೇಗ ಪತ್ತೆ ಕಾರ್ಯಕ್ಕೆ ಅನಕೂಲವಾಗತ್ತೆ. ಹೀಗಾಗಿ, ಅಂತಹ ಪ್ರಕರಣಗಳಲ್ಲಿ ಕೂಡಲೇ ಪೊಲೀಸ್ ಠಾಣೆಗಳಿಗೆ ದೂರು ನೀಡುವುದು ಮುಖ್ಯ ಅಂದ್ರು. ಪ್ರತೀ ಜಿಲ್ಲೆಗಳಲ್ಲೂ ಈ ಕುರಿತು ಜಾಗ್ರತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಅಂತಾ ತಿಳಿಸಿದ್ರು.

ಪೊಕ್ಸೋ ಹೆಚ್ಚಳದ ಆತಂಕ..!
ಇನ್ನು ಉತ್ತರ‌ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರೋ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ರು. ಕಾರವಾರದ ಜೈಲಿಗೆ ಭೇಟಿ ನೀಡಿದಾಗ ಆ ಒಂದೇ ಜೈಲಿನಲ್ಲಿ ಬರೋಬ್ಬರಿ 40 ಯುವಕರು ಪೊಕ್ಸೋ ಕೇಸ್ ನಲ್ಲಿ ಬಂಧನವಾಗಿದ್ದಾರೆ. ಹೀಗಾಗಿ, ಇದನ್ನೇಲ್ಲ ನೋಡಿದಾಗ ಯುವಕರ ಕ್ಷಣಮಾತ್ರದ ತಪ್ಪು ಹೇಗೇಲ್ಲ ಬದುಕನ್ನೇ ಹಾಳು ಮಾಡತ್ತೆ ಅನ್ನೋದು ಅರ್ಥವಾಗಬೇಕಿದೆ ಅಂದ್ರು. ಇಂದಿನ ಯುವಕರೇ ನಾಳಿನ ನಾಯಕರು ಅನ್ನೋದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕಿದೆ ಅಂತಾ ಪ್ರಮೀಳಾ ನಾಯ್ಡು ತಿಳಿಸಿದ್ರು.

ಮೋರಾರ್ಜಿ “ಶಿಶು” ಕೇಸ್
ಇನ್ನು ಮುಂಡಗೋಡಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದ “ಶಿಶು ಪತ್ತೆ” ಪ್ರಕರಣದಲ್ಲಿ ಅಸಲೀ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೇ ನಾಮಕೆವಾಸ್ತೆ ಎನ್ನುವಂತೆ ಕೆಳಹಂತದ ಅಧಿಕಾರಿಗಳ‌ ಮೇಲೆ ಕ್ರಮ ಕೈಗೊಳ್ಳಲಾಗಿದೆ ಅಂತಾ ಪತ್ರಕರ್ತರು ಅಧ್ಯಕ್ಷರ ಗಮನ ಸೆಳೆದಾಗ, ಕೂಡಲೇ ಆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅಂತಾ ಪ್ರಮೀಳಾ ನಾಯ್ಡು ತಿಳಿಸಿದ್ರು.

ಅಂದಹಾಗೆ, ಸದ್ಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರೋ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಜಿಲ್ಲೆಯ ಹಲವು ತಾಲೂಕಿಗೆ ಭೇಟಿ ನೀಡಿದ್ದಾರೆ. ಇವತ್ತೂ ಕೂಡ ಮುಂಡಗೋಡ ತಾಲೂಕಿಗೆ ಭೇಟಿ ನೀಡಿದ್ದರು.

error: Content is protected !!