ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!

ಧಾರವಾಡ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆದಿದೆ.

ನಮ್ಮ ಹುಡುಗಿಗೆ ಕಾಡಿಸುತ್ತೀರಾ, ಲೈಂಗಿಕ ದೌರ್ಜನ್ಯ ಎಸಗಿದ್ದಿರಾ ಅಂತಾ ಧಿಡೀರ್ ಜಗಳ ತೆಗೆದ ಮೂವರು ಆರೋಪಿಗಳು ಮನೋಜ್ ಕರ್ಜಗಿ ಹಾಗೂ ಅಯಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಮನೋಜ್ ಕರ್ಜಗಿ

ಮನೋಜ್ ಗುಡದೂರ್, ಆನಂದ ತಳವಾರ್, ಹಾಗೂ ಉದಯ್ ಕೆಲಗೇರಿ ಎನ್ನುವ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಚಾಕುವಿನಿಂದ ಅಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಎನ್ನಲಾಗಿದ್ದು, ಸದ್ಯ ಹಲ್ಲೆಗೊಳಗಾದ ಅಯಾನ್ ಮತ್ತು ಮನೋಜ್ ಕರ್ಜಗಿ ಕಿಮ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೋಜ್ ಕರ್ಜಗಿ ಸ್ಪಾ ದಲ್ಲಿದ್ದ ಅಯಾನ್ ಎನ್ನುವ ಯುವಕನಿಂದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!