ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಹಕ್ಕೊತ್ತಾಯ ಹಿನ್ನಲೆಯಲ್ಲಿ, ಹಾವೇರಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದೆ ಸೆಪ್ಟೆಂಬರ್ 20 ರಂದು ಶಿಗ್ಗಾವಿಯ ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಶಿಗ್ಗಾವಿಯ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ, ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತದೆ. ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ.
ಸದನದ ಒಳಗೆ, ಹೊರಗೆ..!
ಇನ್ನು ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿಗಳಿಗೆ ಸಿಎಂ ದ್ರೋಹ..!
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಹೋರಾಟದ ಕಾಲ ಹರಣ ಮಾಡಿದ್ದಾರೆ. ಸಿಎಂ ಅವರು ಪದೇ ಪದೇ ಮಾತುಕೊಟ್ಟು ತಪ್ಪಿದ್ದಾರೆ. ಸಮಾಜದ ಬಂಧುಗಳಿಗೆ ಮಾತು ಕೊಟ್ಟಂತೆ ನಾವು, ಸತ್ಯಾಗ್ರಹದ ಹಾದಿ ತುಳಿದಿದ್ದೇವೆ. ಪಂಚಮಸಾಲಿ ಸಮಾಜದ ಹೋರಾಟ, ದೇಶಾದ್ಯಂತ ಗಮನ ಸೆಳೆದಿದೆ. ಪಂಚಮಸಾಲಿ ಸಾಲಿ ಸಮಾಜಕ್ಕೆ ಸಿಎಂ ಅವರು ದ್ರೋಹ ಮಾಡಿದ್ದಾರೆ. ಅವರ ಮೇಲಿನ ವಿಶ್ವಾಸಕ್ಕೆ, ನಂಬಿಕೆಗೆ ಸಿಎಂ ಆಘಾತ ಮಾಡಿದ್ದಾರೆ ಅಂತಾ ಶ್ರೀಗಳು ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅ.23 ಕ್ಕೆ ವಿಧಾನಸಭೆಗೆ ಮುತ್ತಿಗೆ..!
ಇಂತಹ ಐತಿಹಾಸಿಕ ಹೋರಾಟಕ್ಕೆ ನಮ್ಮ ಮುಖ್ಯಮಂತ್ರಿಗಳು ಕರಗದಿದ್ದರೇ, ಅಕ್ಟೋಬರ್ 23 ರಂದು 25 ಲಕ್ಷ ಸಮಾಜದ ಬಂಧುಗಳು ವಿಧಾನಸಭೆಗೆ ಮುತ್ತಿಗೆ ಹಾಕುತ್ತೇವೆ. ಅಂದು ಸಮಾಜದ ರಾಜಕೀಯ ನಿರ್ಣಯ ಕೈಗೊಳ್ಳಲಿದ್ದೇವೆ ಅಂತಾ ಘೋಷಿಸಿದ್ರು.
ನಾಳೆ ನಡೆಯುವ ಹೋರಾಟದಲ್ಲಿ 2ಎ ಮೀಸಲಾತಿ ನೀಡಲು ಅಡ್ಡಿಗಾಲು ಹಾಕುವ ನಾಯಕನ ಹೆಸರನ್ನು ಬಹಿರಂಗ ಪಡಿಸಲಾಗುವುದು ಅಂತಾ ಎಚ್ಚರಿಸಿದ್ರು.